Advertisement
ಇಂದು ಎಲ್ಲರ ಜೀವನವೂ “ಆನ್‌ಲೈನ್’ ಲೋಕದಲ್ಲಿ ಚಾಚಿಕೊಂಡಿದೆ. ಅದೊಂದು ದೊಡ್ಡ ಸಂತೆಯೆಂಬುದು ಅನೇಕರ ಅಂಬೋಣ. ಗಿಜಿ ಗಿಜಿ ಎನ್ನುವ ಸಂಭಾಷಣೆ ಅಲ್ಲುಂಟು. ಕೆಲವು ಸಲ ಮನರಂಜನೆ, ಅನೇಕ ಸಲ ಕಿರಿಕಿರಿ ಎನ್ನುವುದು ನಿಜವೇ. ಆದರೂ, ಈ ಆನ್‌ಲೈನ್ ಗದ್ದಲವನ್ನು ಬಿಟ್ಟಿರಲಾಗದು ಎಂಬುವಷ್ಟರ ಮಟ್ಟಿಗೆ ಬದುಕು ಅದರ ಮೇಲೆ ಮೋಹ ಹುಟ್ಟಿಸಿಕೊಂಡಿದೆ. ಫೇಸ್‌ಬುಕ್ ಆಕ್ಸಿಜನ್ ಆಗಿ, ವಾಟ್ಸಾéಪ್ ಮೂಗಿನಂತಾಗಿ, ಟ್ವಿಟ್ಟರ್ ಒಂದು ರೀತಿಯಲ್ಲಿ ಶ್ವಾಸಕೋಶವೇ ಆಗಿ, ಎಲ್ಲರಿಗೂ ಅನಿವಾರ್ಯವಾಗಿಬಿಟ್ಟಿದೆ.
Related Articles
Advertisement
ಹೀಗೆ ಒತ್ತಾಯದಿಂದ ಉತ್ತರ ಬಯಸುವ ಉದ್ದೇಶವಾದರೂ ಏನು? ಎಂಬುದು ನನ್ನ ಪ್ರಶ್ನೆ. ನಿಮ್ಮ ಸಂದೇಶಗಳಿಗೆ ಆಚೆ ಇರುವ ವ್ಯಕ್ತಿ ಪ್ರತಿಕ್ರಿಯಿಸುತ್ತಿದ್ದಾನೆಂದರೆ, ಆತನಿಗೆ ನೀವು ಕಳುಹಿಸಿದ ಸಂದೇಶಗಳಲ್ಲಿ ಆಸಕ್ತಿಯಿದೆ ಎಂದರ್ಥ. ಒಂದು ವೇಳೆ ಉತ್ತರ ನೀಡದೇ ಇದ್ದರೆ, ಆತ ನಿಮ್ಮ ಸಂದೇಶಗಳ ಬಗ್ಗೆ ನಿರಾಸಕ್ತಿ ಹೊಂದಿದ್ದಾನೆ ಎಂಬುದನ್ನು ಅರಿತುಕೊಳ್ಳಬೇಕು. ಹೀಗಾದಾಗ, ಆ ವ್ಯಕ್ತಿಗೆ ಮೇಲಿಂದ ಮೇಲೆ ಸಂದೇಶ ಕಳುಹಿಸುವುದನ್ನು ನಿಲ್ಲಿಸಬೇಕು. ಏಕೆಂದರೆ, ಯಾವುದನ್ನೂ ಒತ್ತಾಯದಿಂದ ಸಂಪಾದಿಸಬಾರದು.
“ಗುಡ್ ಮಾರ್ನಿಂಗ್’, “ಗುಡ್ ನೈಟ…’ನಿಂದ ಪ್ರಾರಂಭವಾಗಿ, “ಎಲ್ಲಿರುತ್ತೀರಾ?’, “ಏನು ಮಾಡುತ್ತೀರಾ?’, “ನಿಮ್ಮ ವಯಸ್ಸೆಷ್ಟು?’, “ಮದುವೆಯಾಗಿದೆಯಾ?’, “ಮಕ್ಕಳೆಷ್ಟು?’ - ಹೀಗೆ ಪ್ರಶ್ನೆಗಳ ಸುರಿಮಳೆಯಿಂದ ಬಚಾವಾಗುವುದು ಹೇಗೆಂಬುದೇ ಇಂದಿನ ದೊಡ್ಡ ಚಿಂತೆ. ಅತಿ ಖಾಸಗಿಯೆನಿಸಿದ ಪ್ರಶ್ನೆಗಳನ್ನು ಕೇಳಲೆತ್ನಿಸಿದಾಗ, ಅದಕ್ಕೆ ಯಾರೂ ಉತ್ತರಿಸುವುದಿಲ್ಲ. ಒಬ್ಬ ಅಪರಿಚಿತ ವ್ಯಕ್ತಿಗೆ ಗಂಡಾಗಲಿ/ ಹೆಣ್ಣಾಗಲಿ, ಕೆಲವೇ ಗಂಟೆ ಅಥವಾ ದಿನಗಳಲ್ಲಿ ತಮ್ಮೆಲ್ಲ ಖಾಸಗಿ ವಿಚಾರಗಳನ್ನು ಬಹಿರಂಗಪಡಿಸಲು ಇಷ್ಟವಿರುವುದಿಲ್ಲ. ಮೇಲಾಗಿ, ಯಾವುದೇ ವ್ಯಕ್ತಿಯ ವೈಯಕ್ತಿಕ ವಿಚಾರಗಳನ್ನು ಅವರ ಇಚ್ಛೆಯ ವಿರುದ್ಧವಾಗಿ ಕೇಳುವುದೂ ತಪ್ಪಾಗುತ್ತದೆ. ಪ್ರತಿಕ್ರಿಯೆ ಬೇಗನೆ ಬರದೇ ಇದ್ದಾಗ, “ನೀವು ತುಂಬಾ ಬ್ಯುಸಿ ಇದ್ದೀರಿ ಅನ್ಸುತ್ತೆ’, “ಬೇರೊಬ್ಬರೊಂದಿಗೆ ಚಾಟ್ ಮಾಡ್ತಿದ್ದೀರಾ?’ ಎಂಬ ಸಂದೇಶಗಳು ಬರುತ್ತವೆ. ಇದರ ಹಿಂದೆಯೇ “ಸಾರಿ, ನಿಮಗೆ ಡಿಸ್ಟರ್ಬ್ ಮಾಡಿದೆ ಅನ್ಸುತ್ತೆ’ ಅಂತ ಕಳುಹಿಸುತ್ತಾರೆ. ಇದು ಕಳುಹಿಸಿದ ಮೇಲೂ, ಮತ್ತೆ ಮೂರ್‍ನಾಲ್ಕು ಮೆಸೇಜುಗಳು ಪಕ್ಕಾ!
ನಿಜಕ್ಕೂ, ಇವನ್ನೆಲ್ಲ ಕೇಳುವುದು ಅನಿವಾರ್ಯವೇ? ಅಷ್ಟಕ್ಕೂ, ಆ ಇಲ್ಲಸಲ್ಲದ ಮಾಹಿತಿಗಳನ್ನು ಕಲೆಹಾಕಿ ಸಾಧಿಸುವುದಾದರೂ ಏನನ್ನು? ಯಾರಿಗೇ ಆಗಲಿ, ಚಾಟ್‌ಗೆ ಉತ್ತರಿಸಲು ಇಷ್ಟವಿಲ್ಲ ಅಂತನ್ನಿಸಿದಾಗ ಸುಮ್ಮನೆ ಇರುವುದು ಉತ್ತಮ. ಇದರಿಂದ ಸಂಬಂಧ ಅರಳುವ ಬದಲು, ಹಾಳಾಗಿ ಹೋಗುತ್ತದೆ.
– ನಕ್ಷತ್ರ ರಾಮ್‌ಗೊàಪಾಲ್ ನ್ಯೂಜೆರ್ಸಿ