Advertisement

ಕರಾವಳಿಯಲ್ಲಿ ಹೈಟೆಕ್‌ ಮೀನು ಪಾರ್ಕ್‌, ಹೆಮ್ಮಕ್ಕಳ ಕ್ರೀಡಾ ಹಾಸ್ಟೆಲ್‌

12:49 AM Feb 27, 2021 | Team Udayavani |

ಮಂಗಳೂರು: ಕರಾವಳಿಯಲ್ಲಿ ಮೀನು ಉತ್ಪಾದನೆ ಹಾಗೂ ಮೌಲ್ಯವರ್ಧನೆಗಾಗಿ ಹೈಟೆಕ್‌ ಮೀನು ಪಾರ್ಕ್‌ ಮತ್ತು ಮಂಗಳೂರಿ ನಲ್ಲಿ ಹೆಮ್ಮಕ್ಕಳಿಗೆ ಕ್ರೀಡಾ ಹಾಸ್ಟೆಲ್‌ ನಿರ್ಮಾಣ ಮಾಡಲಾಗುವುದು ಎಂದು ರಾಜ್ಯ ಯೋಜನೆ, ಸಾಂಖ್ಯೀಕ ಹಾಗೂ ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ| ನಾರಾಯಣ ಗೌಡ ತಿಳಿಸಿದರು.

Advertisement

ಅವರು ಶುಕ್ರವಾರ ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದರು. ಮೀನು ಪಾರ್ಕ್‌ನಲ್ಲಿ ಮೀನಿನ ಉತ್ಪನ್ನಗಳ ಮಾರಾಟ, ಉಪ ಉತ್ಪನ್ನಗಳ ತಯಾ ರಿಗೆ ಅವಕಾಶ ಇರಲಿದೆ. ಅಲ್ಲಿ ಸೌರ ಶಕ್ತಿ  ಬಳಸಲಾಗುವುದು ಎಂದರು.

ಕ್ರೀಡಾ ಹಾಸ್ಟೆಲ್‌ :

ಮಂಗಳೂರಿನ ಉರ್ವ ಮೈದಾನದ ಬಳಿ 1.50 ಕೋಟಿ ರೂ. ವೆಚ್ಚದಲ್ಲಿ ಹೆಮ್ಮಕ್ಕಳ ಕ್ರೀಡಾ ಹಾಸ್ಟೆಲ್‌ ನಿರ್ಮಾಣ ಮಾಡಲಾಗುವುದು. ಇದನ್ನು ಡಾರ್ಮೆಟರಿಯ ಬದಲು ಒಂದು ಕೊಠಡಿಯಲ್ಲಿ ಇಬ್ಬರ ವಾಸ್ತವ್ಯಕ್ಕೆ ಅನುಕೂಲ ವಾಗುವಂತೆ ನಿರ್ಮಿಸಲಾಗುವುದು. ಹೆಮ್ಮಕ್ಕಳಿಗೆ ಸೂಕ್ತ ಭದ್ರತೆ, ಕ್ರೀಡಾ ಉಪಕರಣ ಸೇರಿದಂತೆ ತರಬೇತಿಗೂ ಸೂಕ್ತ ಸೌಲಭ್ಯ ಕಲ್ಪಿಸಲಾಗುವುದು ಎಂದು ಸಚಿವರು ವಿವರಿಸಿದರು.

ಕ್ರೀಡಾ ಇಲಾಖೆಗೆ ಸಂಬಂಧಿಸಿ ದ.ಕ. ಜಿಲ್ಲೆಯಲ್ಲಿ ಸುಮಾರು 26 ಕೋಟಿ ರೂ. ಮೊತ್ತದ ಕಾಮಗಾರಿಗಳು ಬಾಕಿ ಉಳಿದಿದ್ದು, ಅವುಗಳನ್ನು 2021ರ ಮಾರ್ಚ್‌ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

Advertisement

ಕ್ರೀಡಾ ಸಾಧಕರಿಗೆ ನೌಕರಿಗೆ ಪ್ರಯತ್ನ :

ಕ್ರೀಡೆಯಲ್ಲಿ ಸಾಧನೆ ಮಾಡುವ ಸಾಧಕರಿಗೆ ಸುಲಭ ದಲ್ಲಿ ನೌಕರಿ ಸಿಗುವಂತಾಗಲು ವಿಶೇಷ ಪ್ರಯತ್ನ ಮಾಡ ಲಾಗುವುದು. ಈ ಬಗ್ಗೆ  ಮುಖ್ಯಮಂತ್ರಿಗಳ ಜತೆ ಮಾತು ಕತೆ ನಡೆಸುವುದಾಗಿ ಸಚಿವರು ತಿಳಿಸಿದರು.

ಅನುದಾನ ಬಳಕೆಯಾಗದೆ ಬಾಕಿ! :

ಸಂಸದರ ಹಾಗೂ ಶಾಸಕರ ಅನುದಾನ ಇಲಾಖೆಯಲ್ಲಿ  ಬಳಕೆಯಾಗದೆ ಸಾಕಷ್ಟು ಉಳಿಕೆಯಾಗಿರುವುದು ವಿವಿಧ ಜಿಲ್ಲೆಗಳಿಗೆ ಪ್ರವಾಸಕ್ಕೆ ತೆರಳಿದಾಗ ಕಂಡುಬಂದಿದೆ. ಆದಷ್ಟು ತ್ವರಿತವಾಗಿ ಕಾಮಗಾರಿ ಮುಕ್ತಾಯಗೊಳಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಅದೇ ರೀತಿ ದ.ಕ. ಜಿಲ್ಲೆಯಲ್ಲಿ  26 ಕೋಟಿ ರೂ. ಅನುದಾನ ಪೂರ್ತಿಯಾಗಿ ಬಳಕೆಯಾಗಿಲ್ಲ. ಬಹುತೇಕ ಕಾಮಗಾರಿ ಮುಕ್ತಾಯ ಹಂತದಲ್ಲಿದ್ದು, ಬೇಗನೆ ಕಾಮಗಾರಿ ಪೂರ್ತಿಗೊಳಿಸುವಂತೆ ಸೂಚಿಸಲಾಗಿದೆ ಎಂದರು.

ಖೇಲೋ ಇಂಡಿಯಾ ಯೋಜನೆಯಲ್ಲಿ ಕ್ರೀಡೆಗಳಿಗೆ ಬೇಕಾದ ಹೆಚ್ಚಿನ ಅನುದಾನ ನೀಡುವಂತೆ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಲಾಗುವುದು. ರಾಜ್ಯದ ಕ್ರೀಡಾಪಟುಗಳು ದೇಶ, ವಿದೇಶಗಳಲ್ಲಿ ಸಾಮರ್ಥ್ಯ ಪ್ರದರ್ಶಿಸಲು ಬೇಕಾದ ಎಲ್ಲ ರೀತಿಯ ಸೌಲಭ್ಯಗಳನ್ನು ಒದಗಿಸಿಕೊಡಲು ಇಲಾಖೆ ಪ್ರಯತ್ನ ಮಾಡ‌ಲಿದೆ ಎಂದು ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next