Advertisement

ಇಸ್ಕಾನ್‌ ಬಳಕೆಗೆ ಹೈಕೋರ್ಟ್‌ ತಡೆ

08:33 AM Jun 29, 2020 | mahesh |

ಮುಂಬಯಿ: “ಇಂಟರ್‌ನ್ಯಾಷನಲ್‌ ಸೊಸೈಟಿ ಫಾರ್‌ ಕೃಷ್ಣ ಕಾನ್ಶಿಯಸ್‌ನೆಸ್‌’ ಧಾರ್ಮಿಕ ಸಂಘಟನೆಯ ನೋಂದಾಯಿತ ಟ್ರೇಡ್‌ಮಾರ್ಕ್‌ “ಇಸ್ಕಾನ್‌’, ಭಾರತದಲ್ಲಿ ಚಿರಪರಿ­ಚಿತ ಗುರುತು ಎಂದು ಮುಂಬಯಿ ಹೈಕೋರ್ಟ್‌ ಘೋಷಿಸಿದೆ. ಹೀಗಾಗಿ, ತನ್ನ ಉಡುಪುಗಳ ಮಾರಾಟಕ್ಕೆ “ಇಸ್ಕಾನ್‌’ ಹೆಸರನ್ನು ಬಳಸ­ಕೂಡದು ಎಂದು ಉಡುಪು ತಯಾರಿಕಾ ಕಂಪೆನಿಗೆ ನಿರ್ದೇಶನ ನೀಡಿದೆ.

Advertisement

ಉಡುಪು ತಯಾರಿಕಾ ಮತ್ತು ಮಾರಾಟ ಕಂಪನಿ, ಇಸ್ಕಾನ್‌ ಆಪರಲ್‌ ಪ್ರೈವೇಟ್‌ ಲಿಮಿಟೆಡ್‌, “ಇಸ್ಕಾನ್‌’ ಹೆಸರಲ್ಲಿ ತನ್ನ ಕಂಪೆಯ ಉಡುಪುಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡುತ್ತಿತ್ತು. ಧಾರ್ಮಿಕ ಸಂಸ್ಥೆ, “ಇಸ್ಕಾನ್‌’, ಕಳೆದ ಫೆಬ್ರವರಿಯಲ್ಲಿ ಕಂಪೆನಿಗೆ ನೋಟಿಸ್‌ ಜಾರಿಗೊಳಿಸಿ, ತನ್ನ ಉತ್ಪನ್ನಗಳ ಮಾರಾಟಕ್ಕೆ ಈ ಹೆಸರನ್ನು ಬಳಸದಂತೆ ತಾಕೀತು ಮಾಡಿತ್ತು. ಅಲ್ಲದೆ, ಮಾರ್ಚ್‌ನಲ್ಲಿ ಈ ಸಂಬಂಧ ಮುಂಬಯಿ ಹೈಕೋರ್ಟ್‌ ನಿಂದ ಮಧ್ಯಂತರ ತಡೆಯಾಜ್ಞೆ ತಂದಿತ್ತು. ಬಳಿಕ, ಕಂಪೆನಿ ತನ್ನ ಹೆಸರನ್ನು ಅಲ್ಸಿಸ್‌ ನ್ಪೋರ್ಟ್ಸ್ ಪ್ರೈವೇಟ್‌ ಲಿಮಿಟೆಡ್‌ ಎಂದು ಬದಲಾಯಿಸಿ­ಕೊಂಡಿತ್ತು. ಆದರೆ, ಉತ್ಪನ್ನಗಳ ಮೇಲೆ “ಇಸ್ಕಾನ್‌’ ಹೆಸರು ಬಳಸುವುದನ್ನು ಮುಂದು­ವರಿಸಿತ್ತು.

ಶುಕ್ರವಾರ ವಿಡಿಯೋ ಕಾನ್ಫರೆನ್ಸ್‌ ಮೂಲಕ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯ­ಮೂರ್ತಿ ಬರ್ಗೆಸ್‌ ಪಿ. ಕೊಲಬವಾಲ್ಲಾ, “ಇಸ್ಕಾನ್‌’, ಧಾರ್ಮಿಕ ಸಂಘಟನೆಯ ಟ್ರೇಡ್‌ಮಾರ್ಕ್‌. ಹೀಗಾಗಿ, ಕಂಪೆನಿ ತನ್ನ ಉತ್ಪನ್ನಗಳ ಮೇಲೆ “ಇಸ್ಕಾನ್‌’ ಹೆಸರನ್ನು ಬಳಸಕೂಡದು ಎಂದು ತೀರ್ಪು ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next