ವರಲ್ಲಿಯೂ ಹೆಚ್ಚಾಗಿ ಕಂಡುಬರುತ್ತಿದೆ. ಅವರಲ್ಲಿಅನೇಕರು ಔಷಧ ಚಿಕಿತ್ಸೆ ಆರಂಭಿಸಲು ಹಿಂಜರಿಯುತ್ತಿದ್ದಾರೆ. ಹೀಗಾಗಿ ಔಷಧಶಾಸ್ತ್ರೀಯ ಚಿಕಿತ್ಸೆಯ ಹೊರತಾಗಿ ಅಧಿಕ ರಕ್ತದೊತ್ತಡವನ್ನು ಹೇಗೆ ನಿಯಂತ್ರಣದಲ್ಲಿ ಇರಿಸಿಕೊಳ್ಳಬಹುದು ಎಂಬುದನ್ನು ನೋಡೋಣ.
Advertisement
ಅಧಿಕ ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳಲು ನೈಸರ್ಗಿಕವಾಗಿ ಅನುಸರಿಸಬಹುದಾದ ವಿಧಾನಗಳು ಯಾವುವು ಎಂದರೆ;– ಸೋಡಿಯಂ ಸೇವನೆಯನ್ನು ಕಡಿಮೆ ಮಾಡುವುದು: ಅಧಿಕ ರಕ್ತದೊತ್ತಡವುಳ್ಳ ಜನರಲ್ಲಿ ಸುಮಾರು ಅರ್ಧಾಂಶದಷ್ಟು ಮತ್ತು ಸಹಜ ರಕ್ತದೊತ್ತಡ ಹೊಂದಿರುವವರಲ್ಲಿ ಕಾಲು ಭಾಗದಷ್ಟು ಮಂದಿ ಉಪ್ಪಿಗೆ ಸಂವೇದನಶೀಲತೆ ಹೊಂದಿರುತ್ತಾರೆ. ಹೀಗಾಗಿ ಉಪ್ಪಿನಂಶ ಸೇವನೆಯನ್ನು ದಿನಕ್ಕೆ 4ರಿಂದ 5 ಗ್ರಾಂ
ಗಳಿಗೆ ಮಿತಗೊಳಿಸಬೇಕು. ಇದು ಅಧಿಕ ರಕ್ತದೊತ್ತಡವನ್ನು ನೈಸರ್ಗಿಕವಾಗಿ ನಿಯಂತ್ರಣಕ್ಕೆ ತರುತ್ತದೆ.
Related Articles
Advertisement
– ಧೂಮಪಾನವನ್ನು ತ್ಯಜಿಸುವುದು: ಧೂಮಪಾನದಿಂದ ಹೃದ್ರೋಗಗಳಿಗೆ ತುತ್ತಾಗುವ ಸಾಧ್ಯತೆಗಳು ಹೆಚ್ಚುತ್ತವೆ. ಇದರಿಂದಾಗಿ ಅಧಿಕ ರಕ್ತದೊತ್ತಡ ಉಂಟಾಗಬಹುದು, ರಕ್ತನಾಳಗಳಿಗೆ ಹಾನಿಯಾಗಬಹುದು. ಆದ್ದರಿಂದ ಭವಿಷ್ಯದ ಆರೋಗ್ಯ ಅಪಾಯಗಳನ್ನು ದೂರ ಮಾಡುವುದಕ್ಕಾಗಿ ಧೂಮಪಾನವನ್ನು ತ್ಯಜಿಸಿ.
– ಪೊಟ್ಯಾಸಿಯಂ ಅಂಶ ಅಧಿಕವಿರುವ ಆಹಾರವಸ್ತುಗಳನ್ನು ಹೆಚ್ಚು ಸೇವಿಸಿ: ಪೊಟ್ಯಾಸಿಯಂ ಅಂಶ ಹೆಚ್ಚಿರುವ ಆಹಾರವಸ್ತುಗಳನ್ನು ಸೇವಿಸುವುದರಿಂದ ದೇಹಕ್ಕೆ ಸೋಡಿಯಂ ಅಂಶವನ್ನು ಹೊರಹಾಕಲು ಸಹಾಯವಾಗುತ್ತದೆ ಮತ್ತು ರಕ್ತನಾಳಗಳ ಮೇಲಿನ ಒತ್ತಡ ಕಡಿಮೆಯಾಗುತ್ತದೆ. ಆಧುನಿಕ ಆಹಾರ ಕ್ರಮಗಳಲ್ಲಿ ಸೋಡಿಯಂ ಅಂಶವೇ ಹೆಚ್ಚಾಗಿದ್ದು, ಪೊಟ್ಯಾಸಿಯಂ ಅಂಶ ಕಡಿಮೆಯಿರುತ್ತದೆ. ಹೀಗಾಗಿ ಡ್ಯಾಶ್ ಡಯಟ್ ಎಂದು ಕರೆಯಲ್ಪಡುವ ಆಹಾರಕ್ರಮವನ್ನು ಪಾಲಿಸಿ ಸಮತೋಲನ ಸಾಧಿಸುವುದು ಉತ್ತಮ. ಇದರಲ್ಲಿ ತಾಜಾ ಹಣ್ಣು ತರಕಾರಿ ಇತ್ಯಾದಿಗಳು ಹೆಚ್ಚು ಪ್ರಮಾಣದಲ್ಲಿರುತ್ತವೆ.
– ಜೀವನವಿಧಾನವನ್ನು ಬದಲಾಯಿಸಿಕೊಳ್ಳುವುದು: ಇತ್ತೀಚೆಗಿನ ದಿನಗಳಲ್ಲಿ ಮನೆಯಲ್ಲಿಯೇ ರಕ್ತದೊತ್ತಡದ ಮೇಲೆ ನಿಗಾ ಇರಿಸಬಹುದಾದ ಉಪಕರಣಗಳು ಲಭ್ಯವಿವೆ. ಈ ತಂತ್ರಜ್ಞಾನದ ಸದ್ಬಳಕೆಯನ್ನು ನಾವು ಮಾಡಿಕೊಳ್ಳಬೇಕು ಮತ್ತು ಪ್ರತಿದಿನವೂ ನಿಗಾ ಇರಿಸಿಕೊಳ್ಳುವ ಮೂಲಕ ನಮ್ಮ ಆರೋಗ್ಯ ಸ್ಥಿತಿಗತಿಯ ಅರಿವು ಹೊಂದಿರಬೇಕು.
-ಡಾ| ಬಸವಪ್ರಭುಕನ್ಸಲ್ಟಂಟ್, ಇಂಟರ್ನಲ್ ಮೆಡಿಸಿನ್ ವಿಭಾಗ, ಕೆಎಂಸಿ ಆಸ್ಪತ್ರೆ, ಮಂಗಳೂರು