ಇನ್ನು ಉದ್ದನೆಯ ಆಧಾರ್ ಕಾರ್ಡ್ ಕೊಂಡೊಯ್ಯುವ ಆವಶ್ಯಕತೆ ಇಲ್ಲ. ಮಳೆಯಲ್ಲಿ ಒದ್ದೆಯಾಗುವುದು, ಕಾರ್ಡ್ ಹರಿಯುವುದು ಮತ್ತು ಮಾಸಿ ಹೋಗುತ್ತದೆ ಎಂಬ ಆತಂಕವೂ ಇರುವುದಿಲ್ಲ. ಇಂತಹ ತೊಂದರೆಗಳಿಗೆ ಪರಿಹಾರ ಎಂಬಂತೆ ಆಧಾರ್ ಕಾರ್ಡ್ ಹೈಟೆಕ್ ಆಗಿ ಮಾರ್ಪಟ್ಟಿದೆ. ಭಾರತೀಯ ವಿಶಿಷ್ಠ ಗುರುತಿನ ಚೀಟಿ ಪ್ರಾಧಿಕಾರ (ಯುಐಡಿಎಐ) ಹೊಸ ಮಾದರಿಯ ಸ್ಮಾರ್ಟ್ ಕಾರ್ಡ್ ಪರಿಚಯಿಸಿದೆ.
ಏನಿದರ ವಿಶೇಷತೆ?
ಹೊಸ ಆಧಾರ್ ಕಾರ್ಡ್ ಎಟಿಎಂ ಕಾರ್ಡ್ ಗಾತ್ರದಲ್ಲಿದೆ. ಈ ಕಾರ್ಡ್ ಎಲ್ಲ ರೀತಿಯಿಂದಲೂ ಸುರಕ್ಷಿತವಾಗಿದೆ. ಅದು ಒದ್ದೆಯಾಗುವುದು, ಕಟ್ ಆಗುವುದು ಮತ್ತು ಫೋಲ್ಡ್ ಆಗುವುದನ್ನು ತಡೆಯಲು ಲ್ಯಾಮಿನೇಷನ್ ಮಾಡಿಸಬೇಕಿಲ್ಲ. ಪಿವಿಸಿ ಕಾರ್ಡ್ ರೂಪದಲ್ಲಿ ಹೊಸ ಆಧಾರ್ ಆಕರ್ಷಕವಾಗಿದ್ದು, ಆಧುನಿಕ ಭದ್ರತಾ ಅಂಶಗಳನ್ನೂ ಒಳಗೊಂಡಿದೆ. ಹೊಲೊಗ್ರಾಮ್‌ಗಳು, ಗಿಲ್ಲೊಚೆ ಮಾದರಿಗಳು, ಗೋಸ್ಟ್ ಇಮೇಜ್‌ಗಳು ಮತ್ತು ಮೈಕ್ರೊಟೆಕ್ಸ್ಟ್ ಮತ್ತು ಎಂಬೋಸ್ ಆಧಾರ್ ಲೋಗೋ ಅನ್ನು ಒಳಗೊಂಡಿದೆ.
ನೀವು ಟ್ರ್ಯಾಕ್ ಮಾಡಬಹುದು
ನೀವು ಅರ್ಜಿ ಸಲ್ಲಿಸಿದ 5 ದಿನಗಳಲ್ಲಿ ನಿಮ್ಮ ಕಾರ್ಡ್ ಅನ್ನು ಯುಐಡಿಎಐ ಅಂಚೆ ಕಚೇರಿಗೆ ತಲುಪಿಸುತ್ತದೆ. ಅಲ್ಲಿಂದ ಅದು ಸ್ಪೀಡ್ ಪೋಸ್ಟ್ ಮೂಲಕ ನಿಮ್ಮ ವಿಳಾಸಕ್ಕೆ ತಲುಪುತ್ತದೆ. ನಿಮ್ಮ ಕಾರ್ಡ್‌ನ ಸ್ಟೇಟಸ್ ತಿಳಿಯಲು www.uidai.gov.in ನಲ್ಲಿ My Aadhaar ಅನ್ನು ಬಳಸಿ ಎಲ್ಲಿಗೆ ತಲುಪಿತು ನನ್ನ ಕಾರ್ಡ್? ಎಂಬುದನ್ನು ತಿಳಿದುಕೊಳ್ಳಬಹುದು.
ಯಾರು ಅರ್ಜಿ ಸಲ್ಲಿಸಬಹುದು?
ಆಧಾರ್ ಹೊಂದಿರುವವರು ತಮ್ಮ ಮೊಬೈಲ್ ಲಿಂಕ್ ಆಗದೇ ಇದ್ದರೂ ಅರ್ಜಿ ಸಲ್ಲಿಸಬಹುದು. ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ಹೊಂದಿರದ ನಿವಾಸಿಗಳು ನೋಂದಾಯಿಸದ /ಪರ್ಯಾಯ ಮೊಬೈಲ್ ಸಂಖ್ಯೆಯನ್ನು ಬಳಸಿ ಅರ್ಜಿ ಸಲ್ಲಿಸಬಹುದು.
Related Articles
ಹೊಸ ಆಧಾರ್ ಪಡೆಯುವುದು ಹೇಗೆ?
1 ಮೊದಲು ನೀವು ಯುಐಡಿಎಐ ವೆಬ್‌ಸೈಟ್ https://uidai.gov.in ಗೆ ಹೋಗಬೇಕು
2 ಅಲ್ಲಿ My Aadhar ವಿಭಾಗಕ್ಕೆ ಹೋಗಿ Order Aadhaar PVC Card ಮೇಲೆ ಕ್ಲಿಕ್ ಮಾಡಿ.
3 ನಿಮ್ಮ 12 ಅಂಕಿಯ ಆಧಾರ್ ಸಂಖ್ಯೆಯನ್ನು ನಮೂದಿಸಿ.
4 ಭದ್ರತಾ ಕೋಡ್, ಕ್ಯಾಪ್ಚಾ (ಅಲ್ಲಿರುವ ಅಂಕಿ-ಅಕ್ಷರ) ತುಂಬಿದ ಅನಂತರ ಒಟಿಪಿ ಕ್ಲಿಕ್ ಮಾಡಿ.
5 ನೋಂದಾಯಿತ ಮೊಬೈಲ್ ಸಂಖ್ಯೆಗೆ ಒಟಿಪಿ ಬರಲಿದ್ದು, ಅದನ್ನು ನಮೂದಿಸಿ.
6 ಆಧಾರ್ ಪಿವಿಸಿ ಕಾರ್ಡ್ ಪೂರ್ವವೀಕ್ಷಣೆ ನಿಮ್ಮ ಮುಂದೆ ಕಾಣಿಸುತ್ತದೆ.
7 ಬಳಿಕ ಪಾವತಿಯ ಮೇಲೆ ಕ್ಲಿಕ್ ಮಾಡಿ, 50 ರೂ. ಪಾವತಿಸಿ. (ಡೆಬಿಟ್ ಕಾರ್ಡ್ ಮಾತ್ರವಲ್ಲದೇ ಇತರ ಆಯ್ಕೆಗಳೂ ಇವೆ)
8 ಹಣ ಪಾವತಿ ಮಾಡಿದ ತತ್‌ಕ್ಷಣ ಪ್ರಕ್ರಿಯೆಯು ಪೂರ್ಣಗೊಳ್ಳುತ್ತದೆ.