Advertisement

ಶಿವಣಗಿ ಸರ್ಕಾರಿ ಶಾಲೆಗಳಿಗೆ ಹೈಟೆಕ್‌ ಬೋಧನಾ ಸೌಲಭ್ಯ

05:18 PM Feb 05, 2022 | Shwetha M |

ವಿಜಯಪುರ: ಹೈಟೆಕ್‌ ತಂತ್ರಜ್ಞಾನದ ಸೌಲಭ್ಯ ಪಡೆದಿರುವ ವಿಜಯಪುರ ತಾಲೂಕಿನ ಶಿವಣಗಿ ಗ್ರಾಮದ ಸರ್ಕಾರಿ ಶಾಲೆ ಹಾಗೂ ಅಂಗನವಾಡಿ ಕೇಂದ್ರಗಳು ಇದೀಗ ಸಾರ್ವಜನಿಕರ ಗಮನ ಸೆಳೆಯುತ್ತಿವೆ.

Advertisement

ಶಿವಣಗಿ ಗ್ರಾಪಂ 14ನೇ ಹಣಕಾಸು ಯೋಜನೆಯಲ್ಲಿ ಗ್ರಾಮಲ್ಲಿರುವ 9 ಸರ್ಕಾರಿ ಶಾಲೆಗಳಿಗೆ ಆಧುನಿಕ ತಂತ್ರಜ್ಞಾನದ ಸ್ಮಾರ್ಟ್‌ ಕ್ಲಾಸ್‌ ಬೋಧನಾ ಸೌಲಭ್ಯ ಕಲ್ಪಿಸಲಾಗಿದೆ. ಸ್ಮಾರ್ಟ್‌ ಕ್ಲಾಸ್‌ ಗಾಗಿ ಪ್ರೋಜೆಕ್ಟರ್‌ ಪರದೆ, ಕಾರ್ಡಲೆಸ್‌ ಮೈಕ್‌, ಸೌಂಡ್‌ ಬಾಕ್ಸ್‌, ರಿಮೋಟ್‌ ಕಂಟ್ರೋಲ್‌ ಆಧಾರಿತ ವ್ಯವಸ್ಥೆಯ ಎಲ್ಲ ಸೌಲಭ್ಯಗಳನ್ನೂ ಅಳವಡಿಸಲಾಗಿದೆ.

ಪಿಡಿಒ ಆರ್‌.ಆರ್‌. ಬಿರಾದಾರ ಅವರ ವಿಶೇಷ ಕಾಳಜಿಯಿಂದ ಅಲ್ಲಿನ ಸರ್ಕಾರಿ ಶಾಲೆಗಳಿಗೆ ಹೈಟೆಕ್‌ ಸ್ಪರ್ಶದ ಮೂಲಕ ಸ್ಮಾಟ ನೀಡಲಾಗಿದೆ. ಶಿವಣಗಿಯ ಯುಬಿಎಸ್‌, ಎಂಪಿಎಸ್‌, ಕೆಜಿಎಸ್‌, ಜೀರಗಾಳ ವಸ್ತಿ ಶಾಲೆ, ಹೂವಿನಹರಿ ಶಾಲೆ, ಸೈಯ್ಯದ್‌ ವಸ್ತಿ ಶಾಲೆ, ಎಚ್‌. ಕೆ. ಸ್ಕೂಲ್‌, ಶಿವಣಗಿ ತಾಂಡಾ ಸ್ಕೂಲ್‌, ಶಿವಣಗಿಯ ಉರ್ದು ಶಾಲೆ ಸೇರಿದಂತೆ 9 ಸರ್ಕಾರಿ ಶಾಲೆಗಳಿಗೆ ಈ ಪರಿಕರ ಅಳವಡಿಸಲಾಗಿದ್ದು ವಿದ್ಯಾರ್ಥಿಗಳು ಆಸಕ್ತಿಯಿಂದ ಬೋಧನೆಯನ್ನು ಆಲಿಸುತ್ತಿದ್ದಾರೆ. ಇದಲ್ಲದೇ ಶಿವಣಗಿ ಗ್ರಾಮದಲ್ಲಿರುವ 11 ಅಂಗನವಾಡಿ ಕೇಂದ್ರಗಳಲ್ಲಿನ ಮಕ್ಕಳಿಗೆ ಆಟವಾಡಲು ಗುಣಮಟ್ಟದ ಆಟಿಕೆಗಳನ್ನು ನೀಡಲಾಗಿದೆ.

ಪ್ರತಿ ಅಂಗನವಾಡಿ ಕೇಂದ್ರಗಳಲ್ಲೂ ಗುಣಮಟ್ಟದ 25 ಸಣ್ಣ ಚೇರ್‌, ಕುದುರೆ, ಸೈಕಲ್‌ ಗಾಡಿ ಒದಗಿಸಲಾಗಿದೆ. ಆ ಮೂಲಕ ಚಿಣ್ಣರು ಸಂತೋಷದಿಂದ ಆಟಿಕೆಗಳ ಆಟದೊಂದಿಗೆ ಅಕ್ಷರ ಕಲಿಕೆಯಲ್ಲಿ ತೊಡಗಿದ್ದಾರೆ. ಗ್ರಾಪಂ ಚುನಾಯಿತ ಸದಸ್ಯರ ಅವಧಿ ಮುಗಿದಿದ್ದ ಸಂದರ್ಭದಲ್ಲಿ ಆಡಳಿತಾಧಿಕಾರಿ ಎಸ್‌.ಎಸ್‌. ನದಾಫ್‌ ಅವರ ಅವಧಿಯಲ್ಲಿ ಪಿಡಿಒ ಆರ್‌.ಆರ್‌. ಬಿರಾದಾರ ಈ ಹೊಸ ತಾಂತ್ರಿಕತೆಯ ಶೈಕ್ಷಣಿಕ ಸೌಲಭ್ಯ ಕಲ್ಪಿಸುವ ಕುರಿತು ಯೋಜಿಸಿದ್ದರು. ಸ್ಥಳೀಯರಿಂದಲೂ ಇದಕ್ಕೆ ಉತ್ತಮ ಸ್ಪಂದನೆ ಸಿಕ್ಕಿತ್ತು. ಪರಿಣಾಮ ಇದೀಗ ಶಿಗಣಗಿ ಸರ್ಕಾರಿ ಶಾಲೆ ಮಾದರಿ ಶಾಲೆಯಾಗಿ ರೂಪುಗೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next