Advertisement

ಹೈಟೆಕ್‌ ಬಸ್‌ ನಿಲ್ದಾಣ ಕಾಮಗಾರಿ ಶೀಘ್ರ

07:51 PM Oct 23, 2020 | Suhan S |

ದಾವಣಗೆರೆ: ಮಹಾನಗರದ ಜನತೆಯ ಬಹು ನಿರೀಕ್ಷಿತ ಹೈಟೆಕ್‌ ಬಸ್‌ನಿಲ್ದಾಣ ನಿರ್ಮಾಣ ಕಾಮಗಾರಿ ಆರಂಭಕ್ಕೆ ದಿನಗಣನೆ ಶುರುವಾಗಿದ್ದು, ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣಾ ನೀತಿಸಂಹಿತೆ ತೆರವುಗೊಳ್ಳುತ್ತಿದ್ದಂತೆ (ನ. 5ರ ಬಳಿಕ) ಕಾಮಗಾರಿ ಶುರುವಾಗುವ ನಿರೀಕ್ಷೆ ಇದೆ. ಸ್ಮಾರ್ಟ್‌ಸಿಟಿ ಯೋಜನೆ ಯಡಿ 93 ಕೋಟಿ ರೂ.ಗಳವೆಚ್ಚದಲ್ಲಿ ಸಕಲ ನಾಗರಿಕ ಸೌಲಭ್ಯಗಳುಳ್ಳ ಹೈಟೆಕ್‌ ಬಸ್‌ನಿಲ್ದಾಣ ನಿರ್ಮಾಣ ಮಾಡಲಾಗುತ್ತಿದೆ. ಕಟ್ಟಡನಿರ್ಮಾಣ ಕಾಮಗಾರಿಯಗುತ್ತಿಗೆಯನ್ನು ಆರ್‌.ಕೆ. ಕನ್‌ಸ್ಟ್ರಕ್ಷನ್‌ ಕಂಪನಿ ಪಡೆದುಕೊಂಡಿದೆ. ಹೈಟೆಕ್‌ ಬಸ್‌ ನಿಲ್ದಾಣ ನಿರ್ಮಾಣಕ್ಕೆ ಎರಡೂವರೆಯಿಂದ ಮೂರು ವರ್ಷ ಕಾಲಾವಧಿ ತಗಲುವುದರಿಂದ ಅಲ್ಲಿಯವರೆಗೆ ಬಸ್‌ನಿಲ್ದಾಣವನ್ನು ತಾತ್ಕಾಲಿಕವಾಗಿ ಹೈಸ್ಕೂಲ್‌ ಮೈದಾನಕ್ಕೆ ಸ್ಥಳಾಂತರಿಸಲು ನಿರ್ಧರಿಸಲಾಗಿದೆ.

Advertisement

ಹೈಸ್ಕೂಲ್‌ ಮೈದಾನದ ಎರಡೂವರೆ ಎಕರೆ ಪ್ರದೇಶದಲ್ಲಿ 2.34 ಕೋಟಿ ರೂ.ಗಳಲ್ಲಿ ತಾತ್ಕಾಲಿಕ ಬಸ್‌ನಿಲ್ದಾಣ ನಿರ್ಮಾಣ ಮಾಡಲಾಗಿದೆ. ತಾತ್ಕಾಲಿಕ ಬಸ್‌ ನಿಲ್ದಾಣದಲ್ಲಿ 22 ಬಸ್‌ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದ್ದು, ಪ್ರಯಾಣಿಕರಿಗೆ ಆಸನ, ನೆರಳು, ಕುಡಿಯುವ ನೀರು, ಟೆಕೆಟ್‌ ಕೌಂಟರ್‌, ಶೌಚಾಲಯ ಸೇರಿದಂತೆ ಇತರ ಮೂಲ ಸೌಕರ್ಯಗಳನ್ನು ಕಲ್ಪಿಸುವ ಕಾರ್ಯ ಅಂತಿಮ ಹಂತದಲ್ಲಿದೆ. ಬಸ್‌ನಿಲ್ದಾಣವನ್ನು ತಾತ್ಕಾಲಿಕ ಬಸ್‌ನಿಲ್ದಾಣಕ್ಕೆ ಸ್ಥಳಾಂತರಿಸಿದ ಬಳಿಕಹಳೆ ಬಸ್‌ ನಿಲ್ದಾಣ ಕಟ್ಟಡವನ್ನು ನೆಲಸಮ ಮಾಡುವ ಕಾರ್ಯ ನಡೆಯಲಿದೆ. ಈಗಿರುವ 30 ವರ್ಷಗಳಷ್ಟು ಹಳೆಯದಾದ ಬಸ್‌ನಿಲ್ದಾಣದ ಸ್ಥಳದಲ್ಲಿಯೇ ಅತ್ಯಾಧುನಿಕ ಸೌಲಭ್ಯಗಳುಳ್ಳ ಹೈಟೆಕ್‌ ಬಸ್‌ನಿಲ್ದಾಣ ತಲೆ ಎತ್ತಲಿದೆ.

ಕಿಷ್ಕಿಂದೆಯಂತಾಗಲಿದೆ ಮೈದಾನ: ನಗರದ ವಿಶಾಲವಾದ ಹೈಸ್ಕೂಲ್‌ ಮೈದಾನದಲ್ಲಿ ಈಗಾಗಲೇ ಖಾಸಗಿ ತಾತ್ಕಾಲಿಕ ಬಸ್‌ನಿಲ್ದಾಣ ಮಾಡಲಾಗಿದೆ. ಇನ್ನು ಮುಂದೆ ಇದೇ ಸ್ಥಳದ ಪಕ್ಕದಲ್ಲಿಯೇ ಸರಕಾರಿ ತಾತ್ಕಾಲಿಕ ಬಸ್‌ನಿಲ್ದಾಣ ಕೂಡ ನಿರ್ಮಾಣವಾಗಲಿದೆ. ಸರಕಾರಿ ಹಾಗೂ ಖಾಸಗಿ ಬಸ್‌ ನಿಲ್ದಾಣಗಳಿಂದಾಗಿ ಹೈಸ್ಕೂಲ್‌ ಮೈದಾನದ ಸುತ್ತ ಸಹಜವಾಗಿ ವಾಹನದಟ್ಟಣೆ, ಜನದಟ್ಟಣೆ ಹೆಚ್ಚಾಗುವ ಸಾಧ್ಯತೆ ಇದೆ. ಹತ್ತಿರದಲ್ಲಿ ವಾಹನ ನಿಲುಗಡೆಗೂ ವ್ಯವಸ್ಥೆ ಮಾಡಬೇಕಾಗಿದೆ.

ಈ ನಡುವೆ ಮೈದಾನದಲ್ಲಿ ಯಾವುದಾದರೂ ಕಾರ್ಯಕ್ರಮ, ಪ್ರದರ್ಶನ ಏರ್ಪಡಿಸಿದರಂತೂಮೈದಾನ ಕಿಷೆRಂದೆಯಂತಾಗಲಿದೆ. ಮೈದಾನದಲ್ಲಿ ಕಾರ್ಯನಿರ್ವಹಿಸುವ ತಾತ್ಕಾಲಿಕ ಬಸ್‌ನಿಲ್ದಾಣಗಳ ಕಾರಣದಿಂದ ಎರಡೂ¾ರು ವರ್ಷ ಮೈದಾನದಲ್ಲಿ ದೊಡ್ಡ ಕಾರ್ಯಕ್ರಮ, ಕ್ರೀಡಾಕೂಟ, ವಸ್ತು ಪ್ರದರ್ಶನ ಸಂಘಟನೆಗೂ ಅಡಚಣೆಯಾಗಲಿದೆ.

ಅನಾರೋಗ್ಯಕರ ಪೈಪೋಟಿ ಸಾಧ್ಯತೆ:ಸರಕಾರಿ ಹಾಗೂ ಖಾಸಗಿ ತಾತ್ಕಾಲಿಕ ಬಸ್‌ ನಿಲ್ದಾಣಗಳು ಎರಡೂ ಹೈಸ್ಕೂಲ್‌ ನಿಲ್ದಾಣದಲ್ಲಿಅಕ್ಕಪಕ್ಕದಲ್ಲಿಯೇ ಕಾರ್ಯನಿರ್ವಹಿಸಬೇಕಾದ ಸ್ಥಿತಿ ನಿರ್ಮಾಣವಾಗುವುದರಿಂದ ಸರಕಾರಿ ಹಾಗೂ ಖಾಸಗಿ ಬಸ್‌ಗಳ ನಡುವಿಗೆ ಅನಾರೋಗ್ಯಕರ ಪೈಪೋಟಿ ಏರ್ಪಡುವ ಸಾಧ್ಯತೆಯೂ ಇದೆ. ಕಾನೂನು ಪ್ರಕಾರ ಸರಕಾರಿ ಬಸ್‌ನಿಲ್ದಾಣದ 500ಮೀಟರ್‌ ವ್ಯಾಪ್ತಿಯಲ್ಲಿ ಖಾಸಗಿ ಬಸ್‌ ಗಳನ್ನು ನಿಲ್ಲಿಸುವಂತಿಲ್ಲ. ಆದರೆ ಈಗ ಎರಡೂ ತಾತ್ಕಾಲಿಕ ಬಸ್‌ನಿಲ್ದಾಣಗಳು ಅಕ್ಕಪಕ್ಕದಲ್ಲಿಯೇ ಇರುವುದರಿಂದ 500 ಮೀಟರ್‌ ಅಂತರಕ್ಕೆ ಅಡ್ಡಿಯಾಗಿದೆ.

Advertisement

ಒಟ್ಟಾರೆ ಮಹಾನಗರಕ್ಕೆ ಕಳಸಪ್ರಾಯವಾಗುವ ರೀತಿಯಲ್ಲಿ ಅತ್ಯಾಧುನಿಕ ಸೌಲಭ್ಯಯುಳ್ಳ ಹೈಟೆಕ್‌ ಬಸ್‌ನಿಲ್ದಾಣ ನಿರ್ಮಾಣವಾಗುತ್ತಿದೆ. ನಿರ್ಮಾಣ ಕಾರ್ಯ ಪೂರ್ಣಗೊಳ್ಳುವವರೆಗೆ ಎಲ್ಲರಿಗೂ ಹೊಂದಾಣಿಕೆ ಅನಿವಾರ್ಯವಾಗಿದೆ

ಏನೇನು ಸೌಲಭ್ಯ? :  ಬಹುಮಹಡಿ ಕಟ್ಟಡ, ವಿಶಾಲ ವಾಹನ ನಿಲುಗಡೆ ಸ್ಥಳ, ವಾಣಿಜ್ಯ ಸಂಕೀರ್ಣ, 46 ಬಸ್‌ನಿಲುಗಡೆಯ ವಿಶಾಲ ಟರ್ಮಿನಲ್‌, ಕೆಎಸ್ಸಾರ್ಟಿಸಿ ಕಚೇರಿ, ಕುಡಿಯುವ ನೀರು, ಶೌಚಾಲಯದಂತಹ ಮೂಲ ಸೌಕರ್ಯ, ಅಗ್ನಿಶಾಮಕ ಉಪಕರಣ, ಸಿಸಿ ಕ್ಯಾಮರಾ, ಡಿಜಿಟಲ್‌ ಪರದೆಗಳಂಥ ಆಧುನಿಕ ವ್ಯವಸ್ಥೆವನ್ನು ಈ ಹೈಟೆಕ್‌ ಬಸ್‌ನಿಲ್ದಾಣ ಒಳಗೊಳ್ಳಲಿದೆ.

ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣಾ ನೀತಿಸಂಹಿತೆ ತೆರವುಗೊಳ್ಳುತ್ತಿದ್ದಂತೆ ನವೆಂಬರ್‌ ಮೊದಲ ವಾರದಲ್ಲಿ ಹೈಟೆಕ್‌ ಬಸ್‌ನಿಲ್ದಾಣ ನಿರ್ಮಾಣ ಕಾರ್ಯ ಶುರುವಾಗಲಿದೆ. ಹೈಸ್ಕೂಲ್‌ ಮೈದಾನದಲ್ಲಿ ತಾತ್ಕಾಲಿಕ ಬಸ್‌ನಿಲ್ದಾಣ ನಿರ್ಮಾಣವಾಗಲಿದ್ದು ಶೀಘ್ರ ಸ್ಥಳಾಂತರಿಸಲಾಗುವುದು.-ಸಿದ್ದೇಶ್ವರ್‌ ಎನ್‌. ಹೆಬ್ಟಾಳ, ವಿಭಾಗೀಯ ನಿಯಂತ್ರಣಾಧಿಕಾರಿ, ಕೆಎಸ್‌ ಆರ್‌ಟಿಸಿ, ದಾವಣಗೆರೆ

 

 

-ಎಚ್‌.ಕೆ. ನಟರಾಜ

Advertisement

Udayavani is now on Telegram. Click here to join our channel and stay updated with the latest news.

Next