Advertisement

Bullet Train: ಮೈಸೂರು-ಬೆಂಗಳೂರು-ಚೆನ್ನೈ ಬುಲೆಟ್‌ ರೈಲು ಯೋಜನೆಗೆ ಹೈಸ್ಪೀಡ್‌

01:25 AM Jan 17, 2024 | Team Udayavani |

ಹೊಸದಿಲ್ಲಿ: ಮುಂಬಯಿ – ಅಹ್ಮದಾಬಾದ್‌ ಬುಲೆಟ್‌ ರೈಲು ಯೋಜನೆಯ ಕಾಮಗಾರಿ ಪ್ರಗತಿಯಲ್ಲಿ ಇರುವಂತೆಯೇ ಮೈಸೂರು-ಬೆಂಗಳೂರು- ಚೆನ್ನೈ ನಡುವಿನ 435 ಕಿ.ಮೀ. ದೂರದ ಮತ್ತೂಂದು ಬುಲೆಟ್‌ ರೈಲು ಕೆಲಸದ ಪ್ರಾಥಮಿಕ ಹಂತಗಳು ಆರಂಭವಾಗಿವೆ. ಈ ಮೂಲಕ ಬುಲೆಟ್‌ ರೈಲು ಯೋಜನೆ ಅನುಷ್ಠಾನದ ಕೆಲಸಕ್ಕೆ ವೇಗ ಸಿಕ್ಕಿದಂತಾಗಿದೆ. ಬೆಂಗಳೂರು-ಚೆನ್ನೈ ನಡುವೆ ನಿರ್ಮಾಣಗೊಳ್ಳು ತ್ತಿರುವ ಹೊಸ ಹೆದ್ದಾರಿಗೆ ಸಮಾನಾಂತರವಾಗಿ ಹೊಸ ರೈಲು ಯೋಜನೆ ಅನುಷ್ಠಾನಗೊಳ್ಳಲಿದೆ ಎನ್ನಲಾಗಿದೆ.

Advertisement

ಈ ಮೂಲಕ ವಂದೇ ಭಾರತ್‌ ರೈಲುಗಳ ಜತೆಗೆ ಕರ್ನಾಟಕಕ್ಕೆ ಮೊದಲ ಬುಲೆಟ್‌ ರೈಲು ಕೂಡ ಲಭ್ಯ ವಾಗುವ ಸಾಧ್ಯತೆಗಳು ಅಧಿಕವಾಗಿವೆ. ಒಟ್ಟು ಈ ಮಾರ್ಗದಲ್ಲಿ ಕರ್ನಾಟಕದ ವ್ಯಾಪ್ತಿಯಲ್ಲಿ ಒಟ್ಟು 9 ನಿಲ್ದಾಣಗಳು ಇರಲಿದ್ದು, ಮೈಸೂರು, ಮಂಡ್ಯ, ಚನ್ನ ಪಟ್ಟಣ, ಬೆಂಗಳೂರು, ಬಂಗಾರಪೇಟೆ ನಿಲ್ದಾಣಗಳನ್ನು ಹೊಂದಲು ಯೋಜನೆಯ ಅನುಷ್ಠಾನದ ಹೊಣೆ ಹೊತ್ತುಕೊಂಡಿರುವ ನ್ಯಾಶನಲ್‌ ಹೈ-ಸ್ಪೀಡ್‌ ರೈಲ್‌ ಕಾರ್ಪೊರೇಷನ್‌ (ಎನ್‌ಎಚ್‌ಎಸ್‌ಆರ್‌ಸಿಎಲ್‌) ತೀರ್ಮಾನಿಸಿದೆ.

ಕಾರ್ಪೊರೇಷನ್‌ ವತಿಯಿಂದ ಸೇತುವೆಗಳು, ಓವರ್‌ ಬ್ರಿಡ್ಜ್ ಮತ್ತು ಇತರ ಕೆಲಸಗಳ ವಿನ್ಯಾಸ ಹೇಗೆ ಇರಬೇಕು ಎಂಬುದರ ಬಗ್ಗೆ ವಿನ್ಯಾಸ ಸಿದ್ಧಪಡಿಸುವ ಗುತ್ತಿಗೆ ನೀಡಲಾಗಿದೆ. ಇದರ ಜತೆಗೆ ರೈಲು ಸಂಚಾರಕ್ಕೆ ಬೇಕಾಗಿರುವ ವಿದ್ಯುತ್‌ನ ಮೂಲ, ಸಬ್‌ಸ್ಟೇಷನ್‌ಗಳ ನಿರ್ಮಾಣದ ಬಗ್ಗೆಯೂ ಮಾಹಿತಿ ಸಂಗ್ರಹವನ್ನು ಕಾರ್ಪೊರೇಷನ್‌ನ ಅಧಿಕಾರಿಗಳು ನಡೆಸಿದ್ದಾರೆ.

ರೈತರ ಜತೆಗೆ ಮಾತುಕತೆ
ಯೋಜನೆಗೆ ಬೇಕಾಗಿರುವ ಜಮೀನು ವಶಪಡಿ ಸಿಕೊಳ್ಳುವ ಬಗ್ಗೆ ತಮಿಳುನಾಡು ಮತ್ತು ಕರ್ನಾಟಕದ ವ್ಯಾಪ್ತಿಯಲ್ಲಿ ಎನ್‌ಎಚ್‌ಎಸ್‌ಆರ್‌ಸಿಎಲ್‌ನ ಅಧಿಕಾ ರಿಗಳೇ ರೈತರ ಜತೆಗೆ ಮಾತುಕತೆ ನಡೆಸಿದ್ದಾರೆ ಎಂದು “ಮನಿ ಕಂಟ್ರೋಲ್‌ ಡಾಟ್‌ ಕಾಂ’ ವರದಿ ಮಾಡಿದೆ. ಯೋಜನೆಗೆ ಸಂಬಂಧಿಸಿದಂತೆ ವಿಸ್ತೃತ ಯೋಜನಾ ವರದಿ ಅಂತಿಮಗೊಂಡ ಬಳಿಕ ಅಂದಾಜು ಪ್ರಯಾಣಿಕರ ಲಭ್ಯತೆ, ಟಿಕೆಟ್‌ ದರದ ಬಗ್ಗೆಯೂ ಅಂತಿಮ ಚಿತ್ರಣ ಲಭ್ಯವಾಗಲಿದೆ.

ಮೈಸೂರು- ಬೆಂಗಳೂರು- ಚೆನ್ನೈ ಬುಲೆಟ್‌ ಟ್ರೈನ್‌ ಯೋಜನೆ ಜತೆಗೆ ಬೆಂಗಳೂರು-ಮುಂಬಯಿ ನಡುವಿನ ಬುಲೆಟ್‌ ರೈಲು ಯೋಜನೆ ಕಾರ್ಯಗತವಾಗಲಿ. ಇದರಿಂದಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚಿನ ಅಭಿವೃದ್ಧಿಯಾಗಲಿದೆ.
ಎಂ.ಬಿ. ಪಾಟೀಲ್‌, ಕರ್ನಾಟಕ ಕೈಗಾರಿಕ ಸಚಿವ

Advertisement
Advertisement

Udayavani is now on Telegram. Click here to join our channel and stay updated with the latest news.

Next