ಜೆರುಸಲೇಂ: ಲೆಬನಾನ್ ಮೂಲದ ಉಗ್ರಗಾಮಿ ಗುಂಪು ಹೆಜ್‌ಬುಲ್ಲಾ ಮತ್ತು ಇಸ್ರೇಲ್ ಎರಡೂ ರವಿವಾರ (ಆ.25) ಪರಸ್ಪರರ ವಿರುದ್ಧ ದೊಡ್ಡ ಪ್ರಮಾಣದ ಮಿಲಿಟರಿ ಕಾರ್ಯಾಚರಣೆಗಳನ್ನು ಘೋಷಿಸಿವೆ. ಇದರ ಪರಿಣಾಮ ಇಸ್ರೇಲ್ ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಅವರು ದೇಶದಾದ್ಯಂತ 48 ಗಂಟೆಗಳ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ. ಸ್ಥಳೀಯ ಕಾಲಮಾನದ ಪ್ರಕಾರ ರವಿವಾರ ಬೆಳಗ್ಗೆ 6 ಗಂಟೆಯಿಂದ ಇದು ಜಾರಿಗೆ ಬಂದಿದೆ.
ಲೆಬನಾನ್ ನಲ್ಲಿನ ಹಿಜ್ಬುಲ್ಲಾ ಟಾರ್ಗೆಟ್ ಗಳ ಮೇಲೆ ಇಸ್ರೇಲಿ ಮಿಲಿಟರಿಯಿಂದ ಪೂರ್ವಭಾವಿ ದಾಳಿಯ ಕಾರಣದಿಂದ ಈ ಘೋಷಣೆ ಮಾಡಲಾಗಿದೆ. ಸಾರ್ವಜನಿಕ ಕೂಟಗಳ ಮೇಲೆ ನಿರ್ಬಂಧಗಳನ್ನು ಹೇರುವುದು ಮತ್ತು ಅಪಾಯದಲ್ಲಿರುವ ಸೈಟ್ ಗಳನ್ನು ಮುಚ್ಚುವುದು ಮುಂತಾದ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಇಸ್ರೇಲಿ ರಕ್ಷಣಾ ಪಡೆಗಳನ್ನು (IDF) ಸಕ್ರಿಯಗೊಳಿಸಲು ಈ ತುರ್ತು ಘೋಷಣೆಯನ್ನು ಮಾಡಲಾಗಿದೆ.
ಹೆಜ್ಬುಲ್ಲಾ ಸಂಘಟನೆ ನಡೆಸಿದ ದಾಳಿಗೆ ಪ್ರತಿಕಾರವಾಗಿ ಇಸ್ರೇಲ್ ಸೇನೆಯ ಕ್ರಮಕ್ಕೆ ಈ ಮುನ್ನೆಚ್ಚರಿಕೆ ವಹಿಸಲಾಗಿದೆ. ಉತ್ತರ ಇಸ್ರೇಲ್ ಕಡೆಗೆ ಸ್ಫೋಟಕಗಳಿಂದ ತುಂಬಿದ 320 ರಾಕೆಟ್‌ಗಳು ಮತ್ತು ಬಹು ಡ್ರೋನ್ ಗಳನ್ನು ಉಡಾವಣೆಗಳನ್ನು ಹೆಬ್ಬುಲ್ಲಾ ಮಾಡಿದೆ. 11 ಇಸ್ರೇಲಿ ಮಿಲಿಟರಿ ನೆಲೆಗಳನ್ನು ಗುರಿಯಾಗಿರಿಸಿಕೊಂಡು ದಾಳಿ ಮಾಡಿದೆ ಎಂದು ಹಿಜ್ಬುಲ್ಲಾ ಹೇಳಿದ್ದಾರೆ. ಇದೀಗ ಯುದ್ದ ಗಂಭೀರ ಸ್ವರೂಪ ಪಡೆದಿದೆ.
ಐಡಿಎಫ್ ಈ ದಾಳಿಯನ್ನು ಘೋಷಿಸಿದೆ, ಇಸ್ರೇಲಿ ಪ್ರದೇಶದ ಮೇಲೆ “ದೊಡ್ಡ ಪ್ರಮಾಣದ” ದಾಳಿಗಳಿಗೆ ಹೆಜ್ಬುಲ್ಲಾದ ಸಿದ್ಧತೆಗಳನ್ನು ಪತ್ತೆಹಚ್ಚಿದ್ದಾರೆ ಎಂದು ಹೇಳಿದ್ದಾರೆ. ಈ ಬೆದರಿಕೆಗಳನ್ನು ತಟಸ್ಥಗೊಳಿಸಲು ಇಸ್ರೇಲಿ ವಾಯುಪಡೆಯ ಫೈಟರ್ ಜೆಟ್‌ಗಳನ್ನು ನಿಯೋಜಿಸಲಾಗಿದೆ.
ಕೇಂದ್ರ ಮತ್ತು ಉತ್ತರ ಇಸೇಲ್ ಮೇಲೆ ಕೇಂದ್ರಿತವಾಗಿದ್ದ ಸಾವಿರಾರು ಹಿಜ್ಬುಲ್ಲಾ ರಾಕೆಟ್ ಗಳನ್ನು ತನ್ನ ಫೈಟರ್ ಜೆಟ್ ಗಳು ಉಡಾಯಿಸಿದೆ ಎಂದು ಇಸೇಲ್ ಹೇಳಿದೆ.
ತನ್ನ ಹಿರಿಯ ಕಮಾಂಡರ್ ನ ಸಾವಿಗೆ ಪ್ರತಿಕಾರವಾಗಿ ತಾನು ದಾಳಿ ಮಾಡುತ್ತಿರುವುದಾಗಿ ಹೆಜ್ಬುಲ್ಲಾ ಹೇಳಿದೆ.