ಬೆಂಗಳೂರು: ನ್ಯಾಯಾಲಯದ ಆದೇಶ ಉಲ್ಲಂ ಸಿ ನಾಲ್ವರು ವ್ಯಾಪಾರಿಗಳಿಗೆ ಕೆ.ಆರ್.ಮಾರ್ಕೆಟ್‌ನಲ್ಲಿ ಮಳಿಗೆ ತೆರೆಯಲು ಅವಕಾಶ ಮಾಡಿಕೊಟ್ಟ ಪ್ರಕರಣ ಸಂಬಂಧ ಚಿಕ್ಕಪೇಟೆ ಕಾಂಗ್ರೆಸ್ ಶಾಸಕ ಆರ್.ವಿ. ದೇವರಾಜ್‌ಗೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ಕಾನೂನುಬಾಹಿರವಾಗಿ ಮಳಿಗೆ ತೆರೆಯಲು ಅವಕಾಶ ಮಾಡಿಕೊಟ್ಟ ಬಿಬಿಎಂಪಿ ಕ್ರಮ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿನೀತ್ ಕೊಠಾರಿ ಅವರಿದ್ದ ಏಕಸದಸ್ಯ ಪೀಠ, ನ್ಯಾಯಾಲಯದ ಆದೇಶ ಉಲ್ಲಂ ಸಿದ ನಿಮ್ಮ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ ಏಕೆ ಜರುಗಿಸಬಾರದು ಎಂದು ಪ್ರಶ್ನಿಸಿ ಶಾಸಕ ಆರ್.ವಿ.ದೇವರಾಜ್, ಬಿಬಿಎಂಪಿ ಆಯುಕ್ತರು, ಕೆ.ಆರ್.ಮಾರ್ಕೆಟ್ ವಿಭಾಗದ ಸಹಾಯಕ ಆಯುಕ್ತರು, ಬಿಬಿಎಂಪಿ ಸ್ಥಾಯಿ ಸಮಿತಿ ಸದಸ್ಯರಿಗೆ ನೋಟಿಸ್ ಜಾರಿಗೊಳಿಸಿದೆ.
ಕೋರ್ಟ್ ಆದೇಶ ಉಲ್ಲಂ ಸಿ ಶಾಸಕ ದೇವರಾಜ್ ಶಿಫಾರಸ್ಸಿನಂತೆ ಸ್ಥಾಯಿ ಸಮಿತಿ ನಿರ್ಣಯ ಕೈಗೊಂಡು ನಾಲ್ವರು ವ್ಯಾಪಾರಿಗಳಿಗೆ ಕಾನೂನುಬಾಹಿರವಾಗಿ ತರಕಾರಿ ಹಾಗೂ ಹಣ್ಣಿನ ಮಳಿಗೆ ನಡೆಸಲು ನಾಲ್ವರು ವ್ಯಾಪಾರಿಗಳಿಗೆ ಅವಕಾಶ ನೀಡಲಾಗಿದೆ ಎಂದು ಅರ್ಜಿದಾರರ ಪರ ವಕೀಲರು ದಾಖಲೆ ಸಲ್ಲಿಸಿದ್ದರು.
ಈ ಅಂಶವನ್ನು ಪರಿಗಣಿಸಿದ ನ್ಯಾಯಪೀಠ, ಶಾಸಕ ಆರ್.ವಿ ದೇವರಾಜ್, ನಿರ್ಣಯಕ್ಕೆ ಸಹಿಮಾಡಿದ್ದ ಸ್ಥಾಯಿ ಸಮಿತಿ ಸದಸ್ಯರಾದ ಎಂ. ಗಾಯಿತ್ರಿ, ಪ್ರತಿಭಾ ಧನರಾಜ್ , ಡಿ.ಜಿ ತೇಜಸ್ವಿನಿ ಸೀತಾರಾಮಯ್ಯ, ನಳಿನಿ ಎಂ ಮಂಜು, ಬಿಎಂ ಶೋಭಾ ಮುನಿರಾಂ, ಸರಸ್ವತಮ್ಮ, ಕೆ. ನಾಗಭೂಷಣ್, ಚಂದ್ರಪ್ಪ, ಆರ್ ಪದ್ಮಾವತಿ ಅಮರ್‌ನಾಥ್‌ಗೆ ನೋಟಿಸ್ ಜಾರಿಗೊಳಿಸಿದ್ದು, ಸಿವಿಲ್ ನ್ಯಾಯಾಂಗ ನಿಂದನೆ ಕೇಸು ದಾಖಲಿಸಿಕೊಳ್ಳಲು ವಿಭಾಗೀಯ ಪೀಠಕ್ಕೆ ಕೋರಿದೆ.
ಕೆ.ಆರ್ ಮಾರ್ಕೆಟ್ ಹಾಗೂ ಕಲಾಸಿಪಾಳ್ಯ ಮಾರ್ಕೆಟ್‌ನಲ್ಲಿ ಸಾರ್ವಜನಿಕ ಪ್ರದೇಶದಲ್ಲಿ ಹಣ್ಣು ಹಾಗೂ ತರಕಾರಿ ಮಳಿಗೆ ನಡೆಸಲು ಅವಕಾಶ ನೀಡಬಾರದು ಎಂದು ನೀಡಿದ್ದ ಹೈಕೋರ್ಟ್ ಆದೇಶ ಉಲ್ಲಂ ಸಿ ಬಿಬಿಎಂಪಿ ಅಧಿಕಾರಿಗಳು ನಾಲ್ಕು ಮಳಿಗೆಗಳನ್ನು ನಡೆಸಲು ಅವಕಾಶ ನೀಡಿದ್ದಾರೆ ಎಂದು ಆಕ್ಷೇಪಿಸಿ ಪಿಸಿ ರವಿಪ್ರಕಾಶ್ ಸೇರಿದಂತೆ ಮತ್ತಿತರರು ಹೈಕೋರ್ಟ್ ಮೊರೆ ಹೋಗಿದ್ದರು.