ಬೆಂಗಳೂರು: ಕೆಲಸ ಅರಸಿ ಬೆಂಗಳೂರಿಗೆ ಬಂದಿದ್ದ ಯುವತಿಯನ್ನು ವೇಶ್ಯಾವಾಟಿಕೆ ದಂಧೆಗೆ ದೂಡಿದ್ದಲ್ಲದೆ, ಆಕೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಮಹಿಳೆ ಸೇರಿ ಮೂವರು ಆರೋಪಿಗಳನ್ನು ಹೈಗ್ರೌಂಡ್ಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ರಾಜಾಜಿನಗರ ನಿವಾಸಿ ಲಕ್ಷ್ಮೀ ಅಲಿಯಾಸ್ ಸಂಗೀತ ಪ್ರಿಯಾ ಅಲಿಯಾಸ್ ಮಂಜುಳಾ(36) ಮತ್ತು ಆಕೆಯ ಸಹಚರ ಬ್ರಹ್ಮೇಂದ್ರ ರಾವಣ್(26) ಹಾಗೂ ದಂಧೆ ನಡೆಸುತ್ತಿದ್ದ ಹೋಟೆಲ್ ಮಾಲೀಕ ಸಂತೋಷ್(40) ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕು ಮೂಲದ ಸಂತ್ರಸ್ತೆ ಕೆಲ ತಿಂಗಳ ಹಿಂದೆ ಕೆಲಸ ಅರಸಿ ಬೆಂಗಳೂರಿಗೆ ಬಂದಿದ್ದರು. ಈ ವೇಳೆ ಲಕ್ಷ್ಮೀ, ತಾನು ವುಮೆನ್ಸ್ ರೈಟ್ಸ್ ಎಂಬ ಪತ್ರಿಕೆ ವರದಿಗಾರ್ತಿ ಎಂದು ಪರಿಚಿಯಸಿಕೊಂಡಿದ್ದಾಳೆ. ಬಳಿಕ ಸಂತ್ರಸ್ತೆ ಸಮಸ್ಯೆ ಗಳನ್ನು ಹೇಳಿಕೊಂಡಾಗ, ಎಲ್ಲವನ್ನು ಪರಿಹಾರ ಮಾಡುತ್ತೇ ನೆಂದು ನಂಬಿಸಿ ರಾಜಾಜಿನಗರದಲ್ಲಿರುವ “ನವಭಾರತ’ ಸಂಸ್ಥೆಯ ಕಚೇರಿಗೆ ಕರೆಸಿಕೊಂಡು, ಅಲ್ಲಿಯೇ ಆಶ್ರಯಕ್ಕೆ ಅವಕಾಶ ನೀಡಿದ್ದಳು.
ಇದನ್ನೂ ಓದಿ: ಬಾಬರ್ ಅಜಂ ಕ್ರಿಕೆಟ್ ನ ರೊನಾಲ್ಡೊ-ಮೆಸ್ಸಿ ಇದ್ದಂತೆ: ಶದಾಬ್ ಖಾನ್
ಆ.14ರಂದು ಶಿವಾನಂದ ವೃತ್ತದ ಬಳಿಯಿರುವ ಸಾಯಿ ಆರ್ಕೇಡ್ ಓಯೋ ಲಾಡ್ಜ್ ಗೆ ಸಂತ್ರಸ್ತೆಯನ್ನು ಕರೆದೊಯ್ದು, ಆಕೆ ಬಳಿಯಿದ್ದ ಹಣ ಕಸಿದುಕೊಂಡಿ ದ್ದಾಳೆ. ಬಳಿಕ ಬ್ರಹ್ಮೇಂದ್ರ ರಾವಣ್ ಕರೆತರುವ ಗ್ರಾಹಕರ ಜತೆ ಲೈಂಗಿಕ ಸಂಪರ್ಕ ಬೆಳೆಸುವಂತೆ ಒತ್ತಾಯಿಸಿ, ವೇಶ್ಯಾವಾಟಿಕೆ ದಂಧೆಗೆ ನೂಕ್ಕಿದ್ದರು. ನಂತರ ಮೆಜೆಸ್ಟಿಕ್ ಬಳಿಯ ಬಾಲಾಜಿ ಲಾಡ್ಜ್, ಅಲಂಕಾರ್ ಗೆಸ್ಟ್‌ಹೌಸ್ ಮತ್ತು ಆನಂದ್‌ರಾವ್ ವೃತ್ತದಲ್ಲಿರುವ ದುರ್ಗಾ ಲಾಡ್ಜ್ಗೆ ಕರೆದೊಯ್ದು ದಂಧೆ ನಡೆಸುತ್ತಿದ್ದರು. ಗ್ರಾಹಕರಿಂದ ಪಡೆದ ಹಣವನ್ನು ಸಂತ್ರಸ್ತೆ ಕೊಡದೆ ಆರೋಪಿಗಳೇ ಪಡೆದು ಬಲವಂತದಿಂದ ವೇಶ್ಯಾವಾಟಿಕೆಯಲ್ಲಿ ತೊಡಗು ವಂತೆ ಬೆದರಿಸುತ್ತಿದ್ದರು. ಅದನ್ನು ಪ್ರಶ್ನಿಸಿದ ಸಂತ್ರ ಸ್ತೆಯ ಸ್ನೇಹಿತನಿಗೂ ಆರೋಪಿ ಬ್ರಹ್ಮೇಂದ್ರ ರಾವಣ್ ಹಲ್ಲೆ ನಡೆಸಿದ್ದಾನೆ. ಅಲ್ಲದೆ, ದೈಹಿಕವಾಗಿ ಸಾಧ್ಯವಿಲ್ಲ ಎಂದರೂ ಒಮ್ಮೆಗೆ 2-3 ಮಂದಿ ಗ್ರಾಹಕರನ್ನು ಕಳುಹಿಸಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಸಂತ್ರಸ್ತೆ ದೂರಿನಲ್ಲಿ ಆರೋಪಿಸಿದ್ದಾರೆ.
ಹೀಗಾಗಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ರೌಡಿಶೀಟರ್‌ಗಳ ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದರು.
ಯುವತಿ ಮೇಲೆ ಹಲ್ಲೆ :
ಪೊಲೀಸರ ವಿಚಾರಣೆಯಲ್ಲಿ ಸಂತ್ರಸ್ತೆ ಆರೋಪಿಗಳ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಲಕ್ಷ್ಮೀ ಅಲಿಯಾಸ್ ಮಂಜುಳಾ ಮತ್ತು ಬ್ರಹ್ಮೇಂದ್ರ ರಾವಣ್ ಕರೆತರುತ್ತಿದ್ದ. ಕೆಲ ರೌಡಿಶೀಟರ್‌ಗಳು ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ. ಇತ್ತೀಚೆಗೆ ಒಬ್ಬ ರೌಡಿಶೀಟರ್ ಹಾಗೂ ಆತನ ನಾಲ್ವರು ಸಹಚರರು ಸಾಮೂಹಿಕವಾಗಿ ಅತ್ಯಾಚಾರ ಎಸಗಿ ವಿಕೃತಿ ಮೆರೆದಿದ್ದಾರೆ. ದೈಹಿಕವಾಗಿ ಸಹಕರಿಸಲು ಸಾಧ್ಯವಾಗುತ್ತಿಲ್ಲ ಎಂದು ಕೇಳಿಕೊಂಡರೂ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಸಹಕಾರ ನೀಡದಕ್ಕೆ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಹೇಳಿಕೆ ನೀಡಿದ್ದಾಳೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.