Advertisement

ಅಧಿಕ ಶಿಶು ಮರಣ: ಭಾರತಕ್ಕೆ 12ನೇ ಸ್ಥಾನ

09:53 AM Feb 21, 2018 | |

ಹೊಸದಿಲ್ಲಿ: ಅತ್ಯಧಿಕ ಶಿಶು ಮರಣ ಪ್ರಮಾಣ ಇರುವಂಥ ಕೆಳ ಮಧ್ಯಮ ಆದಾಯ ಹೊಂದಿರುವ 52 ದೇಶಗಳ ಪೈಕಿ ಭಾರತ 12ನೇ ಸ್ಥಾನ ಪಡೆದಿದೆ. 2016ರಲ್ಲಿ ಭಾರತದಲ್ಲಿ, ಜನಿಸಿದ ಒಂದು ತಿಂಗಳ ಒಳಗೆ ಮೃತಪಟ್ಟ ಮಕ್ಕಳ ಸಂಖ್ಯೆ 6 ಲಕ್ಷಕ್ಕೂ ಹೆಚ್ಚು ಎಂದು ಯುನಿಸೆಫ್ ತಿಳಿಸಿದೆ.

Advertisement

2016ರಲ್ಲಿ ಜನಿಸಿದ 1,000 ಶಿಶುಗಳಲ್ಲಿ 25 ಶಿಶುಗಳು ಅಸುನೀಗಿವೆ. ಭಾರತವು ಈ ವಿಚಾರದಲ್ಲಿ ಶ್ರೀಲಂಕಾ, ಬಾಂಗ್ಲಾ, ನೇಪಾಳ, ಭೂತಾನ್‌ಗಿಂತಲೂ ಕೆಳಗಿದೆ ಎಂದು ವರದಿ ಹೇಳಿದೆ. ಜತೆಗೆ, ಬಹುತೇಕ ಶಿಶು ಮರಣಗಳನ್ನು ಪ್ರಯತ್ನಪಟ್ಟರೆ ತಡೆಯಬಹುದಾಗಿದೆ ಎಂದು ಯುನಿಸೆಫ್ ಹೇಳಿದೆ. ಆದರೆ, 2016ರಲ್ಲಿ ಭಾರತ ದಲ್ಲಿ 5 ವರ್ಷ ಒಳಗಿನ ಮಕ್ಕಳ ಮರಣ ಪ್ರಮಾಣ ಭಾರೀ ಸಂಖ್ಯೆಯಲ್ಲಿ ಕಡಿಮೆಯಾಗಿದೆ ಎಂದಿದೆ. 

Advertisement

Udayavani is now on Telegram. Click here to join our channel and stay updated with the latest news.

Next