Advertisement
ಬೆಂಗಳೂರಿಗೆ ತೆರಳುವ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಕ್ಷದ ಹೈಕಮಾಂಡ್ ನೀವು ಈ ಚುನಾವಣೆಯಲ್ಲಿ ಸ್ಪರ್ಧಿಸಲೇಬೇಕು ಎಂಬುದಾಗಿ ಸೂಚಿಸಿದರೆ ಸ್ಪರ್ಧಿಸುವೆ ಎಂದರು. ಪಕ್ಷದ ವರಿಷ್ಠರು ಗುರುವಾರ ನನ್ನ ಜತೆ ಮಾತನಾಡಿದರು. ಅದೇ ಮೊದಲ ಮಾತುಕತೆ. ನೀವು ಮೂರು ಸಲ ನಿಂತಿದ್ದೀರಾ, ನಿಮ್ಮ ತಂದೆಯವರಿಗೆ ಟಿಕೆಟ್ ಕೊಡಬೇಕು ಅಂತ ಹೇಳಿದ್ದರು. ನಿಮ್ಮ ತಂದೆಯವರೊಂದಿಗೆ ಮಾತನಾಡಿದಾಗ ಫ್ಯಾಮಿಲಿ ಹಾಗೂ ಆರೋಗ್ಯದ ಸಮಸ್ಯೆ ಪ್ರಸ್ತಾಪವಾಯಿತು.
Related Articles
Advertisement
ಬೇಸರಕ್ಕೆ ಟಿಕೆಟ್ ಬೇಡವೆಂದೆದಾವಣಗೆರೆ: ಸಚಿವ ಸ್ಥಾನ ಕೇಳಿದರೆ ವಯಸ್ಸಾಗಿದೆ ಅಂತ ಹೇಳಿ ಈಗ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ಕೊಡುತ್ತಾರೆ. ಇದೇ ಕಾರಣಕ್ಕೆ ನಾನು ಟಿಕೆಟ್ ಬೇಡವೆಂದು ಹೇಳಿದ್ದೇನೆ ಎಂದು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ತಿಳಿಸಿದ್ದಾರೆ. ಶುಕ್ರವಾರ ಮಾಧ್ಯಮದವರೊಂದಿಗೆ ತಾವು ಟಿಕೆಟ್ ನಿರಾಕರಿಸಿರುವ ಸಂಬಂಧ ಪ್ರತಿಕ್ರಿಯಿಸಿದ ಅವರು, ಈಗಾಗಲೇ ನನ್ನ ಅಭಿಪ್ರಾಯವನ್ನು ಪಕ್ಷದ ವರಿಷ್ಠರಿಗೆ ತಿಳಿಸಿರುವೆ. ಬೇರೆ ಯಾರಾದರೂ ಸ್ಪರ್ಧಿಸಿದರೆ ಅವರನ್ನು ಬೆಂಬಲಿಸುವೆ. ನಾನು ಹೈಕಮಾಂಡ್ ಬಳಿ ಯಾರ ಹೆಸರನ್ನೂ ಹೇಳಿಲ್ಲ. ತಮ್ಮ ಪುತ್ರ ಮಾಜಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ಸ್ಪರ್ಧಿಸಿದರೂ ಸಹ ಸಂತೋಷ ಎಂದು ಹೇಳಿದರು. ಸಚಿವ ಸ್ಥಾನ ನೀಡದಿರುವುದಕ್ಕೆ ತಮಗೆ ಬೇಸರವೂ ಆಗಿದೆ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು. ಕಾಂಗ್ರೆಸ್‌ನಿಂದ ನಾನ್ ರೆಡಿ
ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ವಿಚಾರದಿಂದ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಹಿಂದೆ ಸರಿದಿದ್ದು, ನನಗೇ ಟಿಕೆಟ್ ಕೊಡುವಂತೆ ಪಕ್ಷದ ವರಿಷ್ಠರಿಗೆ ಮನವಿ ಮಾಡಿದ್ದಾರೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಬಿ. ಮಂಜಪ್ಪ ಹೇಳಿದ್ದಾರೆ. ಶುಕ್ರವಾರ, ಶಾಮನೂರು ಶಿವಶಂಕರಪ್ಪನವರ ನಿವಾಸದಲ್ಲಿ ತಮ್ಮನ್ನು ಭೇಟಿಯಾದ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಸಹ ಚುನಾವಣೆಯಲ್ಲಿ ಸ್ಪರ್ಧಿಸಲು ಆಲೋಚಿಸಿಲ್ಲ. ಇಬ್ಬರೂ ಸಹ ನನ್ನ ಹೆಸರು ಪರಿಗಣಿಸುವಂತೆ ಹೈಕಮಾಂಡ್‌ಗೆ ತಿಳಿಸಿದ್ದಾರೆ ಎಂದರು. ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ವಿಚಾರದಲ್ಲಿ ತೇಜಸ್ವಿ ಪಟೇಲ್ ಹೆಸರು ಹೇಗೆ ಬಂತೋ ಗೊತ್ತಿಲ್ಲ. ಆದರೆ, ಶಾಮನೂರು ಕುಟುಂಬದವರು ಚುನಾವಣೆಯಲ್ಲಿ ಸ್ಪರ್ಧಿಸಲು ನಿರಾಕರಿಸಿದಲ್ಲಿ ಕಾಂಗ್ರೆಸ್ ಪಕ್ಷದವರಿಗೇ ಟಿಕೆಟ್ ನೀಡಬೇಕು. ಅನ್ಯರಿಗೆ ಕೊಟ್ಟಲ್ಲಿ ಆ ಬಗ್ಗೆ ಚರ್ಚಿಸಿ, ನಿರ್ಧಾರ ಕೈಗೊಳ್ಳಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.