ನಕಲು ಮಾಡುವುದನ್ನು ಕಂಡು ಅಧ್ಯಾಪಕರಿಗೆ ತಿಳಿಸುವ ಹಿತಶತ್ರುಗಳಂತಿರುವ ಸ್ನೇಹಿತರ ಕಣ್ತಪ್ಪಿಸಿ ಕಾಪಿ ಮಾಡುವುದು ಒಂದು ಅಸಾಮಾನ್ಯ ಕಲೆ…
ರಣರಂಗದಂತಿರುವ ಎಕ್ಸಾಂ ಹಾಲ…ನಲ್ಲಿ ಕಾಪಿ ಮಾಡೋದು ಬಹಳ ಕಾಮನ್ನು. ಪ್ರಶ್ನೆಗಳ ವಿರುದ್ಧ ಹೋರಾಡಲು ಇದೊಂದು ರಣತಂತ್ರ! ಚೀಟಿ ನೋಡಿ ಬರೆಯೋದೊಂದೇ ಕಾಪಿ ಅಲ್ಲ, ಪಕ್ಕದಲ್ಲಿ ಕುಳಿತಿರುವ ಸ್ನೇಹಿತರನ್ನು ಕೇಳಿ ಬರೆಯುವುದೂ ಒಂದು ರೀತಿಯ ಕಾಪಿ! ನಕಲು ಮಾಡುವುದನ್ನು ಕಂಡು ಅಧ್ಯಾಪಕರಿಗೆ ತಿಳಿಸುವ ಹಿತಶತ್ರುಗಳಂತಿರುವ ಸ್ನೇಹಿತರ ಕಣ್ತಪ್ಪಿಸಿ ಕಾಪಿ ಮಾಡುವುದು ಒಂದು ಅಸಾಮಾನ್ಯ ಕಲೆ.
“ಕಾಪಿ’ಯನ್ನು ಅನೇಕರು ಮಹಾಪರಾಧಕ್ಕೆ ಹೋಲಿಸುತ್ತಾರೆ. ಆದರೆ, ಹಾಗೆ ಕಾಪಿ ಮಾಡೋದ್ರಲ್ಲಿ ಸಿಗುವ ಖುಷಿ, ಮಜಾ, ಥ್ರಿಲ…, ಸುಮ್ಮನೆ ಗೋಣು ತಗ್ಗಿಸಿ, ನಿಯತ್ತಿನಿಂದ ಬರೆಯುವಾಗ ಸಿಗೋದಿಲ್ಲ. ಲೆಕ್ಚರರ್ ಹೊರಗಡೆ ಹೋದರೆ ಸಾಕು, ಎಕ್ಸಾಂ ಹಾಲ… ಪಿಸುಮಾತಿನ ಗೂಡಾಗಿ ಬಿಡುತ್ತೆ. ಹಾಗೆಯೇ, ಇನ್‌ವಿಜಿಲೇಟರ್‌ಗಳು ಯಾವಾಗ ನಿದ್ರೆಗೆ ಜಾರುತ್ತಾರೋ ಎಂದು ಕಾದು ಕೂರುವ ವಿದ್ಯಾರ್ಥಿಗಳಲ್ಲಿ ನಾನೂ ಒಬ್ಬಳಾಗಿಧಿದ್ದೆ!
ಒಮ್ಮೆ ಪರೀಕ್ಷೆ ಬರೆಯುತ್ತಿದ್ದೆ. ನಮ್ಮ ಎಕ್ಸಾಂ ಹಾಲ…ನಲ್ಲಿ ದುಪಟ್ಟಾ ಕಟ್ಟಿಕೊಳ್ಳುವ ಹುಡುಗಿ ಅಂದ್ರೆ ನಾನೊಬ್ಬಳೇ. ಆದ್ದರಿಂದ, ನಾನು ರೋಬೋ ಫಿಲ್ಮ…ನಂತೆ ಇಯರ್‌ಫೋನ್‌ಗಳನ್ನು ಕಿವಿಯಲ್ಲಿಟ್ಟುಕೊಂಡು ಎÇÉೋ ಕುಳಿತು ಹೇಳುವವರ ಉತ್ತರವನ್ನು ಆಲಿಸುತ್ತಾ ಬರೆಯುತ್ತಿ¨ªೆ. ಇಯರ್‌ಫೋನ್ ದುಪಟ್ಟಾದಲ್ಲಿ ಯಾರಿಗೂ ತಿಳಿಯದಂತೆ ಅಡಗಿ ಕುಳಿತಿತ್ತು. ಆ ಕ್ಷಣ ಒಂದೆಡೆ ಭಯ, ಮತ್ತೂಂದೆಡೆ ನಗು. ನಾನು ಕಾಪಿ ಮಾಡುತ್ತಿರುವುದು ಯಾರಿಗೂ ತಿಳಿಯುತ್ತಿಲ್ಲವಲ್ಲ ಎಂದು ನಗು. ಅಕಸ್ಮಾತ್ ಸಿಕ್ಕಿಬಿದ್ದರೆ, ಗತಿ ಏನು? ಅನ್ನೋ ಭಯ. ಆದರೂ, ಒಳ್ಳೆಯ ಉಪಾಯವನ್ನೇ ಹೂಡಿರುವೆ ಎಂದು ನನ್ನ ಮೇಲೆ ಹೆಮ್ಮೆಯೂ ಆಯಿತು. ಪ್ರಶ್ನೆಪತ್ರಿಕೆ ಸುಲಭವಾಗಿದ್ದರಿಂದ ಯಾಕೋ ಕಾಪಿ ಮಾಡಬಾರದಿತ್ತೇನೋ ಅನ್ನಿಸಿತು. ಆದರೆ, ನಾನು ಕಾಪಿ ಮಾಡಲು ಎರಡು ಬಲವಾದ ಕಾರಣವಿತ್ತು. ಒಂದು ತಲೆಗೆ ಹೋಗದ ಇಂಗ್ಲಿಷು, ಮತ್ತೂಂದು ಫೇಲಾದ್ರೆ ಕಾಲೇಜು ಬಿಡಿಸ್ತೀವಿ ಎಂಬ ಅಪ್ಪ- ಅಮ್ಮನ ಧಮ್ಕಿ. ಹಾಗಾಗಿ, ಶತಾಯಗತಾಯ ಪಾಸಾಗ್ಲೆàಬೇಕೆಂಬ ಒತ್ತಡದಲ್ಲಿ ಕಾಪಿ ಮಾಡಿದ್ದೆ.
ಯಾರಿಗೂ ಸಿಕ್ಕಿ ಬೀಳದೆ, ರಣರಂಗದಲ್ಲಿ ನೂರಾರು ಪ್ರಶ್ನೆಗಳೆದುರು ನಾನೇ ಗೆದ್ದಿದ್ದೆ!
– ಕೆ.ಎಸ್.ಕೆ., ಬಳ್ಳಾರಿ