Advertisement

ಹಳೆಯಂಗಡಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಳಕಿನ ಭಾಗ್ಯ!

12:12 AM Apr 28, 2023 | Team Udayavani |

ಹಳೆಯಂಗಡಿ: ಸುರತ್ಕಲ್‌ನಿಂದ ಕುಂದಾಪುರದ ವರೆಗೆ ರಾಷ್ಟ್ರೀಯ ಹೆದ್ದಾರಿ ಪ್ರಮುಖ ಜಂಕ್ಷನ್‌ಗಳಲ್ಲಿ ಹೈಮಾಸ್ಟ್‌ ದೀಪವನ್ನು ಅಳವಡಿಸಬೇಕೆಂಬ ಸಾರ್ವಜನಿಕರ ಬೇಡಿಕೆಯನ್ನು ಈಡೇರಿಸಲು ಕೊನೆಗೂ ಹೆದ್ದಾರಿಯ ನಿರ್ವಹಣೆ ನಡೆಸುತ್ತಿರುವ ನವಯುಗ ಸಂಸ್ಥೆ ಮುಂದಾಗಿದೆ.

Advertisement

ರಾಷ್ಟ್ರೀಯ ಹೆದ್ದಾರಿಯ ಪ್ರಮುಖ ಪ್ರದೇಶಗಳಾದ ಮುಕ್ಕ, ಹಳೆಯಂಗಡಿ, ಮೂಲ್ಕಿ, ಬಪ್ಪನಾಡು, ಪಡುಬಿದ್ರಿ, ಕಾಪು, ಕಟಪಾಡಿ, ಬಲಾಯಿಪಾದೆ, ಕಿನ್ನಿಮೂಲ್ಕಿ, ಸಂತೆಕಟ್ಟೆ, ಬ್ರಹ್ಮಾವರ, ಕೋಟ, ಸಾಲಿಗ್ರಾಮ, ಕುಂದಾಪುರ ಶಾಸಿŒ ಸರ್ಕಲ್‌ಗ‌ಳಲ್ಲಿ ಬೃಹತ್‌ ಹೈಮಾಸ್ಟ್‌ ದೀಪಗಳನ್ನು ಅಳವಡಿಸುವ ಕಾಮಗಾರಿಗೆ ಚಾಲನೆ ನೀಡಿದೆ.

ಸುಮಾರು 100 ಅಡಿ (33 ಮೀಟರ್‌) ಎತ್ತರದ ಈ ಕಂಬದಲ್ಲಿ ಎಂಟು ದೀಪಗಳು ಪ್ರಜ್ವಲಿಸಲಿವೆ. ಪ್ರತೀ ಒಂದು ದೀಪದ ಗುತ್ಛಕ್ಕೆ ಸುಮಾರು 8 ಲಕ್ಷ ರೂ. ವೆಚ್ಚವಾಗಲಿದೆ ಎಂದು ನವಯುಗ ಸಂಸ್ಥೆಯ ಮೂಲಗಳು ತಿಳಿಸಿವೆ.

ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಯಾದ ಬಳಿಕ ಪ್ರಮುಖ ಜಂಕ್ಷನ್‌ಗಳಲ್ಲಿ ರಸ್ತೆಯ ಅಕ್ಕಪಕ್ಕದ ದಾರಿ ದೀಪಗಳು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದವು. ಇದೀಗ ಈ ಬೃಹತ್‌ ಹೈಮಾಸ್ಟ್‌ ದೀಪ ಗಳಿಂದ ರಾತ್ರಿ ಸಮಯದಲ್ಲಿ ಬೆಳಕಿನ ಭಾಗ್ಯ ಸಿಗಲಿದೆ.

ಈ ಕಾಮಗಾರಿಯ ಜತೆಗೆ ಕೆಲವೊಂದು ಕಡೆಯಲ್ಲಿ ಸರ್ವಿಸ್‌ ರಸ್ತೆ ಹಾಗೂ ರಸ್ತೆ ಅಭಿವೃದ್ಧಿಯಾಗಿ ದಾರಿ ದೀಪವನ್ನು ಅಳವಡಿಸುವ ಕಾಮಗಾರಿ ಕೂಡ ನಡೆಯಲಿದೆ.

Advertisement

ನಾಗರಿಕ ಸಮಿತಿ ಮನವಿ
ಎರಡು ವರ್ಷಗಳ ಹಿಂದೆ ಧರ್ಮದರ್ಶಿ ಡಾ| ಹರಿಕೃಷ್ಣ ಪುನರೂರು ಅವರ ನೇತೃತ್ವದ ಮೂಲ್ಕಿ ನಾಗರಿಕ ಸಮಿತಿಯು ಪ್ರಮುಖ ಜಂಕ್ಷನ್‌ಗಳಲ್ಲಿ ಬೆಳಕಿನ ವ್ಯವಸ್ಥೆ ಕಲ್ಪಿಸುವಂತೆ ವಿಸ್ತೃತವಾದ ಮನವಿಯನ್ನು ಸುಮಾರು 38 ಸಂಘ – ಸಂಸ್ಥೆಗಳ ಸಹಿತ ನಗರ ಪಂಚಾಯತ್‌, ಗ್ರಾ.ಪಂ.ಗಳ ಬೇಡಿಕೆಯ ಶಿಫಾರಸಿನೊಂದಿಗೆ ನವಯುಗ್‌ ಸಂಸ್ಥೆಗೆ ನೀಡಿತ್ತು. ಅಲ್ಲದೇ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಭೇಟಿ ನೀಡಿದ್ದ ನವಯುಗ ಸಂಸ್ಥೆಯ ವಿದ್ಯುತ್‌ ಗುತ್ತಿಗೆದಾರ ಬಾಬು ರೆಡ್ಡಿ ಅವರಲ್ಲಿಯೂ ಮನವಿ ಮಾಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next