Advertisement

ಸರ್ಕಾರಿ ಶಾಲೆಗಳಿಗೆ ಸಿಗಲಿದೆ ಹೈಟೆಕ್‌ ಸ್ಪರ್ಶ

03:38 PM Dec 28, 2020 | Suhan S |

ಬೆಳಗಾವಿ: ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆಯಲು ಸಿದ್ಧವಾಗಿರುವಬೆಳಗಾವಿ ಗ್ರಾಮೀಣ ಕ್ಷೇತ್ರದಮೂರು ಸರ್ಕಾರಿ ಶಾಲೆಗಳನ್ನು ದತ್ತುತೆಗೆದುಕೊಂಡಿದ್ದು, ಈ ಮೂರೂಶಾಲೆಗಳಿಗೆ ಹೈಟೆಕ್‌ ಸ್ಪರ್ಶ ಸಿಗಲಿಎಂಬ ಉದ್ದೇಶದಿಂದ ಸುಮಾರು74 ಲಕ್ಷ ರೂ. ಮೊತ್ತದ ಪ್ರಸ್ತಾವನೆ ಸಿದ್ಧಪಡಿಸಲಾಗಿದೆ.

Advertisement

ಸರ್ಕಾರದಿಂದ ಹಸಿರು ನಿಶಾನೆ ಸಿಕ್ಕರೆ ಈ ಶಾಲೆಗಳು ನಂದನವನವಾಗಿ ರೂಪುಗೊಳ್ಳಲಿವೆ. ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ತಾಲೂಕಿನ ಮೂರು ಶಾಲೆಗಳನ್ನು ದತ್ತು ತೆಗೆದುಕೊಂಡಿದ್ದಾರೆ. ಈ ಶಾಲೆಗಳ ಸಮಗ್ರ ಅಭಿವೃದ್ಧಿಗಾಗಿ ಪ್ರಸ್ತಾವನೆಯನ್ನೂ ಕಳುಹಿಸಲಾಗಿದೆ. ಸರ್ಕಾರಿ ಶಾಲೆಗಳಿಗೆಮೂಲ ಸೌಕರ್ಯಗಳು, ಹೈಟೆಕ್‌ ಪರಿಕರಗಳು,ಪ್ರಯೋಗಾಲಯ, ಗ್ರಂಥಾಲಯ, ಆಟದ ಮೈದಾನ ಸೇರಿದಂತೆ ಇತರೆ ಸೌಕರ್ಯ ಒದಗಿಸಲು ಹೆಬ್ಬಾಳಕರ ಪಣತೊಟ್ಟಿದ್ದಾರೆ.

ತಾಲೂಕಿನ ಸೋಮವ್ವಅಂಗಡಿ ಕರ್ನಾಟಕ ಪಬ್ಲಿಕ್‌ ಶಾಲೆ,ಸುಳೇಭಾವಿಯ ಸರ್ಕಾರಿ ಪ್ರೌಢಶಾಲೆಹಾಗೂ ಬೆಳಗುಂದಿಯ ಶಾಸಕರಮಾದರಿ ಮರಾಠಿ ಹಿರಿಯ ಪ್ರಾಥಮಿಕ ಶಾಲೆ ದತ್ತು ತೆಗೆದುಕೊಂಡಿದ್ದಾರೆ. ಈಶಾಲೆಗಳಿಗೆ ಬೇಕಾಗಿರುವ ಕಾಮಗಾರಿಗಳ ಪಟ್ಟಿಸಿದ್ಧಪಡಿಸಿ ಸರ್ಕಾರಕ್ಕೆ ಕಳುಹಿಸಲಾಗಿದೆ.

ಇನ್ನೂ ಅನುದಾನ ಬಿಡುಗಡೆ ಆಗಿಲ್ಲ. ಸರ್ಕಾರದಿಂದ ಬರಬೇಕಾದ ಅನುದಾನಕ್ಕೆ ಈ ಶಾಲೆಗಳು ಕಾಯುತ್ತಿವೆ. ಅನುದಾನ ಬಿಡುಗಡೆಯಾದರೆ ಉತ್ತಮಸೌಕರ್ಯ ಒದಗಿಸಲು ಸಾಧ್ಯವಿದೆ. ಈ ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಿಗೆಪೈಪೋಟಿ ನೀಡಬಹುದಾಗಿದೆ. ಇನ್ನೂ ಹೆಚ್ಚಿನ ಗುಣಮಟ್ಟದ ಶಿಕ್ಷಣ ಮಕ್ಕಳಿಗೆ ನೀಡಲು ಸಹಕಾರಿಯಾಗಲಿದೆ.

ಕೆ.ಕೆ. ಕೊಪ್ಪ  ಶಾಲೆಗೆ 18 ಲಕ್ಷ  ರೂ. ವರದಾನ :  ತಾಲೂಕಿನ ಕೆ.ಕೆ. ಕೊಪ್ಪ ಗ್ರಾಮದ ಸೋಮವ್ವ ಅಂಗಡಿ ಕರ್ನಾಟಕ ಪಬ್ಲಿಕ್‌ಶಾಲೆಯಲ್ಲಿ ಎಲ್‌ಕೆಜಿಯಿಂದ 12ನೇ ತರಗತಿವರೆಗೆ ಇವೆ. ಸಾವಿರಕ್ಕೂ ಹೆಚ್ಚವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ.  ಇಲ್ಲಿ ಅಗತ್ಯವಿರುವ ಮೂಲ ಸೌಕರ್ಯ ಒದಗಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಹೈಟೆಕ್‌ ಶೌಚಾಲಯ, ಮೂತ್ರಾಲಯ, ಗ್ರಂಥಾಲಯ,ವಿಜ್ಞಾನ ಲ್ಯಾಬ್‌, ಕಂಪ್ಯೂಟರ್‌ ಲ್ಯಾಬ್‌, ಸಭಾ ಮಂಟಪ, 2 ಕೊಠಡಿ, ಡೈನಿಂಗ್‌ ಹಾಲ್‌, ಗಣಿತ ಕಿಟ್‌, ಆಟದ ಮೈದಾನಲೆವಲಿಂಗ್‌, ಶಾಲೆ ಕೈತೋಟ, ಹೈಜಂಪ್‌ ಸ್ಟ್ಯಾಂಡ್‌, ವೇಟ್‌ ಮಷೀನ್‌, ಹೈಟ್‌ ಸ್ಟ್ಯಾಂಡ್‌, ಹೂಪ್ಸ್‌-100, ಡೆಂಬಲ್ಸ್‌ -50, ಲೆಜಿಮ್‌-50, ಪ್ಲಾಗ್‌-100ಅಗತ್ಯ ಇವೆ ಎಂದು ಅಂದಾಜು 18 ಲಕ್ಷರೂ. ಪ್ರಸ್ತಾವನೆ ಪಟ್ಟಿ ಕಳುಹಿಸಲಾಗಿದೆ.ಮೂತ್ರಾಲಯ ಸಂಪೂರ್ಣ ಹಾಳಾಗಿದೆ. ಜೊತೆಗೆ ಬಾಗಿಲುಗಳೂಮುರಿದು ಬಿದ್ದಿವೆ. ಈ ಬಗ್ಗೆಶಾಲೆಯವರು ಗ್ರಾಪಂ, ಶಿಕ್ಷಣಇಲಾಖೆಗೆ ಪತ್ರ ಬರೆದಿದ್ದಾರೆ. ಕುಡಿವನೀರಿನ ವ್ಯವಸ್ಥೆ ಮಾಡಿ ನಿರಂತರ ನೀರು ಸಿಗುವಂತೆ ವ್ಯವಸ್ಥೆ ಆಗಬೇಕಿದೆ.

Advertisement

ಇನ್ನೂ ಹೆಚ್ಚಿನ ಮೂಲ ಸೌಕರ್ಯ ಒದಗಿಸಿದರೆ ಶಾಲೆಗೆ ಅನುಕೂಲಕವಾಗುತ್ತದೆ.ಗುಣಮಟ್ಟದ ಶಿಕ್ಷಣಒದಗಿಸಲೂ ಸಾಧ್ಯವಿದೆ.ಸರ್ಕಾರಿ ಶಾಲೆಗಳು ಹೈಟೆಕ್‌ ರೂಪ ಪಡೆದುಕೊಂಡರೆಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳುಆಕರ್ಷಿತರಾಗುತ್ತಾರೆ. ಡಾ| ದಾನಮ್ಮ ಜಳಕಿ, ಉಪ ಪ್ರಾಂಶುಪಾಲರು, ಕರ್ನಾಟಕ ಪಬ್ಲಿಕ್‌ ಶಾಲೆ, ಕೆ.ಕೆ. ಕೊಪ್ಪ

ಸುಳೇಭಾವಿ ಶಾಲೆಗೆ 17.50 ಲಕ್ಷ ರೂ. ಸೌಕರ್ಯ  :  ತಾಲೂಕಿನ ಸುಳೇಭಾವಿ ಸರ್ಕಾರಿ ಪ್ರೌಢಶಾಲೆ ಸಮಗ್ರ ಅಭಿವೃದ್ಧಿಗೆ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಪಣ ತೊಟ್ಟಿದ್ದಾರೆ. ಇಲ್ಲಿ ಬೇಕಿರುವ ಸೌಕರ್ಯಗಳ ಬಗ್ಗೆ ಈಗಾಗಲೇಪ್ರಸ್ತಾವನೆ ಕಳುಹಿಸಲಾಗಿದೆ. ವಿಜ್ಞಾನ ಪ್ರಯೋಗಾಲಯ,ಸಭಾಗೃಹ, ಸ್ಮಾರ್ಟ್‌ ಕ್ಲಾಸ್‌, ಬಾಗಿಲುಕಿಟಕಿಗಳ ಪುನರ್‌ ನಿರ್ಮಾಣ, ಶಾಲೆಗೆಸಿಸಿಟಿವಿ ಕ್ಯಾಮೆರಾ ವ್ಯವಸ್ಥೆ, ಮಕ್ಕಳಿಗೆಬಿಸಿಯೂಟಕ್ಕಾಗಿ ಪ್ರತ್ಯೇಕ ಕೊಠಡಿ,ರ್‍ಯಾಂಪ್‌, ಧ್ವಜ ಕಂಬದ ನವೀಕರಣ,ಕಾಂಪೌಂಡ್‌, ಆಟದ ಉಪಕರಣಒದಗಿಸುವಂತೆ 17.50 ಲಕ್ಷ ರೂ. ಪ್ರಸ್ತಾವನೆ ಪಟ್ಟಿ ಕಳುಹಿಸಲಾಗಿದೆ. ಈ ಶಾಲೆಯಲ್ಲಿ 8ರಿಂದ 10ನೇತರಗತಿವರೆಗೆ 285 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಹೆಚ್ಚುವರಿ ಕೊಠಡಿಗಳ ಅಗತ್ಯವೂ ಇದೆ. ಈಗ ಬೇಕಿರುವ ಸೌಲಭ್ಯಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆಸಲ್ಲಿಸಲಾಗಿದೆ. ಇನ್ನೂ ಅಗತ್ಯವಿರುವ ಸೌಕರ್ಯ ಒದಗಿಸಿಕೊಟ್ಟರೆ ಶಾಲೆ ಅಭಿವೃದ್ಧಿಯತ್ತ ಹೆಜ್ಜೆ ಹಾಕಲಿದೆ. ಕುಡಿವ ನೀರಿನ ಟ್ಯಾಂಕ್‌, ಶಾಲಾ ಕೊಠಡಿಗಳ ಬಾಗಿಲುಗಳ ರಿಪೇರಿಯಾಗಬೇಕಿದೆ.ಶಾಲೆಗಳ ಅಭಿವೃದ್ಧಿಗೆ ಹೈಟೆಕ್‌ ಸ್ಪರ್ಶ ನೀಡಬೇಕಿದೆ. ಕಂಪ್ಯೂಟರ್‌ಗಳು ಹಂತ ಹಂತವಾಗಿ ಬರುತ್ತಿವೆ

ಶಾಲೆಗಳನ್ನು ದತ್ತು ಪಡೆದುಕೊಂಡರೆ ಇನ್ನಷ್ಟು ಶಾಲೆ ಅಭಿವೃದ್ಧಿಯಾಗಿ ಮಕ್ಕಳ ಶೈಕ್ಷಣಿಕಪ್ರಗತಿಗೆ ಅನುಕೂಲವಾಗಲಿದೆ.ಮಕ್ಕಳೂ ಡಿಜಿಟಲ್‌ ಯುಗದತ್ತದಾಪುಗಾಲು ಹಾಕುತ್ತಾರೆ.ಮಕ್ಕಳು ಸ್ಪರ್ಧಾ ಮನೋಭಾವ ಬೆಳೆಸಿ ಕೊಂಡು ಉತ್ತಮ ಅಂಕ ಗಳಿಸಬೇಕು.ಸುರೇಶ ರಾಯ್ಕರ, ಮುಖ್ಯೋಪಾಧ್ಯಾಯರು, ಸರ್ಕಾರಿ ಪ್ರೌಢಶಾಲೆ ಸುಳೇಭಾವಿ

ಅನುದಾನ ಬಂದರೆ ಬೆಳಗಲಿದೆ ಬೆಳಗುಂದಿ ಶಾಲೆ : ತಾಲೂಕಿನ ಬೆಳಗುಂದಿ ಗ್ರಾಮದ ಶಾಸಕರ ಮಾದರಿ ಮರಾಠಿಹಿರಿಯ ಪ್ರಾಥಮಿಕ ಶಾಲೆ ಅಭಿವೃದ್ಧಿಗಾಗಿ ದತ್ತುಪಡೆದುಕೊಳ್ಳಲಾಗಿದೆ. ಶಾಲೆಗೆಬೇಕಿರುವ ಮೂಲಭೂತಸೌಕರ್ಯಗಳಿಗಾಗಿ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಲಾಗಿದೆ.251 ವಿದ್ಯಾರ್ಥಿಗಳುಕಲಿಯುತ್ತಿದ್ದು, ಬಡ ವಿದ್ಯಾರ್ಥಿಗಳಿಗೆಇಲ್ಲಿಗೆ ಬರುತ್ತಾರೆ. ಖಾಸಗಿ ಶಾಲೆಗೆಪೈಪೋಟಿ ನೀಡಬೇಕಾದರೆ ಇಲ್ಲಿಅಗತ್ಯ ಸೌಲಭ್ಯಗಳು ಬೇಕಿವೆ.ಹೀಗಾಗಿ ಶಾಸಕರು ಈ ಶಾಲೆ ದತ್ತು ಪಡೆದುಕೊಂಡಿದ್ದಾರೆ. ಹೆಚ್ಚುವರಿ ಕೊಠಡಿ-1, ಗಣಕಯಂತ್ರ ಕೊಠಡಿ-1, ಹೈಟೆಕ್‌ ಶೌಚಾಲಯ-2, ಆವರಣ ಗೋಡೆ,ಕುಡಿಯುವ ನೀರಿನ ಸೌಲಭ್ಯ,ಗ್ರಂಥಾಲಯ, ಎಲ್ಲ ಕೊಠಡಿಗಳಿಗೆ ಎಲ್‌ಸಿಡಿ, ಯುಪಿಎಸ್‌, ಲ್ಯಾಪ್‌ ಟಾಪ್‌, ಪ್ರೊಜೆಕ್ಟರ್‌, ಪೆಂಟಿಂಗ್‌, ಇ-ಲರ್ನಿಂಗ್‌ ಹೀಗೆ ವಿವಿಧ ಸೌಕರ್ಯ ಒದಗಿಸುವಂತೆ 21.20 ಲಕ್ಷ ರೂ. ಪ್ರಸ್ತಾವನೆ ಪಟ್ಟಿ ಕಳುಹಿಸಲಾಗಿದೆ.

ಗುಣಮಟ್ಟದ ಶಿಕ್ಷಣ ಒದಗಿಸಲು ಶಾಸಕರು ನಮ್ಮ ಶಾಲೆ ದತ್ತು ತೆಗೆದುಕೊಂಡಿರುವುದು ಉತ್ತಮ ಬೆಳವಣಿಗೆ. ಮೂಲ ಸೌಕರ್ಯಗಳಿಗಾಗಿ ಅನುದಾನ ಬಿಡುಗಡೆಯಾದರೆ ಮಕ್ಕಳ ಶೈಕ್ಷಣಿಪ್ರಗತಿಗೆ ಅನುಕೂಲವಾಗಲಿದೆ.  ಸ್ಮಾರ್ಟ್‌ ಕ್ಲಾಸ್‌, ಹೆಚ್ಚುವರಿ ಕೊಪಠಡಿಗಳು ಬಂದರೆ ಮತ್ತಷ್ಟು ಪ್ರಗತಿ ಸಾಧ್ಯವಿದೆ. ಎಸ್‌.ಪಿ. ಗೋಳೆ, ಮುಖ್ಯೋಪಾಧ್ಯಾಯರು, ಮರಾಠಿ ಪ್ರಾಥಮಿಕ ಶಾಲೆ ಬೆಳಗುಂದಿ

ನನ್ನ ಕ್ಷೆತ್ರದಲ್ಲಿ ಶಿಕ್ಷಣ ಹಾಗೂನೀರಾವರಿಗೆ ಆದ್ಯತನೀಡಿದ್ದೇನೆ. ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ ಸರ್ಕಾರದ ನಿರ್ದೇಶನದಂತೆ ಮೂರು ಶಾಲೆಗಳನ್ನು ದತ್ತು ತೆಗೆದುಕೊಂಡಿದ್ದೇನೆ. ಮಾದರಿಶಾಲೆಗಳನ್ನಾಗಿ ರೂಪಿಸಿ ಮಕ್ಕಳ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಲಾಗುವುದದು.-ಲಕ್ಷ್ಮೀ ಹೆಬ್ಬಾಳಕರ, ಶಾಸಕರು, ಬೆಳಗಾವಿ ಗ್ರಾಮೀಣ

 

ಭೈರೋಬಾ ಕಾಂಬಳೆ

Advertisement

Udayavani is now on Telegram. Click here to join our channel and stay updated with the latest news.

Next