Advertisement

ತರಗತಿ ಪ್ರಾರಂಭಿಸದಂತೆ ಸರಕಾರಕ್ಕೆ ಹೈಕೋರ್ಟ್‌ ನಿರ್ದೇಶನ

10:24 AM Jun 18, 2020 | mahesh |

ಮುಂಬಯಿ: ಪ್ರಾಥಮಿಕ ಮತ್ತು ಪೂರ್ವ ಪ್ರಾಥಮಿಕ ಶಾಲೆಗಳಿಗೆ ಆನ್‌ಲೈನ್‌ ಮತ್ತು ಆಫ್ಲೈನ್‌ ತರಗತಿಗಳನ್ನು ಸೆಪ್ಟಂಬರ್‌ವರೆಗೆ ಪ್ರಾರಂಭಿಸುವುದನ್ನು ನಿರ್ಬಂಧಿಸುವಂತೆ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗೆ (ಪಿಐಎಲ್) ಸ್ಪಂದಿಸುವಂತೆ ಬಾಂಬೆ ಹೈಕೋರ್ಟ್‌ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿದೆ. ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಅರ್ಜಿಗೆ ಪ್ರತಿಕ್ರಿಯಿಸಿದ ಸರಕಾರ, 2ನೇ ತರಗತಿಯವರೆಗಿನ ಶಾಲೆಗಳನ್ನು ಸೆಪ್ಟಂಬರ್‌ವರೆಗೆ ತೆರೆಯಲಾಗುವುದಿಲ್ಲ ಎಂದು ಸೋಮವಾರ ಅಧಿಸೂಚನೆ ಹೊರಡಿಸಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದೆ. ಅನಂತರ, 14 ವರ್ಷದವರೆಗಿನ ಮಕ್ಕಳಿಗೆ ತರಗತಿಗಳು ಪ್ರಾರಂಭವಾಗುವ ಸ್ಥಿತಿಯ ಬಗ್ಗೆ ತಿಳಿಯಲು ನ್ಯಾಯಾಲಯವು ಕೋರಿತು.

Advertisement

ಮುಖ್ಯ ನ್ಯಾಯಮೂರ್ತಿ ದೀಪಂಕರ್‌ ದತ್ತ ಮತ್ತು ನ್ಯಾಯಮೂರ್ತಿ ಕೆ. ಕೆ. ಟೇಟೆಡ್‌ ಅವರ ವಿಭಾಗೀಯ ಪೀಠ, ಸರಕಾರೇತರ ಸಂಸ್ಥೆ ಎಜ್ರಾ ಫೌಂಡೇಶನ್‌ ಸಲ್ಲಿಸಿದ ಪಿಐಎಲ್‌ ವಿಚಾರಣೆ ನಡೆಸುತ್ತಿ ರುವಾಗ, ವೀಡಿಯೋ ಕಾನ್ಫರೆನ್ಸಿಂಗ್‌ ಮೂಲಕ ವಕೀಲರಾದ ಶಶಿಕಾಂತ್‌ ಚೌಧರಿ ಮತ್ತು ಮನೋಜ್‌ ಕುಮಾರ್‌ ಸಿಂಗ್‌ ಅವರು ಮಕ್ಕಳ ಆರೋಗ್ಯ ಮತ್ತು ಯೋಗಕ್ಷೇಮದ ಬಗ್ಗೆ ಹಲವಾರು ವಿಷಯಗಳ ಕುರಿತು ಪ್ರಸ್ತಾವಿಸಿದರು.

ಕೋವಿಡ್ ಸೋಂಕಿನ ಸಮಯದಲ್ಲಿ 14 ವರ್ಷದೊಳಗಿನ ವಿದ್ಯಾರ್ಥಿಗಳನ್ನು ಶಾಲೆಗೆ ಬರಲು ಹೇಳಿದರೆ ಮಕ್ಕಳನ್ನು ಅಪಾಯಕ್ಕೆ ತಲ್ಲಿದಂತಾಗುತ್ತದೆ. ದೀರ್ಘಾವಧಿಯವರೆಗೆ ಆನ್‌ಲೈನ್‌ ತರಗತಿಗಳಿಗೆ ಹಾಜರಾಗುವುದರಿಂದ ಅವರ ಆರೋಗ್ಯಕ್ಕೂ ಮತ್ತಷ್ಟು ಅಪಾಯವನ್ನುಂಟು ಮಾಡುತ್ತದೆ. ಅಲ್ಲದೆ ಅನೇಕ ಪೋಷಕರು ಮಕ್ಕಳಿಗೆ ಆನ್‌ಲೈನ್‌ ತರಗತಿಗಳಿಗೆ ಹಾಜರಾಗಲು ಸೌಲಭ್ಯಗಳನ್ನು ಒದಗಿಸುವ ಸ್ಥಿತಿಯಲ್ಲಿರುವುದಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿ ಈ ವಯಸ್ಸಿನವರಿಗೆ ಶಾಲೆಗಳನ್ನು ಪ್ರಾರಂಭಿಸುವುದನ್ನು ಸೆಪ್ಟಂಬರ್‌ವರೆಗೆ ತಡೆಯುವಂತೆ ರಾಜ್ಯಕ್ಕೆ ನಿರ್ದೇಶನಗಳನ್ನು ಕೋರಿದರು.

ಶುಲ್ಕ ಭರಿಸಲು ಒತ್ತಾಯ
ಲಾಕ್‌ಡೌನ್‌ ಸಮಯದಲ್ಲಿ ಪೋಷ ಕರು ಎದುರಿಸುತ್ತಿರುವ ಹಣಕಾಸಿನ ಸಮಸ್ಯೆಗಳಿಂದಾಗಿ, 2020-21ರ ಶೈಕ್ಷಣಿಕ ವರ್ಷಕ್ಕೆ ಖಾಸಗಿ ಶಾಲೆಗಳಿಗೆ ಸಾಮಾನ್ಯ ಶುಲ್ಕ ರಚನೆಗಾಗಿ ರಾಜ್ಯವು ಮಾರ್ಗಸೂಚಿಗಳನ್ನು ರೂಪಿಸಬೇಕು ಎಂದು ಅರ್ಜಿದಾರರು ತಿಳಿಸಿದರು. ಶೈಕ್ಷಣಿಕ ವರ್ಷಕ್ಕೆ ಯಾವುದೇ ತರಗತಿಗಳು ನಡೆಯದಿದ್ದರೂ ಕೆಲವು ಶಾಲೆಗಳು ಶುಲ್ಕವನ್ನು ಪಾವತಿಸಲು ಪೋಷಕರನ್ನು ಒತ್ತಾಯಿಸುವ ಅನೇಕ ಕಂಡುಬಂದಿವೆ. ಆದ್ದರಿಂದ ಶಾಲೆಗಳನ್ನು ತೆರೆಯುವ ಮಾರ್ಗಸೂಚಿಗಳನ್ನು ರೂಪಿಸಲು ನ್ಯಾಯಾಲಯದ ಮೇಲ್ವಿಚಾರಣೆ ಸಮಿತಿ ಇರಬೇಕು ಎಂದು ಅವರ ವಕೀಲರು ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next