Advertisement

ಭಾರತ ಆಕ್ರೋಶ: ನಾಗಾ ಮಾನವ ತಲೆಬುರುಡೆ ಹರಾಜು ವಾಪಸ್‌!

11:35 PM Oct 09, 2024 | Team Udayavani |

ಲಂಡನ್‌: ನಾಗಾಲ್ಯಾಂಡ್‌ನ‌ ಭಾವನಾತ್ಮಕ ಅಂಶಗಳಲ್ಲೊಂದಾದ “ನಾಗಾ ಮಾನವ ತಲೆಬುರುಡೆ’ ಹರಾಜು ಪ್ರಕ್ರಿಯೆಗೆ ಮುಂದಾಗಿದ್ದ ಇಂಗ್ಲೆಂಡ್‌ನ‌ ಹರಾಜು ಸಂಸ್ಥೆ ಕೊನೆಗೂ ತನ್ನ ನಿರ್ಧಾರದಿಂದ ಹಿಂದೆ ಸರಿದಿದೆ.

Advertisement

ಹರಾಜು ನಡೆಗೆ ನಾಗಾಲ್ಯಾಂಡ್‌ ಸಿಎಂ ನೈಫಿಯು ರಿಯೊ ಸೇರಿ ಹಲವರಿಂದ ಭಾರೀ ವಿರೋಧ ವ್ಯಕ್ತವಾಗಿತ್ತು. ಆಕ್ಸ್‌ಫ‌ರ್ಡ್‌ ಶೈನ್ಸ್‌ ಟೆಟ್‌ಸ್ವರ್ತ್‌ ನಲ್ಲಿರುವ ಸ್ವಾನ್‌ ಹರಾಜು ಘಟಕದಲ್ಲಿ ತಲೆ ಬುರುಡೆಗಳ ಸಹಿತ ಹಲವು ವಸ್ತುಗಳ ಹರಾಜಿಗೆ ಚಾಲನೆ ನೀಡಲಾಗಿತ್ತು. ಇದರಲ್ಲಿ “ನಾಗಾ ಮಾನವ ತಲೆಬುರುಡೆ’ ಇತ್ತು.

ವಿದೇಶಾಂಗ ಸಚಿವ ಎಸ್‌ ಜೈಶಂಕರ್‌ಗೆ ಪತ್ರ ಬರೆದಿದ್ದ ರಿಯೊ, ನಮ್ಮ ಸಂಪ್ರದಾಯದಲ್ಲಿ ಮೃತರ ಅವಶೇಷಗಳಿಗೆ ಅತ್ಯುನ್ನತ ಗೌರವ ಇದೆ. ಹೀಗಾಗಿ ಹರಾಜು ತಡೆಗೆ ತಾವು ಮಧ್ಯ ಪ್ರವೇಶಿಸಬೇಕು ಎಂದು ಕೋರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next