Advertisement

‘ಉಳ್ಳಾಲ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ’

01:04 PM Oct 04, 2017 | |

ಉಳ್ಳಾಲ: ನಗರಸಭೆ ಸ್ವಚ್ಚ ಭಾರತ ಅಭಿಯಾನದಡಿ ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ನೀಡುತ್ತಾ ಬಂದಿದ್ದು, ಈ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸುವಂತಹ ಕಾರ್ಯಕ್ರಮವನ್ನು ನಿರಂತರವಾಗಿ ಹಮ್ಮಿಕೊಂಡಿದೆ ಎಂದು ಉಳ್ಳಾಲ
ನಗರಸಭೆಯ ಪೌರಾಯುಕ್ತೆ ವಾಣಿ ವಿ. ಆಳ್ವ ಹೇಳಿದರು.

Advertisement

ಮಹಾತ್ಮಾ ಗಾಂಧಿ ಜಯಂತಿ ಪ್ರಯುಕ್ತ ಉಳ್ಳಾಲ ನಗರಸಭೆ ವತಿಯಿಂದ ಸ್ವಚ್ಚ ಭಾರತ ಮಿಷನ್‌ ಅಭಿಯಾನದಡಿ ನಗರಸಭೆಯ 27 ವಾರ್ಡ್‌ಗಳಲ್ಲಿ ಹಮ್ಮಿಕೊಂಡ ‘ಒಂದು ಹೆಜ್ಜೆ ಸ್ವಚ್ಚತೆಯ ಕಡೆಗೆ ನಮ್ಮ ಉಳ್ಳಾಲ ಸ್ವಚ್ಚಸುಂದರ ಉಳ್ಳಾಲ ಇರಲಿ ನಿಮ್ಮ ಸಹಕಾರ’ ಎಂಬ ಸ್ವಚ್ಚತೆ ಕುರಿತ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ನಗರಸಭೆಯ ಅಧ್ಯಕ್ಷ ಹುಸೈನ್‌ ಕುಂಞಿಮೋನು ಉದ್ಘಾಟಿಸಿ, ಸ್ವಚ್ಚತಾ ಪ್ರತಿಜ್ಞೆ ಬೋಧಿಸಿದರು.

ನಗರಸಭೆ ಉಪಾಧ್ಯಕ್ಷೆ ಚಿತ್ರಾ, ಸ್ಥಾಯೀ ಸಮಿತಿ ಅಧ್ಯಕ್ಷ ಉಸ್ಮಾನ್‌ ಕಲ್ಲಾಪು, ಸದಸ್ಯರಾದ ಅಶ್ರಫ್‌ ಬಾವಾ, ಮೀನಾಕ್ಷಿ
ಬಂಗೇರ, ಇಸ್ಮಾಯಿಲ್‌ ಪೊಡಿಮೋನು, ಸುಂದರ್‌ ಉಳಿಯ, ಫಾರೂಕ್‌ ಉಳ್ಳಾಲ್‌, ಅಬ್ದುಲ್‌ ಫತಾಕ್‌, ಝರೀನಾ
ಬಾನು, ಸೂರ್ಯಕಲಾ ಸುರೇಶ್‌, ಮೊಹಮ್ಮದ್‌ ಮುಕ್ಕಚೇರಿ, ಇಬ್ರಾಹಿಂ ಶೌಕತ್‌, ದಿನೇಶ್‌ ರೈ, ಮಹಾಲಕ್ಷ್ಮೀ, ಎಂ.
ಮುಸ್ತಾಫ ಉಳ್ಳಾಲ್‌, ಶಶಿಕಲಾ ಶೆಟ್ಟಿ, ಕೆ. ಸುಕುಮಾರ್‌, ಗಿರಿಜಾ ಎಂ., ರಝೀಯಾ ಇಬ್ರಾಹಿಂ, ಫಾರೂಕ್‌ ಯು. ಎಚ್‌., ಸರಿತಾ ಜೀವನ್‌, ಬಾಝಿಲ್‌ ಡಿ’ಸೋಜಾ, ಭಾರತಿ ಎಂ., ಜೇನ್‌ಶಾಂತಿ ಡಿ’ಸೋಜಾ, ನಾಮ ನಿರ್ದೇಶಿತ ಸದಸ್ಯರಾದ ವಾರಿಜಾ ಬಿ.ಎಸ್‌., ರಿಚರ್ಡ್‌ ವೇಗಸ್‌, ರವಿ ಎಸ್‌., ಕಿಶೋರ್‌ ಕುಮಾರ್‌, ಯು.ಎಚ್‌. ಹಮ್ಮಬ್ಬ , ಕಾವೇರಿ ಲಯನ್ಸ್‌ ಕ್ಲಬ್‌ನ ಅಧ್ಯಕ್ಷ ಡಾ| ಪ್ರಿಯದರ್ಶಿನಿ ಮತ್ತು ಸದಸ್ಯರು ಹಾಜರಿದ್ದರು.

ಸದಸ್ಯ ಯು.ಎ. ಇಸ್ಮಾಯಿಲ್‌ ನಿರೂಪಿಸಿದರು. ಆರೋಗ್ಯ ನಿರೀಕ್ಷಕ ರಾಜೇಶ್‌ ಕೆ. ವಂದಿಸಿದರು. ತೊಕ್ಕೊಟ್ಟು ಜಂಕ್ಷನ್‌ನಲ್ಲಿ ಜಾಥಾ ಸಮಾರೋಪದ ವೇಳೆ ಸ್ಕೂಲ್‌ ಆಫ್‌ ಸೋಶಿಯಲ್‌ ವರ್ಕ್‌ ರೋಷನಿ ನಿಲಯದ ವಿದ್ಯಾರ್ಥಿಗಳಿಂದ ಸ್ವಚ್ಚತೆ ಜಾಗೃತಿ ಕುರಿತ ಬೀದಿ ನಾಟಕ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next