2018-19ರ ಬಜೆಟ್‌ನಲ್ಲಿ ಒಟ್ಟು ಗ್ರಾಮೀಣ ಮೂಲಸೌಕರ್ಯ ಮತ್ತು ಜೀವನ ಮಟ್ಟ ಸುಧಾರಣೆಗಾಗಿ 14.34 ಲಕ್ಷ ಕೋಟಿ ರೂ. ಮೀಸಲಿಡಲಾಗಿದೆ. ಈ ಪೈಕಿ ಆಯವ್ಯಯ ಹೊರತಾದ ಮತ್ತು ಹೆಚ್ಚುವರಿ ಆಯವ್ಯಯ ಸಂಪನ್ಮೂಲ 11.98 ಲಕ್ಷ ಕೋಟಿ ರೂ. ಕೂಡ ಒಳಪಟ್ಟಿದೆ. ಇದರಿಂದಾಗಿ 321 ಕೋಟಿ ದಿನದ ಉದ್ಯೋಗ ಅವಕಾಶ ಸೃಷ್ಟಿಯಾಗಲಿದೆ.1.88 ಕೋಟಿ ಶೌಚಾಲಯ ಹಾಗೂ 1.75 ಕೋಟಿ ಮನೆಗಳಿಗೆ ವಿದ್ಯುತ್ ಸೌಕರ್ಯ ಲಭ್ಯವಾಗಲಿದೆ.
Advertisement
ಭೋಗ್ಯ ಕೃಷಿಕರಿಗೆ ಸಾಲಭೂಮಿಯನ್ನು ಭೋಗ್ಯಕ್ಕೆ ಪಡೆದು ಬೇಸಾಯ ಮಾಡುವವರಿಗೆ ಸದ್ಯ ಸಾಲ ಸೌಲಭ್ಯ ಸಿಗುತ್ತಿಲ್ಲ. ಹೀಗಾಗಿ ಭಾರೀ ಪ್ರಮಾಣದಲ್ಲಿ ನೀರಾವರಿ ಲಭ್ಯ ಭೂಮಿ ಖಾಲಿ ಇರುತ್ತಿದೆ. ಹೀಗಾಗಿ ರಾಜ್ಯ ಸರಕಾರಗಳ ಸಹಭಾಗಿತ್ವದಲ್ಲಿ ನೀತಿ ಆಯೋಗವು ಇದಕ್ಕೆ ಸೂಕ್ತ ಯೋಜನೆಯನ್ನು ರೂಪಿಸಲಿದ್ದು, ಭೂ ಮಾಲಕರ ಹಕ್ಕಿಗೆ ಚ್ಯುತಿ ಬರದಂತೆ ಭೋಗ್ಯದಾತರಿಗೂ ಸಾಲ ನೀಡಲಾಗುತ್ತದೆ.
ಸೌರಶಕ್ತಿ ಚಾಲಿತ ಪಂಪ್‌ಗಳ ಬಳಕೆ ಹೆಚ್ಚುತ್ತಿರುವುದರಿಂದ ಈ ಪಂಪ್‌ಗಳಿಂದ ಉತ್ಪನ್ನವಾದ ಹೆಚ್ಚುವರಿ ವಿದ್ಯುತ್ತನ್ನು ಸರಕಾರಗಳು ಖರೀದಿ ಮಾಡುವ ಬಗ್ಗೆ ನೀತಿ ರೂಪಿಸುವಂತೆ ರಾಜ್ಯ ಸರಕಾರಗಳಿಗೆ ಸೂಚಿಸಲಾಗುತ್ತದೆ ಎಂದು ಜೇಟ್ಲಿ ಹೇಳಿದ್ದಾರೆ. ಈ ವಿದ್ಯುತ್ತನ್ನು ರಾಜ್ಯದ ವಿದ್ಯುತ್ ವಿತರಣೆ ಕಂಪೆನಿಗಳು ನಿಗದಿತ ದರದಲ್ಲಿ ಖರೀದಿಸಬಹುದಾಗಿದೆ. ಇದರಿಂದ ರೈತರಿಗೆ ಪರ್ಯಾಯ ಆದಾಯ ಸೃಷ್ಟಿಯಾಗಲಿದೆ. ಕಂಪೆನಿಗಳಿಗೆ ತೆರಿಗೆ ವಿನಾಯಿತಿ
ಕೃಷಿ ಸಂಬಂಧ ಚಟುವಟಿಕೆಗಳಿಗೆ ನೆರವಾಗುವ ಸಹಕಾರಿ ಸಂಘಗಳ ಲಾಭದಲ್ಲಿ ಶೇ. 100 ರಷ್ಟು ತೆರಿಗೆ ವಿನಾಯಿತಿಯನ್ನು ಘೋಷಿಸಲಾಗಿದೆ. ಅಲ್ಲದೆ ಸಹಕಾರ ಸಂಘಗಳ ರೀತಿಯಲ್ಲೇ ಹಲವು ಖಾಸಗಿ ಕಂಪೆನಿಗಳೂ ಹುಟ್ಟಿಕೊಂಡಿದ್ದು, ಇವು ಕೃಷಿಕರಿಗೆ ಕಟಾವು ಅನಂತರದ ಚಟುವಟಿಕೆಗಳಲ್ಲಿ ಸಹಕಾರ ಒದಗಿಸುತ್ತಿವೆ. 100 ಕೋಟಿ ರೂ.ವರೆಗಿನ ವಹಿವಾಟು ಹೊಂದಿರುವ ಇಂತಹ ಕಂಪೆನಿಗಳು ಗಳಿಸಿದ ಲಾಭದಲ್ಲಿ ಐದು ವರ್ಷಗಳವರೆಗೆ ತೆರಿಗೆ ವಿನಾಯಿತಿ ಘೋಷಿಸಲಾಗಿದೆ.
Related Articles
Advertisement
ಮೊಬೈಲ್, ಟಿವಿ ದುಬಾರಿದೇಶೀಯ ಸ್ಮಾರ್ಟ್ ಫೋನ್ ತಯಾರಿಕೆದಾರರು, ಟಿವಿ ತಯಾರಿಕೆದಾರರಿಗೆ ಪ್ರೇರಣೆ ನೀಡುವ ಸಂಬಂಧ ಬಿಡಿಭಾಗಗಳ ಮೇಲಿನ ಆಮದು ಸುಂಕವನ್ನು ಹೆಚ್ಚಿಸ ಲಾಗಿದೆ. ಇದು ನೇರವಾಗಿ ಮೊಬೈಲ್ ಕಂಪೆನಿಗಳಿಗೆ ಹೊಡೆತ ನೀಡುವ ಸಾಧ್ಯತೆ ಇದೆ. ವಿಶೇಷವಾಗಿ ಭಾರತದಿಂದ ಹೊರಗೆ ಮೊಬೈಲ್ ತಯಾರಿಸುವ, ಬಿಡಿಭಾಗಗಳನ್ನು ಆಮದು ಮಾಡುವ ಕಂಪೆನಿಗಳಿಗೆ ಹೊಡೆತ ನೀಡಲಿದ್ದು, ಮೊಬೈಲ್‌ಗಳ ಬೆಲೆ ಏರಿಕೆಯಾಗಲಿದೆ. ಮೊಬೈಲ್ ಫೋನ್ ಬಿಡಿಭಾಗಗಳ ಮೇಲಿನ ಆಮದು ಸುಂಕವನ್ನು ಶೇ.15ರಿಂದ ಶೇ.20ಕ್ಕೆ ಏರಿಕೆ ಮಾಡಲಾಗಿದೆ. ಹಾಗೆಯೇ ಟಿವಿ ಬಿಡಿಭಾಗಗಳ ಆಮದು ಸುಂಕವನ್ನು ಶೇ.15ಕ್ಕೆ ನಿಗದಿ ಮಾಡಲಾಗಿದೆ. ಮೇಕ್ ಇನ್ ಇಂಡಿಯಾಕ್ಕೆ ಒತ್ತು ನೀಡುವ ಸಂಬಂಧ ಈ ಕ್ರಮ ಕೈಗೊಳ್ಳಲಾಗಿದೆ. ಸಮಾಜ ಕಲ್ಯಾಣ ಸರ್ಚಾರ್ಜ್
ಸೆಸ್ ಕೊಡಬೇಕಾ ಎಂದು ಪ್ರಶ್ನೆ ಮಾಡುವವರಿಗೆ ಸಂತಸದ ಸುದ್ದಿ ಇದೆ. ಮುಂದಿನ ಸಾಲಿನಿಂದ ಶಿಕ್ಷಣ, ಸೆಕೆಂಡರಿ ಮತ್ತು ಉನ್ನತ ಶಿಕ್ಷಣ ಸೆಸ್ ಅನ್ನು ನೀಡಬೇಕಾದ ಅಗತ್ಯವಿಲ್ಲ. ಬಜೆಟ್‌ನಲ್ಲಿ ಅದನ್ನು ತೆಗೆದು ಹಾಕುವ ಘೋಷಣೆ ಮಾಡಲಾಗಿದೆ. ಆದರೆ ಅವುಗಳೆಲ್ಲವನ್ನೂ ಒಟ್ಟುಗೂಡಿಸಿ ಸಾಮಾಜಿಕ ಕಲ್ಯಾಣ ಸರ್ಚಾರ್ಜ್ (ಸೋಶಿಯಲ್ ವೆಲ್ಫೆàರ್ ಸರ್ಚಾರ್ಜ್) ಜಾರಿಗೊಳಿಸಲು ನಿರ್ಧರಿಸಲಾಗಿದೆ. ಆಮದು ಮಾಡಲಾಗುವ ವಸ್ತುಗಳ ಒಟ್ಟು ಕಸ್ಟಮ್ಸ್ ಸುಂಕದ ಶೇ.10ರಷ್ಟು ಮೊತ್ತವನ್ನು ಹೊಸ ಸರ್ಚಾರ್ಜ್ ಆಗಿ ವಿಧಿಸಲಾಗುತ್ತದೆ. ಈ ಮೂಲಕ ಕೇಂದ್ರ ಸರಕಾರ ಜಾರಿಗೊಳಿಸುವ ಸಮಾಜ ಕಲ್ಯಾಣ ಯೋಜನೆಗಳಿಗೆ ಹಣಕಾಸಿನ ಮೂಲವನ್ನು ಕಂಡುಕೊಳ್ಳುವ ಪ್ರಯತ್ನ ಮಾಡಲಾಗಿದೆ. ಬಂಡವಾಳ ತೆರಿಗೆ ಇಲ್ಲ
ಅಂತಾರಾಷ್ಟ್ರೀಯ ಹಣಕಾಸು ಸೇವೆಗಳ ಕೇಂದ್ರ (ಐಎಫ್ಎಸ್‌ಸಿ)ಯಲ್ಲಿರುವ ಷೇರು ಮಾರುಕಟ್ಟೆಯಲ್ಲಿ ವಹಿವಾಟನ್ನು ಹೆಚ್ಚಿಸುವ ಉದ್ದೇಶದಿಂದ ಐಎಫ್ಎಸ್‌ಸಿಯಲ್ಲಿ ಮತ್ತೆರಡು ರಿಯಾಯಿತಿಗಳನ್ನು ಘೋಷಣೆ ಮಾಡಲಾಗಿದೆ. ಅದರಂತೆ ಡಿರೈವೇಟಿವ್ಸ್ ಮತ್ತು ಕೆಲವು ಸೆಕ್ಯುರಿಟಿಗಳ ವರ್ಗಾವಣೆಗೆ ಅನಿವಾಸಿಗಳಿಗೆ ಬಂಡವಾಳ ಲಾಭ ತೆರಿಗೆಯಿಂದ ವಿನಾಯಿತಿ ನೀಡಲಾಗಿದೆ. ಐಎಫ್ಎಸ್‌ಸಿಯಲ್ಲಿರುವ ಕಾರ್ಪೊರೆಟ್‌ಯೇತರ ತೆರಿಗೆದಾರರಿಗೆ ಪರ್ಯಾಯ ಕನಿಷ್ಠ ತೆರಿಗೆ (ಎಎಂಟಿ)ಯನ್ನು ಕಾರ್ಪೊರೆಟ್‌ಗಳಿಗೆ ವಿಧಿಸುವ ಕನಿಷ್ಠ ಪರ್ಯಾಯ ತೆರಿಗೆಯಷ್ಟೇ ವಿನಾಯಿತಿ ದರ ಶೇ.9ನ್ನು ವಿಧಿಸಲಾಗುವುದು. ಇನ್ನು ದೇಶದಲ್ಲೂ ಅಂತಾರಾಷ್ಟ್ರೀಯ ಹಣಕಾಸು ಸೇವಾ ಕೇಂದ್ರ ಸ್ಥಾಪನೆಗೆ ಕೇಂದ್ರ ಸರಕಾರ ಉದ್ದೇಶಿಸಿದೆ. ಆಹಾರ ಸಂಸ್ಕರಣೆಗೆ 1400 ಕೋಟಿ
ಆಹಾರ ಸಂಸ್ಕರಣೆಗೆ ಈ ಬಾರಿ ದುಪ್ಪಟ್ಟು ಹಣ ನಿಗದಿಸಲಾಗಿದೆ. ಕೃಷಿ ಸಂಪದ ಯೋಜನೆ ಅಡಿಯಲ್ಲಿ 2017-18ರಲ್ಲಿ 700 ಕೋಟಿ ಮೀಸಲಿಡಲಾಗಿತ್ತು. ಈ 2018-19ರ ವಿತ್ತ ವರ್ಷದಲ್ಲಿ 1400 ಕೋಟಿ ರೂ.ಮೀಸಲಿಡಲಾಗಿದೆ. ಆಹಾರ ತಪಾಸಣೆ ಕೇಂದ್ರ ಸ್ಥಾಪನೆ
ಆಹಾರಗಳ ರಫ್ತು ಉತ್ತೇಜನಕ್ಕಾಗಿ ದೇಶದ 42 ಮೆಗಾ ಫುಡ್ ಪಾರ್ಕ್‌ಗಳಲ್ಲಿ ಅತ್ಯಾಧುನಿಕ ಪರೀಕ್ಷಾ ಘಟಕಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ. ಭಾರತದ ರಫ್ತು ಸಾಮರ್ಥ್ಯ 1,000 ಕೋಟಿ ಡಾಲರ್ ಆಗಿದ್ದು, ಸದ್ಯ 3,000 ಕೋಟಿ ಡಾಲರ್ ಮೌಲ್ಯದ ಉತ್ಪನ್ನಗಳು ರಫ್ತಾಗುತ್ತಿವೆ. ಕೃಷಿ ಸಾಲಕ್ಕೆ 11 ಲಕ್ಷ ಕೋಟಿ ರೂ.
ಕೃಷಿ ಸಾಲಕ್ಕಾಗಿ ಈ ಬಾರಿ ಕಳೆದ ವರ್ಷಕ್ಕಿಂತ 1 ಲಕ್ಷ ಕೋಟಿ ರೂ. ಹೆಚ್ಚುವರಿ ಹಣಕಾಸು ಮೀಸಲಿಡಲಾಗಿದೆ. 2017-18ರಲ್ಲಿ 10 ಲಕ್ಷ ಕೋಟಿ ರೂ. ಮೀಸಲಿಡಲಾಗಿತ್ತು. ಈ ಬಾರಿ ಈ ಮೊತ್ತ 11 ಲಕ್ಷ ಕೋಟಿ ರೂ.ಗೆ ಏರಿಕೆ. ಮೀನುಗಾರರಿಗೆ ಕ್ರೆಡಿಟ್ ಕಾರ್ಡ್
ಪ್ರಸ್ತುತ ಕೃಷಿಕರಿಗೆ ನೀಡಲಾಗುತ್ತಿರುವ ಕಿಸಾನ್ ಕ್ರೆಡಿಟ್ ಕಾರ್ಡ್‌ಗಳನ್ನು ಮೀನುಗಾರರು ಮತ್ತು ಹೈನುಗಾರಿಕೆಯಲ್ಲಿ ತೊಡಗಿಕೊಂಡವರಿಗೂ ಒದಗಿಸಲಾಗುತ್ತದೆ. ಇದರಿಂದ ಸಣ್ಣ ಕೃಷಿಕರಿಗೆ ಅನುಕೂಲವಾಗಲಿದೆ.