Advertisement

ಸೌಲಭ್ಯಗಳಿಗೆ ಆಗ್ರಹಿಸಿ ಹೆದ್ದಾರಿ ತಡೆ

09:54 AM Sep 22, 2019 | Suhan S |

ಮುಧೋಳ: ಘಟಪ್ರಭಾ ನದಿಯ ಪ್ರವಾಹದಲ್ಲಿ ಸಿಲುಕಿ ಕಂಗಾಲಾಗಿರುವ ನೆರೆ ಸಂತ್ರಸ್ತರಿಗೆ ಈವರೆಗೂ ನಯಾಪೈಸೆ ಪರಿಹಾರ ದೊರಕಿಲ್ಲ. ಸಂತ್ರಸ್ತರಿಗೆ ಮೂಲಭೂತ ಸೌಲಭ್ಯ ಆಗ್ರಹಿಸಿ ಜೀರಗಾಳ ಗ್ರಾಮಸ್ಥರು ವಿಜಯಪುರ-ಬೆಳಗಾವಿ ರಾಜ್ಯ ಹೆದ್ದಾರಿ ಬಂದ್‌ ಮಾಡಿ ಪ್ರತಿಭಟನೆ ನಡೆಸಿದರು.

Advertisement

ಗ್ರಾಮದ ಮಹಿಳೆಯರು ಹೆದ್ದಾರಿ ಬಂದ್‌ ಮಾಡಿ ರಸ್ತೆ ಮೇಲೆಯೇ ಧರಣಿ ಕುಳಿತು ಪ್ರತಿಭಟಿಸಿದರು. ನೆರೆ ಸಂತ್ರಸ್ತರಾದ ನಾವು ಮನೆ ಮಠ ಜಮೀನು ಕಳೆದುಕೊಂಡು ಬೀದಿಗೆ ಬಿದ್ದು ತಿಂಗಳು ಕಳೆದರೂ ನಮ್ಮ ಗೋಳು ಕೇಳುವವರೇ ಇಲ್ಲ. ಈ ಹಿಂದೆಯೇ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರಿಗೆ ನಮ್ಮ ಅಹವಾಲು ಹೇಳಿಕೊಂಡು ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು.

ತುರ್ತಾಗಿ ಕೊಡುವ 10 ಸಾವಿರ ರೂಪಾಯಿಗಳಾಗಲಿ, ಮನೆ ಕಟ್ಟಿಕೊಳ್ಳುವ ಕಂತಾಗಲಿ, ಕನಿಷ್ಠ ತಗಡಿನ್‌ ಶೆಡ್‌ಗಳನ್ನು ಸಹನಮಗೆ ಒದಗಿಸಿಲ್ಲ. ದನಕರುಗಳು ಸಹ ಮೇವು, ನೆಲೆ ಇಲ್ಲದೆ ಪರದಾಡುತ್ತಿವೆ ಎಂದರು. ನಡುಗಡ್ಡೆಯಂತಾಗಿದ್ದ ಜೀರಗಾಳಗ್ರಾಮಕ್ಕೆ ಸಂಘ ಸಂಸ್ಥೆಗಳಿಂದಾಗಲಿ, ಸರ್ಕಾರದಿಂದ ಆಗಲಿ  ನೆರವು ಸಿಗಲೇ ಇಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು. ದಿಢೀರ್‌ ಪ್ರತಿಭಟನೆಯಿಂದ ಸಂಚಾರ ಸ್ಥಗಿತಗೊಂಡು ಪ್ರಯಾಣಿಕರು ಪರದಾಡಿದರು.

ತಾಪಂ ಅಧ್ಯಕ್ಷ ತಿಮ್ಮಣ್ಣ ಬಟಕುರ್ಕಿ, ಜಿಲ್ಲಾ ಪಂಚಾಯತ ಉಪಾಧ್ಯಕ್ಷ ಮುತ್ತಪ್ಪ ಕೋಮಾರ, ಜಿಲ್ಲಾ ಪಂಚಾಯತ ಸದಸ್ಯೆ ರತ್ನಕ್ಕಾ ತಳೇವಾಡ, ತಹಶೀಲ್ದಾರ್‌ ಸಂಜಯ ಇಂಗಳೆ ಭೇಟಿ ನೀಡಿ ಗ್ರಾಮಸ್ಥರ ಮನವೊಲಿಸಲು ಪ್ರಯತ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next