ಪಟ್ನಾ: ನಿತೀಶ್ ಕುಮಾರ್ ನೇತೃತ್ವದ ಬಿಹಾರ ಸರಕಾರದಿಂದ ಕೈಗೊಳ್ಳುತ್ತಿರುವ ಜಾತಿ ಆಧಾರಿತ ಜನಗಣತಿಗೆ ಪಾಟ್ನಾ ಹೈಕೋರ್ಟ್ ಗುರುವಾರ ಬ್ರೇಕ್ ಹಾಕಿದೆ (ತಡೆ ನೀಡಿದೆ).
ಇದರ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಬಿಹಾರ ಸರಕಾರ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ. ಜಾತಿ ಆಧಾರಿತ ಜನಗಣತಿ ವಿರುದ್ಧ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಪೀಠ, ಕೂಡಲೇ ಜಾತಿ ಜನಗಣತಿಯನ್ನು ನಿಲ್ಲಿಸುವಂತೆ ಬಿಹಾರ ಸರಕಾರಕ್ಕೆ ಸೂಚಿಸಿತು. ಅಲ್ಲದೇ ಈಗಾಗಲೇ ಸಂಗ್ರಹಿಸಲಾದ ಮಾಹಿತಿಯನ್ನು ಸುರಕ್ಷಿತವಾಗಿ ರಕ್ಷಿಸುವಂತೆ ಹಾಗೂ ಅಂತಿಮ ತೀರ್ಪು ಪ್ರಕಟಿಸು ವವರೆಗೆ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳದಂತೆ ಸರಕಾರಕ್ಕೆ ತಾಕೀತು ಮಾಡಿತು.