Advertisement

Hezbollah: ಇಸ್ರೇಲ್‌ ವಿರುದ್ಧ ಹೆಜ್ಬುಲ್ಲಾ 50ಕ್ಕೂ ಅಧಿಕ ರಾಕೆಟ್‌ ದಾಳಿ

08:05 AM Aug 22, 2024 | Team Udayavani |

ಜೆರುಸಲೇಂ: ಇಸ್ರೇಲ್‌ ವಿರುದ್ಧ ಸದಾ ದ್ವೇಷದ ಮಾತು­ಗಳನ್ನಾಡುತ್ತಿರುವ ಹೆಜ್ಬುಲ್ಲಾ ಉಗ್ರ ಸಂಘಟನೆ ಗೋಲನ್‌ ಹೈಟ್ಸ್‌ ಮೇಲೆ 50ಕ್ಕೂ ಅಧಿಕ ರಾಕೆಟ್‌ಗಳನ್ನು ಉಡಾ­ಯಿಸಿದೆ.

Advertisement

ಗೋಲನ್‌ ಹೈಟ್ಸ್‌ ಎನ್ನುವುದು ಸಿರಿಯಾದ ಒಂದು ಭಾಗವಾಗಿದ್ದು, ಅದನ್ನು ಇಸ್ರೇಲ್‌ ತನ್ನ ವಶಕ್ಕೆ ಪಡೆದು­ಕೊಂಡಿದೆ. ಮಂಗಳವಾರ ಇಸ್ರೇಲ್‌ ನಡೆಸಿದ ದಾಳಿಯಲ್ಲಿ 19 ಮಂದಿಗೆ ಗಾಯ ಮತ್ತು ಒಬ್ಬ ಅಸುನೀಗಿದ್ದಕ್ಕೆ ಪ್ರತೀಕಾ­ರವಾಗಿ ಈ ದಾಳಿ ನಡೆಸಲಾಗಿದೆ ಎಂದು ಹೆಜ್ಬುಲ್ಲಾ ಹೇಳಿ­ಕೊಂಡಿದೆ.

ಗಾಜಾ ಪಟ್ಟಿಯಲ್ಲಿ ಕದನ ವಿರಾಮ ಜಾರಿ ಬಗ್ಗೆ ಅಮೆರಿಕ ವಿದೇಶಾಂಗ ಸಚಿವ ಆ್ಯಂಟನಿ ಬ್ಲಿಂಕನ್‌ ಈಜಿಪ್ಟ್ ಮತ್ತು ಕತಾರ್‌ಗಳಲ್ಲಿ ಸಂಧಾನಕಾರರ ಜತೆಗೆ ಮಾತುಕತೆ ನಡೆಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next