Advertisement

ನಾಟಿ ಪದ್ಧತಿ ತಂತ್ರಜ್ಞಾನದಿಂದ ತೊಗರಿ ಅಧಿಕ ಇಳುವರಿ

10:26 AM Jul 07, 2017 | |

ವಿಜಯಪುರ:  ಸಾಂಪ್ರದಾಯಿಕ ತೊಗರಿ ಬೆಳೆ ಪದ್ಧತಿಗೆ ಬದಲಾಗಿ ಇದೀಗ ತೊಗರಿ ನಾಟಿ ಪದ್ಧತಿ ಆಧರಿಸಿ ಕೃಷಿ ಇಲಾಖೆ ವಿನೂತನ
ವಿಧಾನ ಪರಿಚಯಿಸುತ್ತಿದ್ದು, ರೈತರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕೃಷಿ ಸಚಿವ ಕೃಷ್ಣ ಭೈರೇಗೌಡ ಹೇಳಿದರು.

Advertisement

ಗುರುವಾರ ಟಥರ್ಗಾ ಗ್ರಾಮದಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಅಭಿಯಾನದಡಿಯಲ್ಲಿ ನಾಟಿ ಪದ್ಧತಿ ಆಧರಿಸಿ ತೊಗರಿ ಬೆಳೆದ ಬೆಳೆಯುವ ವಿನೂತನ ಪ್ರಯೋಗ ಕೈ ಯಂತ್ರದಿಂದ ಅಥರ್ಗಾದ  ಪೀರಪ್ಪ ಗುಳಗಿ ಅವರ ಜಮೀನಿನಲ್ಲಿ ತೊಗರಿ ನಾಟಿ ಪದ್ಧತಿಯ ವೀಕ್ಷಿಸಿ, ಸುಲಭ ನಾಟಿ ಯಂತ್ರದ ಮೂಲಕ ತೊಗರಿ ಸಸಿ ನಾಟಿ ಮಾತನಾಡಿದ ಅವರು, ನೂತನ ರೈತರ ಪಾಲಿಗೆ ವರದಾನವಾಗಿದೆ ಎಂದರು.

ಈ ತಂತ್ರಜ್ಞಾನ ಅಳವಡಿಸಿಕೊಂಡ ರೈತ ಪೀರಪ್ಪ ಗುಳಗಿ ರೈತ 5 ಎಕರೆ ಜಮೀನನಲ್ಲಿ ಟಿಎಸ್‌-3 ತಳಿಯ 6-3 ಅಡಿ ಅಂತರದಲ್ಲಿ
ನಾಟಿ ಮಾಡಿ ಅಧಿ ಕ ಇಳುವರಿ ಪಡೆದಿರುವುದು ಕಣ್ಣಮುಂದಿನ ಜೀವಂತ ಸಾಕ್ಷಿ. ಸದರಿ ಸುಲಭ ನಾಟಿ ಯಂತ್ರದಿಂದ ನಾಟಿ ಮಾಡುವ ಜೊತೆಗೆ ಕಡಿಮೆ ಗುಣಮಟ್ಟದ ಬೀಜಗಳಿಂದಾಗಿ ಬೆಳೆ ಅಪಾರ ಪ್ರಮಾಣ ಬೀಜಗಳೂ ನಾಶವಾಗುವುದನ್ನು ತಡೆಯಲು ನೆರವಾಗಲಿದೆ ಎಂದರು. ನಾಟಿ ಪದ್ಧತಿಯಲ್ಲಿ ನಾಟಿಕೆ ಮುನ್ನವೇ ವಿಶೇಷ ಟ್ರೇಗಳಲ್ಲಿ ಸಸಿಗಳನ್ನು ಬೆಳೆಸುವ ಕಾರಣ ಗುಣಮಟ್ಟದ ಸಸಿಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಅಲ್ಲದೇ ಕೃಷಿಯಲ್ಲಿ ಹನಿ ನೀರಾವರಿ ಮಾಡಿಕೊಂಡು ಕಡಿಮೆ ನೀರಿದ್ದರೂ ಮಿತವಾದ ನೀರಿನ ಬಳಕೆ ಮಾಡಿಕೊಂಡು ಮಾದರಿ ಕೆಲಸ ಮಾಡಿರುವುದು ರೈತರಿಗೆ ವರದಾನವಾಗಿದೆ. ಹೀಗಾಗಿ ರೈತರು ತೊಂದರೆ
ಎದುರಿಸುವ ಪ್ರಶ್ನೆಯೇ ಇಲ್ಲ ಎಂದು ವಿನೂತನ ಪದ್ಧತಿ ಅಳವಡಿಸಿಕೊಂಡು ಅಭಿವೃದ್ಧಿ ಸಾಧಿಸಿ ಎಂದರು.

ಸಾಂಪ್ರದಾಯಿಕ ವಿಧಾನದಲ್ಲಿ ಪ್ರತಿ ಎಕರೆಗೆ 5-10 ಸಾವಿರ ಕ್ವಿಂಟಾಲ್‌ ಇಳುವರಿ ಬರಲಿದ್ದು, ಆಧುನಿಕ ನಾಟಿ ಪದ್ಧತಿಯಿಂದ 20-25
ಸಾವಿರ ಕ್ವಿಂಟಲ್‌ ಇಳುವರಿ ಬರಲಿದೆ. ಅಲ್ಲದೇ ಕಡಿಮೆ ಸಮಯ, ಸರಳ ವಿಧಾನ, ಕಡಿಮೆ ಮಾನವ ಸಂಪನ್ಮೂಲ ಬಳಕೆಯಾಗಿ ಅ ಕ
ವೆಚ್ಚಕ್ಕೂ ಕಡಿವಾಣ ಬೀಳಲಿದೆ ಎಂದು ವಿವರಿಸಿದರು.

ತೊಗರಿ ಬೆಳೆ ನಾಟಿಯ ನೂತನ ತಂತ್ರಜ್ಞಾನ ಪ್ರೋತ್ಸಾಹಿಸಲು ಸರ್ಕಾರ ಪ್ರತಿ ಹೆಕ್ಟೇರ್‌ 2500 ರೂ. ಪ್ರೋತ್ಸಾಹ ಧನ ನೀಡಲು ಮುಂದಾಗಿದೆ. ನಾಟಿಗೆ ಅಗತ್ಯವಾದ ಯಂತ್ರಗಳ ಖರೀದಿಗೂ ರಿಯಾಯ್ತಿ ನೀಡಲಿದೆ. ರೈತರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು. ಇಂಡಿ ಶಾಸಕ ಯಶವಂತರಾಯಗೌಡ  ಪಾಟೀಲ, ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ, ಜಂಟಿ ಕೃಷಿ ನಿರ್ದೇಶಕ ಮಂಜುನಾಥ, ಉಪ ನಿರ್ದೇಶಕ ವಿಲಿಯಂ ರಾಜಶೇಖರ ಸೇರಿದಂತೆ ಇತರರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next