Advertisement

ಹೈವೋಲ್ಟೆಜ್ “ಭರಾಟೆ’ಟೀಸರ್ ಬಂತು: Watch

03:02 PM Dec 18, 2018 | |

ರೋರಿಂಗ್ ಸ್ಟಾರ್ ಶ್ರೀಮುರಳಿ ಹಾಗೂ “ಕಿಸ್’ ಶ್ರೀಲೀಲಾ ಅಭಿನಯಿಸುತ್ತಿರುವ “ಭರಾಟೆ’ ಚಿತ್ರದ ಟೀಸರ್​​ ನಿನ್ನೆಯಷ್ಟೇ ಬಿಡುಗಡೆಯಾಗಿದ್ದು, ಯೂಟ್ಯೂಬ್ ಟ್ರೆಂಡಿಂಗ್‍ನಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಶ್ರೀ ಮುರಳಿ ನಿನ್ನೆಯಷ್ಟೇ 37ನೇ ವಸಂತಕ್ಕೆ ಕಾಲಿಟ್ಟಿದ್ದು, ಅದೇ ವೇಳೆ ಸ್ಯಾಂಡಲ್​ವುಡ್‍ನ​​ ಚಾಲೆಂಜಿಂಗ್​​ ಸ್ಟಾರ್​​ ದರ್ಶನ್​​ “ಭರಾಟೆ’ ಸಿನಿಮಾದ ಟೀಸರ್​​ ಲಾಂಚ್​​ ಮಾಡಿ ಚಿತ್ರತಂಡಕ್ಕೆ ಶುಭಾಶಯ ಕೋರಿದರು.

Advertisement

ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸೌಂಡು ಮಾಡುತ್ತಿರುವ ಟೀಸರ್ ನಲ್ಲಿ ಶ್ರೀ ಮುರಳಿಯ ಮಾಸ್ ಲುಕ್, ಖಡಕ್ ಡೈಲಾಗ್​​ ಹಾಗೂ ರಾಜಸ್ಥಾನದ ದೃಶ್ಯಗಳ ಜೊತೆಗೆ ಹೊಡೆದಾಟದ ಸೀನ್​​ಗಳನ್ನು ನೋಡಿ ಸಿನಿಪ್ರಿಯರು ಫಿದಾ ಆಗಿದ್ದಾರೆ. ಇನ್ನು ಚಿತ್ರಕ್ಕೆ “ಭರ್ಜರಿ’ ಚೇತನ್ ಆ್ಯಕ್ಷನ್ ಕಟ್ ಹೇಳುವುದರ ಜೊತೆಗೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನು ಸಹ ರಚಿಸಿದ್ದಾರೆ.

ಈಗಾಗಲೇ ಚೇತನ್ “ಭರ್ಜರಿ’, “ಬಹದ್ದೂರ್’ ಚಿತ್ರಗಳ ಮೂಲಕ ಸಿನಿ ಪ್ರಿಯರಿಗೆ ಭರ್ಜರಿ ರಸದೌತಣವನ್ನು ನೀಡಿದ್ದಾರೆ. ಅಲ್ಲದೇ ಈ ಚಿತ್ರದ ಮೂಲಕ ಹ್ಯಾಟ್ರಿಕ್ ನಿರೀಕ್ಷೆಯಲ್ಲಿದ್ದಾರೆ. ಈ ಚಿತ್ರವನ್ನು ಸುಪ್ರೀತ್‌ ನಿರ್ಮಿಸುತ್ತಿದ್ದು, ಭುವನ್‌ ಗೌಡ ಛಾಯಾಗ್ರಹಣ, ಅರ್ಜುನ್‌ ಜನ್ಯ ಸಂಗೀತ, ದೀಪು ಎಸ್‌ ಕುಮಾರ್‌ ಅವರ ಸಂಕಲನ ಈ ಚಿತ್ರಕ್ಕಿದೆ.

Advertisement

Udayavani is now on Telegram. Click here to join our channel and stay updated with the latest news.

Next