Advertisement

ಪ್ರೀತಿಯ ದಾಸವಾಳ!

12:30 AM Jan 23, 2019 | |

ದೇವರಿಗೆ ಪ್ರಿಯವಾದುದು ದಾಸವಾಳ ಹೂ. ಅಂತೆಯೇ ಆರೋಗ್ಯಕ್ಕೂ ಹಿತವಾದುದು. ದಾಸವಾಳದ ಟೀಯನ್ನು ಎಂದಾದರೂ ಕುಡಿದಿದ್ದೀರಾ? ದಾಸವಾಳದ ಟೀ ಕೆಂಪು ಬಣ್ಣದ್ದಾಗಿರುತ್ತದೆ. ಈ ಟೀ ವಿಶೇಷತೆ ಎಂದರೆ ಬಿಸಿ ಅಥವಾ ತಣ್ಣಗೆ ಹೇಗೆ ಬೇಕಾದರೂ ಕುಡಿಯಬಹುದು. ಹಾಟ್‌ ಕಾಫಿ ಮತ್ತು ಕೋಲ್ಡ್‌ ಕಾಫಿ ಎಂದಿಲ್ಲವೆ, ಹಾಗೆ. ದಾಸವಾಳದ ಗಿಡಗಳ ಭಾಗಗಳನ್ನು ಕತ್ತರಿಸಿ ಬಿಸಿಲಲ್ಲಿ ಒಣಗಿಸಿ ಈ ಟೀಯನ್ನು ಸಿದ್ಧಪಡಿಸಲಾಗುತ್ತದೆ. ಅದರಿಂದ ಸಿಗುವ ಲಾಭಗಳು ಅನೇಕ. 

Advertisement

1. ಗಂಟಲು ಕೆರೆತ ನಿವಾರಣೆಯಾಗುತ್ತದೆ.
2. ಯಕೃತ್ತಿನ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ.
3. ಕೊಲೆಸ್ಟ್ರಾಲ್‌ಅನ್ನು ನಿಯಂತ್ರಿಸುತ್ತದೆ
4. ಅಧಿಕ ರಕ್ತದೊತ್ತಡ ವಿದ್ದರೆ ಹತೋಟಿಗೆ ತರುತ್ತದೆ.
5. ಐರನ್‌, ಮೆಗ್ನಿàಶಿಯಂ, ಪೊಟ್ಯಾಷಿಯಂ, ಸೋಡಿಯಂ ಖನಿಜಾಂಶಗಳಲ್ಲದೆ ವಿಟಮಿನ್‌ಗಳಾದ ನೈಯಾಸಿನ್‌ ಮತ್ತು ಫೋಲೇಟ್‌  ಅಧಿಕ ಪ್ರಮಾಣದಲ್ಲಿವೆ.
6. ಮೂತ್ರನಾಳದ ಸೋಂಕಿನಿಂದ ರಕ್ಷಿಸುತ್ತದೆ
7. ದಾಸವಾಳದ ಟೀ,ss ಕ್ಯಾನ್ಸರ್‌ ನಿರೋಧಕ ಗುಣವನ್ನು ಹೊಂದಿದೆ
8. ಮುಟ್ಟಿನ ಸಂದರ್ಭದಲ್ಲಿ ನೋವನ್ನು ಕಡಿಮೆ ಮಾಡುತ್ತದೆ.
9. ಖನ್ನತೆಯನ್ನು ನಿವಾರಿಸುವ ಫ್ಲೇವನಾಯ್ಡ ವಿಟಮಿನ್‌ ಇದರಲ್ಲಿದೆ.
10. ಜೀರ್ಣಕ್ರಿಯೆ ಸುಗಮವಾಗುತ್ತದೆ.
11. ಬಾಯಾರಿಕೆ ಹೋಗುತ್ತದೆ. ಈ ಕಾರಣಕ್ಕಾಗಿ ಅನೇಕ ಕ್ರೀಡಾಪಟುಗಳು ಆಟದ ನಡುವಿನ ವಿರಾಮದ ಸಮಯದಲ್ಲಿ ದಾಸವಾಳ ಟೀಗೆ ಮೊರೆ ಹೋಗುವರು. 
12. ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
 

Advertisement

Udayavani is now on Telegram. Click here to join our channel and stay updated with the latest news.

Next