Advertisement

IPL players: ಐಪಿಎಲ್‌ ಆಟಗಾರರಿಗೆ ಬಂಪರ್‌ ಸಂಭಾವನೆ

10:14 PM Sep 28, 2024 | Team Udayavani |

ಮುಂಬಯಿ: ಐಪಿಎಲ್‌ನಲ್ಲಿ ಆಡುವ ಆಟಗಾರರಿಗೆ ಭರ್ಜರಿ ಸಂಭಾವನೆ ಲಭಿಸಲಿದೆ. ಪ್ರತೀ ಪಂದ್ಯಕ್ಕೆ 7.5 ಲಕ್ಷ ರೂ.ನಂತೆ ಸಂಭಾವನೆ ಸಿಗಲಿದೆ ಎಂದು ಬಿಸಿಸಿಐ ಘೋಷಿಸಿದೆ.

Advertisement

ಸದ್ಯ ಐಸಿಸಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ, ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಈ ಬಗ್ಗೆ ಟ್ವೀಟ್‌ ಮಾಡಿದ್ದು, ಇದರಲ್ಲಿ ಮುಂದಿನ ಐಪಿಎಲ್‌ ಆವೃತ್ತಿಗೆ ಪಂದ್ಯದ ಸಂಭಾವನೆಯಾಗಿ ಪ್ರತೀ ಫ್ರಾಂಚೈಸಿಗೆ 12.60 ಕೋಟಿ ರೂ.ನಷ್ಟು ಮೊತ್ತವನ್ನು ನಿಗದಿಪಡಿಸಲಾಗಿದೆ ಎಂದಿದ್ದಾರೆ.

ಇದರ ಜತೆಗೆ, ಐಪಿಎಲ್‌ ಆವೃತ್ತಿಯಲ್ಲಿ ಎಲ್ಲ ಲೀಗ್‌ ಪಂದ್ಯಗಳನ್ನು ಆಡುವ ಆಟಗಾರನಿಗೆ 1.5 ಕೋಟಿ ರೂ.ಗಳಷ್ಟು ಪಂದ್ಯದ ಸಂಭಾವನೆ ಸಿಗಲಿದೆ. ಜತೆಗೆ ಫ್ರಾಂಚೈಸಿಯೊಂದಿಗಿನ ಒಪ್ಪಂದದ ಹಣವನ್ನು ಪಡೆಯಲಿದ್ದಾರೆ ಎಂದು ಜಯ್‌ ಶಾ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next