Advertisement

ಗರಿಷ್ಠ ಸಿಕ್ಸರ್‌: ರೋಹಿತ್‌ ಶರ್ಮ ವಿಶ್ವದಾಖಲೆ

02:47 AM Aug 05, 2019 | Sriram |

ಲಾಡರ್‌ಹಿಲ್‌: ರೋಹಿತ್‌ ಶರ್ಮ ಅಂತಾರಾಷ್ಟ್ರೀಯ ಟಿ20ಯಲ್ಲಿ ಗರಿಷ್ಠ ಸಿಕ್ಸರ್‌ ಬಾರಿಸಿದ ವಿಶ್ವದಾಖಲೆ ನಿರ್ಮಿಸಿದರು. ವೆಸ್ಟ್‌ ಇಂಡೀಸ್‌ ಎದುರಿನ ದ್ವಿತೀಯ ಟಿ20 ಪಂದ್ಯದ ವೇಳೆ ರೋಹಿತ್‌ ಈ ಸಾಧನೆಗೈದರು. ಇದರೊಂದಿಗೆ ಕ್ರಿಸ್‌ ಗೇಲ್‌ ಅವರ 105 ಸಿಕ್ಸರ್‌ಗಳ ದಾಖಲೆ ಪತನಗೊಂಡಿತು. ಸದ್ಯ ರೋಹಿತ್‌ ಸಿಡಿಸಿದ ಸಿಕ್ಸರ್‌ಗಳ ಸಂಖ್ಯೆ 107.

Advertisement

ಗರಿಷ್ಠ ಸಿಕ್ಸರ್‌ ಸರದಾರ ಎಂಬ ದಾಖಲೆ ನಿರ್ಮಿಸಿದ ರೋಹಿತ್‌, ಟಿ20ಯ ಗರಿಷ್ಠ ರನ್‌ ಸಾಧಕ ಎಂಬ ವಿಶ್ವದಾಖಲೆಯನ್ನೂ ಹೊಂದಿದ್ದಾರೆ. ಸದ್ಯ ರೋಹಿತ್‌ ರನ್‌ ಗಳಿಕೆ 2,422ಕ್ಕೆ ಏರಿದೆ.

Advertisement

Udayavani is now on Telegram. Click here to join our channel and stay updated with the latest news.

Next