Advertisement

ಪುಲ್ವಾಮಾ ದಾಳಿಕೋರರ ಹೆಡೆಮುರಿ ಕಟ್ಟಿದ “ಹಾಯ್‌ ಜಾನು…’ಸಂದೇಶ !

12:21 AM Feb 15, 2022 | Team Udayavani |

ಹೊಸದಿಲ್ಲಿ: ಪುಲ್ವಾಮಾ ದಾಳಿ ನಡೆದ ಒಂದು ತಿಂಗಳ ಅನಂತರ ಈ ದಾಳಿಯ ಪ್ರಮುಖ ಆರೋಪಿಗಳಾದ ಉಮರ್‌ ಫಾರೂಕ್‌ ಅಲ್ವಿ ಹಾಗೂ ಕಮ್ರನ್‌ ಎಂಬ ಉಗ್ರರನ್ನು 2019ರ ಮಾ. 29ರಂದು ಭದ್ರತಾ ಪಡೆಗಳು ಜಮ್ಮು- ಕಾಶ್ಮೀರದ ನೌಗಾಮ್‌ನಕಾಲಾ ಎಂಬ ಪ್ರಾಂತ್ಯದಲ್ಲಿ ಹೊಡೆದು ರುಳಿಸಿದರು. ಇವರ ಜಾಡು ಹಿಡಿದು ಹುಡುಕಿಕೊಂಡು ಹೋಗಿದ್ದರ ಹಿಂದಿನ ರೋಚಕ ಕತೆ ಈಗ ಬಯಲಾಗಿದೆ.

Advertisement

ಪುಲ್ವಾಮಾ ದಾಳಿ ನಡೆದ ಕೆಲವು ದಿನಗಳ ಅನಂತರ ಉಗ್ರ ಉಮರ್‌ ಫಾರೂಕ್‌, ಪುಲ್ವಾಮಾ ಜಿಲ್ಲೆಯ ಪೊಲೀಸ್‌ ವರಿ ಷ್ಠಾಧಿಕಾರಿಯ ಖಾಸಗಿ ಮೊಬೈಲಿಗೆ ವಾಟ್ಸ್‌ಆ್ಯಪ್‌ ಸಂದೇಶ ವೊಂ ದನ್ನು ರವಾನಿಸಿದ್ದ. ಅದರಲ್ಲಿ “ಹಾಯ್‌ ಜಾನು’ ಎಂದು ಬರೆದಿತ್ತಲ್ಲದೆ, ಆ ಪದಗಳ ಅನಂತರ ಪಿಸ್ತೂಲಿನ ಎಮೋಜಿ ಹಾಕಿ, “ನಾನು ನಿನ್ನ ಮನೆಗೆ ಬರುತ್ತೇನೆ, ಬಂದು ನಿನ್ನನ್ನು ಕೊಲ್ಲುತ್ತೇನೆ’ ಎಂದು ಬರೆಯಲಾಗಿತ್ತು.

ಗೊತ್ತಿಲ್ಲದ ಸಂಖ್ಯೆಯಿಂದ ಬಂದಿದ್ದ ಈ ಸಂದೇಶವನ್ನು ವರಿಷ್ಠಾಧಿಕಾರಿ ಹಾಯ್‌ ಜಾನು ಎಂದೇ ಸೇವ್‌ ಮಾಡಿಕೊಂ ಡಿ ದ್ದರು. ಬಳಿಕ ಈ ಸಂದೇಶದ ಜಾಡು ಹಿಡಿಯುವಂತೆ ಜಮ್ಮು ಕಾಶ್ಮೀರದ ಪೊಲೀಸ್‌ ಇಲಾಖೆಯ ತಾಂತ್ರಿಕ ವಿಭಾ ಗಕ್ಕೆ ವರ್ಗಾಯಿಸಿದ್ದರು. ಆದರೆ ಸಂದೇಶ ಬಂದಿದ್ದ ಅನಂತರ ಒಂದೆರಡು ತಿಂಗಳುಗಳವರೆಗೆ ಆ ಮೊಬೈಲ್‌ ಸಂಖ್ಯೆ ನಿಷ್ಕ್ರಿಯವಾಗಿತ್ತು. ಆದರೆ ಕಾರ್ಯಾಚರಣೆ ನಡೆದ ಹಿಂದಿನ ರಾತ್ರಿ (2019ರ 28ರ ರಾತ್ರಿ) ಉಗ್ರನೊಬ್ಬ ಈ ಸಿಮ್‌ ಕಾರ್ಡನ್ನು ತನ್ನ ಮೊಬೈಲಿನೊಳಗೆ ಇನ್ಸರ್ಟ್‌ ಮಾಡಿದ್ದ. ತತ್‌ಕ್ಷಣವೇ ಪುಲ್ವಾಮಾ ಪೊಲೀಸ್‌ ಸೈಬರ್‌ ಸೆಲ್‌ಗೆ ಅಲರ್ಟ್‌ ಬಂತು. ತತ್‌‌ಕ್ಷಣವೇ ಕಾರ್ಯಪ್ರವೃತ್ತರಾದ ಸಿಬಂದಿ ಉಗ್ರರಿರುವ ನಿಖರ ಜಾಗ ಪತ್ತೆ ಮಾಡಿ, ಪೊಲೀಸರಿಗೆ ರವಾನಿಸಿತು. ತತ್‌ಕ್ಷಣ ಪೊಲೀಸರು, ಭದ್ರತಾಪಡೆಗಳ ಜಂಟಿ ಕಾರ್ಯಾಚರ ಣೆಗೆ ಶ್ರೀಕಾರ ಹಾಕಲಾಯಿತು ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ:ಫೆ.16 ರಿಂದ ಪಿಯುಸಿ, ಪದವಿ ಕಾಲೇಜು ಆರಂಭ : ಶಿಕ್ಷಣ ಸಚಿವ

ಪ್ರಧಾನಿ, ರಾಜನಾಥ್‌ ಸಿಂಗ್‌ ಶ್ರದ್ಧಾಂಜಲಿ
ಪುಲ್ವಾಮಾದಲ್ಲಿ 2019ರಲ್ಲಿ ನಡೆದಿದ್ದ ಭೀಕರ ಉಗ್ರರ ದಾಳಿಯಲ್ಲಿ ಹುತಾತ್ಮರಾಗಿದ್ದ ಕೇಂದ್ರೀಯ ಮೀಸಲು ಪಡೆಯ (ಸಿಆರ್‌ಪಿಎಫ್) ಯೋಧರಿಗೆ ಪ್ರಧಾನಿ ನರೇಂದ್ರ ಮೋದಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಈ ಕುರಿತಂತೆ ಟ್ವೀಟ್‌ ಮಾಡಿರುವ ಅವರು, ಪುಲ್ವಾಮಾ ದಾಳಿಯಲ್ಲಿ ಹುತಾತ್ಮ ರಾದ ಯೋಧರ ಶೌರ್ಯ, ಬಲಿದಾನವು, ಈ ದೇಶವನ್ನು ಸದೃಢ ರಾಷ್ಟ್ರವನ್ನಾಗಿಸಲು ಪ್ರತಿಯೊಬ್ಬ ಭಾರತೀಯ ಯುವಜನರಿಗೆ ಸ್ಫೂರ್ತಿ ತುಂಬುತ್ತದೆ ಎಂದಿದ್ದಾರೆ. ರಕ್ಷಣ ಸಚಿವ ರಾಜನಾಥ್‌ ಸಿಂಗ್‌ ಟ್ವೀಟ್‌ ಮಾಡಿ, ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರ ತ್ಯಾಗವನ್ನು ಈ ದೇಶ ಎಂದಿಗೂ ಮರೆಯದು ಎಂದಿದ್ದಾರೆ. ವಿದೇಶಾಂಗ ಸಚಿವ ಜೈಶಂಕರ್‌ರವರು ತಮ್ಮ ಟ್ವೀಟ್‌ನಲ್ಲಿ, ಸಿಆರ್‌ಪಿಎಫ್ರವರ ತ್ಯಾಗ ಹಾಗೂ ಅವರ ಸ್ಮರಣೆ, ಭಾರತದ ಶತ್ರುಗಳೊಂದಿಗೆ ಹೋರಾಡಲು ಶಕ್ತಿ ತುಂಬುತ್ತದೆ ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next