ಸಂತೆಮರಹಳ್ಳಿ: ಯಳಂದೂರು ಪಪಂಗೆ ಮೇ 29 ರಂದು ಚುನಾವಣೆ ನಡೆಯಲಿದ್ದು ಸ್ಪರ್ಧೆಯಲ್ಲಿರುವ 46 ಅಭ್ಯರ್ಥಿಗಳು ಪ್ರಚಾರದಲ್ಲಿ ತಲ್ಲೀನರಾಗಿದ್ದಾರೆ. ಅಲ್ಲದೇ, ಪ್ರಸ್ತುತ ದೂರದ ಊರುಗಳಲ್ಲಿರುವ ಒಬ್ಬೊಬ್ಬ ಮತದಾರನನ್ನು ಓಲೈಸಲು ಅಭ್ಯರ್ಥಿಗಳು ನಿರತರಾಗಿದ್ದಾರೆ.
ವಾರ್ಡ್‌ನಲ್ಲಿ 815 ಮತದಾರರು: 2ನೇ ವಾರ್ಡ್ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. ಕಳೆದ ಬಾರಿ ಜೆಡಿಎಸ್‌ನಿಂದ ವೈ.ಜಿ.ಶಿಲ್ಪಾ ಸ್ಪರ್ಧಿಸಿ ಗೆದ್ದಿದ್ದರು. ಈ ಬಾರಿ ಅವರ ಪತಿ ವೈ.ಜಿ. ರಂಗನಾಥಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಬಿಜೆಪಿಯಿಂದ ಶಿವಶಂಕರ್, ಬಿಎಸ್‌ಪಿಯಿಂದ ವೈ.ಎಲ್.ಸಿದ್ದರಾಜು ಸ್ಪರ್ಧಿಸಿದ್ದಾರೆ. ಪಕ್ಷೇತರ ಅಭ್ಯರ್ಥಿಯಾಗಿ ವೈ.ವಿ.ಉಮಾಶಂಕರ, ನಾಗಣ್ಣ, ವಿನೋದ್ ಕುಮಾರ್ ಇದ್ದಾರೆ. ಈ ವಾರ್ಡಿನಲ್ಲಿ 815 ಮತದಾರರು ಇದ್ದಾರೆ.
3ನೇ ವಾರ್ಡ್ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದ್ದು ಕಳೆದ ಬಾರಿ ಬಿಜೆಪಿಯ ವೈ.ಎನ್. ಮುರುಳಿಕೃಷ್ಣ ಆಯ್ಕೆಯಾಗಿದ್ದರು. ಈ ಬಾರಿಯೂ ಪಕ್ಷ ಅವರಿಗೇ ಟಿಕೆಟ್ ನೀಡಿದೆ. ಕಾಂಗ್ರೆಸ್‌ನಿಂದ ಮಹಾದೇವನಾಯಕ, ಬಿಎಸ್‌ಪಿಯ ಜಗದೀಶ್, ಜೆಡಿಎಸ್ ಪಕ್ಷದಿಂದ ಜಿ.ಶ್ರೀನಿವಾಸ ಪಕ್ಷೇತರ ಅಭ್ಯರ್ಥಿಗಳಾಗಿ ವೈ.ಸಿ.ಕೃಷ್ಣಮೂರ್ತಿ, ಕೃಪೇಂದ್ರ, ನಾಗರಾಜು ಸ್ಪರ್ಧಿಸಿದ್ದಾರೆ. ಪಟ್ಟಣದಲ್ಲಿ 444 ಅತೀ ಕಡಿಮೆ ಮತದಾರರನ್ನು ಹೊಂದಿರುವ ವಾರ್ಡ್ ಇದಾಗಿದೆ.
ತ್ರಿಕೋನ ಸ್ಪರ್ಧೆ : 4ನೇ ವಾರ್ಡ್ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. ಕಳೆದ ಬಾರಿ ಪಕ್ಷೇತರ ಅಭ್ಯರ್ಥಿ ಜೆ.ಶ್ರೀನಿವಾಸ್ ಜಯಗಳಿಸಿದ್ದರು. ಈ ಬಾರಿ ಕಾಂಗ್ರೆಸ್ ಪಕ್ಷದಿಂದ ಎಂ.ನಾಗರತ್ನ, ಬಿಜೆಪಿಯಿಂದ ವಿ.ಸವಿತಾ, ಬಿಎಸ್‌ಪಿಯಿಂದ ಬಿ.ಮಹಾದೇವಮ್ಮ ಸ್ಪರ್ಧಿಸಿದ್ದಾರೆ. ಇಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು 663 ಮತದಾರರಿದ್ದಾರೆ.
Advertisement
ನೇರ ಹಣಾಹಣಿ: 1ನೇ ವಾರ್ಡ್ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. ಕಳೆದ ಬಾರಿ ಇಲ್ಲಿಂದ ಕಾಂಗ್ರೆಸ್‌ನ ನಾಗರತ್ನ ಜಯಗಳಿಸಿದ್ದರು. ಈ ಬಾರಿ ಅವರ ಪತಿ ಮಹೇಶ್ ಟಿಕೆಟ್ ಪಡೆದಿದ್ದಾರೆ. ಬಿಎಸ್‌ಪಿ ಪ್ರಬಲ ಪೈಪೋಟಿ ನೀಡಲಿದ್ದು ಪಕ್ಷದ ಅಭ್ಯರ್ಥಿಯಾಗಿ ರಘು ಸ್ಪರ್ಧಿಸಿದ್ದಾರೆ. ಇವರೊಂದಿಗೆ ಪಕ್ಷೇತರ ಅಭ್ಯರ್ಥಿಯಾಗಿ ಜಯಲಕ್ಷ್ಮೀ ಪೈಪೋಟಿ ನೀಡುತ್ತಾರೆ. ಈ ವಾರ್ಡಿನ 666 ಮಂದಿ ಮೂವರ ಭವಿಷ್ಯ ಚುನಾವಣೆಯಲ್ಲಿ ನಿರ್ಧರಿಸಲಿದ್ದಾರೆ.
Related Articles
Advertisement
697 ಮಂದಿ ಮತದಾರರು: 5ನೇ ವಾರ್ಡ್ ಪ.ಜಾತಿಗೆ ಮೀಸಲಾಗಿದ್ದು ಕಳೆದ ಬಾರಿ ಬಿಜೆಪಿಯ ವೈ.ಎಸ್. ಭೀಮಪ್ಪ ಜಯಗಳಿಸಿದ್ದರು. ಕಾಂಗ್ರೆಸ್‌ನಿಂದ ಪಪಂನ ಮಾಜಿ ಅಧ್ಯಕ್ಷ ಕೆ.ಮಲ್ಲಯ್ಯ ಸ್ಪರ್ಧಿಸಿದ್ದಾರೆ. ಬಿಜೆಪಿಯಿಂದ ಪೌರ ಕಾರ್ಮಿಕ ಮಹಾದೇವ, ಬಿಎಸ್‌ಪಿಯಿಂದ ಎಲ್.ಲಿಂಗರಾಜು, ಪಕ್ಷೇತರ ಅಭ್ಯರ್ಥಿ ಎಂ.ಮಲ್ಲಿಕಾರ್ಜುನ ಕಣದಲ್ಲಿದ್ದಾರೆ. ಇಲ್ಲಿ 697 ಮತದಾರರಿದ್ದಾರೆ.
6 ನೇ ವಾರ್ಡ್ ಅನುಸೂಚಿತ ಪಂಗಡಕ್ಕೆ ಮೀಸಲಾಗಿದ್ದು ಬಿಜೆಪಿಯ ಜ್ಯೋತಿ ಗೆದ್ದಿದ್ದರು. 5ನೇ ವಾರ್ಡಿನಿಂದ ಕಳೆದ ಬಾರಿ ಗೆದ್ದಿದ್ದ ವೈ.ಎಸ್.ಭೀಮಪ್ಪ ಈ ಬಾರಿಯೂ ಬಿಜೆಪಿ ಟಿಕೆಟ್ ಪಡೆದು ಸ್ಪರ್ಧಿಸಿದ್ದಾರೆ. ಕಾಂಗ್ರೆಸ್‌ನಿಂದ ಎಸ್.ಮಂಜು, ಬಿಎಸ್‌ಪಿಯಿಂದ ಜಿ.ನವೀನ ಕಣದಲ್ಲಿದ್ದು 450 ಮತದಾರರು ಇಲ್ಲಿದ್ದಾರೆ.
ತ್ರಿಕೋನ ಸ್ಪರ್ಧೆ: 7 ನೇ ವಾರ್ಡ್ ಅನುಸೂಚಿತ ಪಂಗಡ ಮಹಿಳೆಗೆ ಮೀಸಲಾಗಿದ್ದು ಕಳೆದ ಬಾರಿ ಬಿಜೆಪಿ ಅಭ್ಯರ್ಥಿ ನಾಗರಾಜು ಗೆದ್ದಿದ್ದರು. ಬಿಜೆಪಿಯಿಂದ ಎಂ.ಚಂದ್ರಿಕಾ, ಕಾಂಗ್ರೆಸ್‌ನಿಂದ ಆರ್.ಪ್ರಭಾವತಿ, ಬಿಎಸ್‌ಪಿಯಿಂದ ನಾಗವೇಣಿ ಕಣದಲ್ಲಿದ್ದು ತ್ರಿಕೋನ ಸ್ಪರ್ಧೆ ಇದ್ದು 829 ಮತದಾರರಿದ್ದಾರೆ.
8ನೇ ವಾರ್ಡ್ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು ಕಾಂಗ್ರೆಸ್‌ನ ಬಿ.ರವಿ ಪುನರಾಯ್ಕೆ ಬಯಸಿ ಸ್ಪರ್ಧಿಸಿದ್ದಾರೆ. ಪ್ರತಿಸ್ಪರ್ಧಿಯಾಗಿ ಬಿಜೆಪಿಯ ಆರ್.ಭಾಗ್ಯರತ್ನ ಸ್ಪರ್ಧಿಸಿದ್ದು ಕೇವಲ ಇಬ್ಬರು ಮಾತ್ರ ಅಂತಿಮ ಕಣದಲ್ಲಿದ್ದಾರೆ. ಒಟ್ಟು 461 ಮತದಾರರು ಇಲ್ಲಿದ್ದಾರೆ.
ಪಕ್ಷೇತರ ಅಭ್ಯರ್ಥಿ ಕಣಕ್ಕೆ: 9 ನೇ ವಾರ್ಡ್ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿದ್ದು ಕಾಂಗ್ರೆಸ್ ಅಭ್ಯರ್ಥಿ ವೈ.ವಿ.ಉಮಾಶಂಕರ್ ಜಯಗಳಿಸಿದ್ದರು. ಈ ಬಾರಿ ಇದೇ ಪಕ್ಷದಿಂದ ಸುಶೀಲಾ, ಬಿಜೆಪಿಯಿಂದ ಮಹಾದೇವಮ್ಮ, ಬಿಎಸ್‌ಪಿಯಿಂದ ಶೋಭಾ, ಪಕ್ಷೇತರ ಅಭ್ಯರ್ಥಿಗಳಾಗಿ ಆರ್.ಮಹಾದೇವಮ್ಮ ಕಣದಲ್ಲಿದ್ದಾರೆ. ಇಲ್ಲಿ ಒಟ್ಟು 584 ಮತದಾರರಿದ್ದಾರೆ.
10 ನೇ ವಾರ್ಡ್ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. ಕಳೆದ ಬಾರಿ ಕಾಂಗ್ರೆಸ್‌ನ ಮಹಾದೇವಮ್ಮ ಗೆಲುವು ಸಾಧಿಸಿದ್ದರು. ಈ ಬಾರಿ ಕಾಂಗ್ರೆಸ್‌ನಿಂದ ಎಸ್.ಲಕ್ಷ್ಮೀ, ಬಿಜೆಪಿಯಿಂದ ಗಿರಿಜಾ, ಬಿಎಸ್‌ಪಿಯಿಂದ ನಜ್ಮಾ ಅಪ್ಸರ್‌ಖಾನ್, ಪಕ್ಷೇತರ ಅಭ್ಯರ್ಥಿಯಾಗಿ ನಿಂಗಮ್ಮಣಿ, ಎನ್.ತನುಜಾ ಕಣದಲ್ಲಿದ್ದಾರೆ. 708 ಮತದಾರರಿದ್ದಾರೆ.
ಸಾಮಾನ್ಯ ಮಹಿಳೆಗೆ ಮೀಸಲು: 1ನೇ ವಾರ್ಡ್ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. ಕಳೆದ ಬಾರಿ ಕಾಂಗ್ರೆಸ್‌ನಿಂದ ನಿಂಗರಾಜು ಗೆದ್ದಿದ್ದರು. ಈ ಬಾರಿ ಕಾಂಗ್ರೆಸ್‌ನಿಂದ ಶಾಂತಮ್ಮ ಬಿಜೆಪಿಯಿಂದ ಸರಸ್ವತಿ ಹಾಗೂ ಬಿಎಸ್‌ಪಿಯಿಂದ ಸಬೀಹಾ ಬೇಗಂ ಕಣದಲ್ಲಿದ್ದಾರೆ. ಕಾಂಗ್ರೆಸ್- ಬಿಜೆಪಿಗೆ ನೇರ ಪೈಪೋಟಿ ಇದ್ದು 623 ಮತದಾರರಿದ್ದಾರೆ.
ಪ್ರಮುಖ ರಾಷ್ಟೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿಗೆ ಈ ಬಾರಿ ಬಂಡಾಯ ಅಭ್ಯರ್ಥಿಗಳು, ಪಕ್ಷೇತರ ಅಭ್ಯರ್ಥಿಗಳು ಹಾಗೂ ಟಿಕೆಟ್ ವಂಚಿತರಿಂದ ದೊಡ್ಡ ಪ್ರಮಾಣದ ನಷ್ಟವಾಗುವ ಸಾಧ್ಯತೆ ಇದೆ. ಇದರೊಂದಿಗೆ ಬಿಎಸ್‌ಪಿ ಪ್ರಬಲ ಪೈಪೋಟಿ ನೀಡಲಿದೆ. ಸ್ಥಳೀಯ ಶಾಸಕರಿಗೆ ಇದು ಪ್ರತಿಷ್ಠೆಯ ಕಣವಾಗಿದೆ. ಇದಕ್ಕೆಲ್ಲಾ ಮೇ 29 ರಂದು ನಡೆಯಲಿರುವ ಚುನಾವಣೆಯಲ್ಲಿ 6941 ಮತದಾರರು ಯಾರ ಕೈ ಹಿಡಿಯಲಿದ್ದಾರೆ ಎಂಬುದು ನಿರ್ಧಾರವಾಗಲಿದೆ.
ಬಿಎಸ್‌ಪಿ ಪ್ರಬಲ ಪೈಪೋಟಿ:
ಪ್ರಮುಖ ರಾಷ್ಟೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿಗೆ ಈ ಬಾರಿ ಬಂಡಾಯ ಅಭ್ಯರ್ಥಿಗಳು, ಪಕ್ಷೇತರ ಅಭ್ಯರ್ಥಿಗಳು ಹಾಗೂ ಟಿಕೆಟ್ ವಂಚಿತರಿಂದ ದೊಡ್ಡ ಪ್ರಮಾಣದ ನಷ್ಟವಾಗುವ ಸಾಧ್ಯತೆ ಇದೆ. ಇದರೊಂದಿಗೆ ಬಿಎಸ್‌ಪಿ ಪ್ರಬಲ ಪೈಪೋಟಿ ನೀಡಲಿದೆ. ಸ್ಥಳೀಯ ಶಾಸಕರಿಗೆ ಇದು ಪ್ರತಿಷ್ಠೆಯ ಕಣವಾಗಿದೆ. ಇದಕ್ಕೆಲ್ಲಾ ಮೇ 29 ರಂದು ನಡೆಯಲಿರುವ ಚುನಾವಣೆಯಲ್ಲಿ 6941 ಮತದಾರರು ಯಾರ ಕೈ ಹಿಡಿಯಲಿದ್ದಾರೆ ಎಂಬುದು ನಿರ್ಧಾರವಾಗಲಿದೆ.
● ಫೈರೋಜ್ ಖಾನ್