Advertisement

Batla House Encounter : ಗಲ್ಲು ಶಿಕ್ಷೆಯಿಂದ ಬಚಾವಾದ ಆರೋಪಿ ಅರಿಜ್ ಖಾನ್

03:46 PM Oct 12, 2023 | sudhir |

ನವದೆಹಲಿ: ನವದೆಹಲಿ: ಬಾಟ್ಲಾ ಹೌಸ್ ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಗುರುವಾರ ಮಹತ್ವದ ತೀರ್ಪು ನೀಡಿದೆ. ದೆಹಲಿ ಪೊಲೀಸ್ ಇನ್ಸ್‌ಪೆಕ್ಟರ್ ಮೋಹನ್ ಚಂದ್ ಶರ್ಮಾ ಅವರ ಹಂತಕ ಭಯೋತ್ಪಾದಕ ಅರಿಜ್ ಖಾನ್ ಅವರ ಮರಣದಂಡನೆಯನ್ನು ನ್ಯಾಯಾಲಯವು ಜೀವಾವಧಿಗೆ ಇಳಿಸಿದೆ.

Advertisement

2008ರಲ್ಲಿ ದೆಹಲಿ ಪೊಲೀಸ್ ಇನ್ಸ್ಪೆಕ್ಟರ್ ಮೋಹನ್ ಚಂದ್ ಶರ್ಮಾ ಅವರನ್ನು ಎನ್‌ಕೌಂಟರ್ ನಲ್ಲಿ ಗುಂಡಿಕ್ಕಿ ಕೊಲ್ಲಲಾಯಿತು. 2021ರಲ್ಲಿ, ದೆಹಲಿಯ ಸಾಕೇತ್ ನ್ಯಾಯಾಲಯವು ಬಾಟ್ಲಾ ಹೌಸ್ ಎನ್‌ಕೌಂಟರ್ ಗೆ ಸಂಬಂಧಿಸಿದ ಪ್ರಕರಣದಲ್ಲಿ ತನ್ನ ತೀರ್ಪನ್ನ ನೀಡಿತು. ಈ ಪ್ರಕರಣದಲ್ಲಿ ಸಾಕೇತ್ ನ್ಯಾಯಾಲಯವು ಇಂಡಿಯನ್ ಮುಜಾಹಿದ್ದೀನ್ ಭಯೋತ್ಪಾದಕ ಆರಿಜ್ ಖಾನ್’ನನ್ನ ದೋಷಿ ಎಂದು ಘೋಷಿಸಿ ಮರಣದಂಡನೆ ವಿಧಿಸಿತ್ತು.

ಅಪರಾಧಿ ಮತ್ತು ರಾಜ್ಯದ ಪರ ವಕೀಲರು ತಮ್ಮ ಸಲ್ಲಿಕೆಗಳನ್ನು ಮುಕ್ತಾಯಗೊಳಿಸಿದ ನಂತರ ಹೈಕೋರ್ಟ್ ಪೀಠವು ಆಗಸ್ಟ್‌ನಲ್ಲಿ ತನ್ನ ಆದೇಶವನ್ನು ಕಾಯ್ದಿರಿಸಿತ್ತು. ಶರ್ಮಾ ಅವರ ಹತ್ಯೆಗೆ ಸಂಬಂಧಿಸಿದ ಪ್ರಕರಣದಲ್ಲಿ ತನ್ನ ಶಿಕ್ಷೆ ಮತ್ತು ಮರಣದಂಡನೆಯನ್ನು ಪ್ರಶ್ನಿಸಿ ಆರಿಜ್ ಖಾನ್ ಸಲ್ಲಿಸಿದ್ದ ಮೇಲ್ಮನವಿಯ ಮೇರೆಗೆ ನ್ಯಾಯಮೂರ್ತಿ ಸಿದ್ಧಾರ್ಥ ಮೃದುಲ್ ಮತ್ತು ನ್ಯಾಯಮೂರ್ತಿ ಅಮಿತ್ ಶರ್ಮಾ ನೇತೃತ್ವದ ನ್ಯಾಯಪೀಠ ಈ ಆದೇಶವನ್ನ ಹೊರಡಿಸಿದೆ.

ಇದನ್ನೂ ಓದಿ: ಗಾಜಾ ಪಟ್ಟಿ ಮೇಲೆ ಸುಲಭವಾಗಿ ಹಿಡಿತ ಸಾಧಿಸಲು ಸಾಧ್ಯವಿಲ್ಲ; ಇಸ್ರೇಲ್‌ ಗೆ ಹಮಾಸ್‌ ಸವಾಲು!

Advertisement

Udayavani is now on Telegram. Click here to join our channel and stay updated with the latest news.

Next