Advertisement

ಕಾಳಗಿಯಲ್ಲಿ ಹೈಟೆಕ್‌ ಬಸ್‌ ನಿಲ್ದಾಣ: ಜಾಧವ

10:47 AM Dec 19, 2021 | Team Udayavani |

ಕಾಳಗಿ: ಪಟ್ಟಣದಲ್ಲಿ ಈಗಿರುವ ಹಳೆ ಬಸ್‌ ನಿಲ್ದಾಣದ ಹಿಂದಿನ ಸುಮಾರು ಎರಡು ಎಕರೆ ಜಾಗದಲ್ಲಿ ಅಂದಾಜು 6.69 ಕೋಟಿ ರೂ. ವೆಚ್ಚದಲ್ಲಿ ಹೈಟೆಕ್‌ ಬಸ್‌ ನಿಲ್ದಾಣ ನಿರ್ಮಾಣವಾಗಲಿದೆ ಎಂದು ಶಾಸಕ ಡಾ| ಅವಿನಾಶ ಜಾಧವ ಹೇಳಿದರು.

Advertisement

ಪಟ್ಟಣದಲ್ಲಿ ನೂತನ ಬಸ್‌ ನಿಲ್ದಾಣ ಕಟ್ಟಡ ಕಾಮಗಾರಿಗೆ ಶನಿವಾರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ಹೈಟೆಕ್‌ ಬಸ್‌ ನಿಲ್ದಾಣಕ್ಕಾಗಿ ದೊಡ್ಡ ಮೊತ್ತದ ಅನುದಾನ ತಂದಿದ್ದು, ಜನಮೆಚ್ಚುವಂತ ಗುಣ ಮಟ್ಟದ ಕಾಮಗಾರಿ ಮಾಡುವ ಮೂಲಕ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಅನು ದಾನದ ಹಣ ಸಾರ್ಥಕವಾಗುವಂತೆ ಮಾಡ ಬೇಕು ಎಂದು ಹೇಳಿದರು.

ಕಾಳಗಿ ತಾಲೂಕಿಗೆ ಬೇಕಾದ ಎಲ್ಲ ಸರ್ಕಾರಿ ಕಚೇರಿಗಳನ್ನು ಒಂದೊಂದಾಗಿ ಸ್ಥಾಪಿಸುವ ಉದ್ದೇಶ ಇಟ್ಟುಕೊಂಡಿದ್ದೇವೆ. ಕೆಲವೇ ದಿನಗಳಲ್ಲಿ ಮಿನಿ ವಿಧಾನಸೌಧ, ನ್ಯಾಯಾಲಯ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಲಿದ್ದೇವೆ ಎಂದು ಭರವಸೆ ನೀಡಿದರು.

ಕೊಟ್ಟ ಮಾತಿನಂತೆ ಚಿಂಚೋಳಿ ಸಕ್ಕರೆ ಕಾರ್ಖಾನೆ ನಿರ್ಮಾಣ ಪ್ರಾರಂಭವಾಗಿದೆ. ಇದಕ್ಕೆ ಪೂರಕವಾಗುವಂತೆ ಬೆಣ್ಣೆತೊರೆ ಕಾಲುವೆಗಳ ಕೆಲಸವನ್ನು ಶೀಘ್ರವೇ ಪೂರ್ಣಗೊಳಿಸಿ ಕಬ್ಬು ಬೆಳೆಯುವ ರೈತರ ಅನುಕೂಲಕ್ಕಾಗಿ ಎಲ್ಲ ಹೊಲಗಳಿಗೂ ಟ್ರ್ಯಾಕ್ಟರ್‌, ಬೈಕ್‌ ಹಾಗೂ ಇನ್ನಿತರ ವಾಹನಗಳ ಓಡಾಟಕ್ಕೆ ರಸ್ತೆ ನಿರ್ಮಿಸಲಾಗುವುದು ಎಂದು ಹೇಳಿದರು.

Advertisement

ಕಲಬುರಗಿ ಸಂಸದ ಡಾ| ಉಮೇಶ ಜಾಧವ ಮಾತನಾಡಿ, ರಾಜ್ಯದಲ್ಲಿ ಉದಯವಾದ ಹೊಸ ತಾಲೂಕುಗಳಲ್ಲೇ ಪ್ರಥಮ ಬಾರಿ ಕಾಳಗಿಯಲ್ಲೇ ಹೈಟೆಕ್‌ ಬಸ್‌ ನಿಲ್ದಾಣ ನಿರ್ಮಾಣವಾಗುತ್ತಿದೆ ಎಂದರಲ್ಲದೇ, ವಿಧಾನ ಪರಿಷತ್‌ ಚುನಾವಣೆಯಲ್ಲಿ ಅತಿ ಹೆಚ್ಚಿನ ಲೀಡ್‌ ನೀಡಿದ ಚಿಂಚೋಳಿ-ಕಾಳಗಿ ಜನತೆಗೆ ಅಭಿನಂದನೆ ಹೇಳಿದರು.

ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ, ಡಿಸಿಸಿ ಬ್ಯಾಂಕ್‌ ನಿರ್ದೇಶಕ ಗೌತಮ ಪಾಟೀಲ, ಚಿಂಚೋಳಿ ಬಿಜೆಪಿ ಮುಖಂಡ ಲಕ್ಷ್ಮಣ ಅವುಂಟಿ ಮಾತನಾಡಿದರು.

ಭೂದಾನಿ ಸಹೋದರರಾದ ಕೃಷ್ಣಯ್ಯ ಗುತ್ತೇ ದಾರ, ನಿಂಗಯ್ಯ ಗುತ್ತೇದಾರ, ತಾಪಂ ಮಾಜಿ ಅಧ್ಯಕ್ಷ ರೇವಣಸಿದ್ಧಪ್ಪ ಮಾಸ್ಟರ್‌ ಚಿಂಚೋಳಿ, ಜಿಪಂ ಮಾಜಿ ಸದಸ್ಯ ರಾಮಲಿಂಗಾರೆಡ್ಡಿ ದೇಶಮುಖ, ಚಂದ್ರಶೇಖರ ಹರಸೂರ, ಚಿಂಚೋಳಿ ಮಂಡಲ ಬಿಜೆಪಿ ಅಧ್ಯಕ್ಷ ಸಂತೋಷ ಗಡಂತಿ, ಪ್ರಧಾನ ಕಾರ್ಯದರ್ಶಿ ಶೇಖರ ಪಾಟೀಲ, ಸಂತೋಷ ಪಾಟೀಲ ಮಂಗಲಗಿ, ಸಂತೋಷ ಜಾಧವ, ದೇವಾ ಕದಂ, ಜಗದೀಶ ಪಾಟೀಲ ರಾಜಾಪುರ, ಶಿವಶರಣಪ್ಪ ಗುತ್ತೇದಾರ, ಉಮೇಶ ಚವ್ಹಾಣ, ರಮೇಶ ಕಿಟ್ಟದ, ಪ್ರಶಾಂತ ಕದಂ, ವಿಜಯಕುಮಾರ ಚೇಂಗಟಿ, ಶಿವರಾಜ ಪಾಟೀಲ ಅರಣಕಲ್‌, ತಾರು ಸೇಠ್ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next