ಗಂಗಾವತಿ: ತಾಲೂಕಿನ ಇತಿಹಾಸ ಪ್ರಸಿದ್ಧ ಕಿಷ್ಕಿಂದಾ ಅಂಜನಾದ್ರಿ ಬೆಟ್ಟಕ್ಕೆ ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ರಿತುರಾಜ್ ಆವಸ್ತಿ ಕುಟುಂಬ ಸಮೇತರಾಗಿ ಶನಿವಾರ ಸಂಜೆ ಭೇಟಿ ನೀಡಿದರು.
ಬೆಟ್ಟದ ಕೆಳಗಿನ ಆಂಜನೇಯನ ಮೂರ್ತಿಗೆ ಮೊದಲು ಆವಸ್ತಿ ದಂಪತಿಗಳು ಪೂಜೆ ಮಾಡಿ ನಂತರ ಅಂಜನಾದ್ರಿ ಬೆಟ್ಟದ 575 ಮೆಟ್ಟಿಲುಗಳನ್ನು ಹತ್ತಿ ಆಂಜನೇಯ ಹಾಗೂ ಅಂಜಿನಿ ದೇವಿಯ ದರ್ಶನ ಪಡೆದರು. ನಂತರ ಕುಟುಂಬ ಸದಸ್ಯರೊಂದಿಗೆ ಅಂಜನಾದ್ರಿಯ ಸುತ್ತಲಿನ ಪ್ರಕೃತಿ ವೀಕ್ಷಿಸಿ ಸಂತೋಷದಿಂದ ಪೋಟೋ ತೆಗೆಸಿಕೊಂಡರು.
ಈ ಸಂದರ್ಭದಲ್ಲಿ ಅರ್ಚಕ ಮಹಾಂತ ವಿದ್ಯಾದಾಸ ಬಾಬಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರು ಅರುಣಾಂಶುಗಿರಿ, ಎಡಿಸಿ ಎಂ.ಪಿ.ಮಾರುತಿ, ತಹಸೀಲ್ದಾರ್ ಯು.ನಾಗರಾಜ, ಸಿಪಿಐ ಮಂಜುನಾಥ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳಿದ್ದರು.
ಝೆಡ್ ಕೆಟಗರಿ ಭದ್ರತೆಯ ಕಾರಣ ಮುಖ್ಯನ್ಯಾಯಮೂರ್ತಿಗಳು ಬಂದು ಹೋಗುವ ತನಕ ಸಾರ್ವಜನಿಕರಿಗೆ ಅಂಜನಾದ್ರಿಯನ್ನು ಹತ್ತಲು ಪೊಲೀಸ್ ಇಲಾಖೆ ಅವಕಾಶ ನೀಡಿರಲಿಲ್ಲ.