Advertisement

Hezbollah ಕಮಾಂಡರ್ ನನ್ನ ವಾಯುದಾಳಿಯಲ್ಲಿ ಹತ್ಯೆಗೈದಿರುವುದಾಗಿ ಹೇಳಿಕೊಂಡ ಇಸ್ರೇಲ್

09:30 AM Jul 31, 2024 | Team Udayavani |

ಜೆರುಸಲೇಂ: ಹೆಜ್ಬುಲ್ಲಾ ಮಿಲಿಟರಿ ಕಮಾಂಡರ್ ಫೌದ್ ಶುಕ್ರ್ ನನ್ನು ಮಂಗಳವಾರ ಬೈರುತ್ ಪ್ರದೇಶದಲ್ಲಿ ತನ್ನ ಫೈಟರ್ ಜೆಟ್‌ಗಳು ಹತ್ಯೆ ಮಾಡಿವೆ ಎಂದು ಇಸ್ರೇಲಿ ಮಿಲಿಟರಿ ಹೇಳಿಕೊಂಡಿದೆ.

Advertisement

ಇರಾನ್ ನಿರ್ಮಿತ Falaq-1 ರಾಕೆಟ್ ಬಳಸಿ ಮಜ್ದಲ್ ಶಾಮ್ಸ್ ದಾಳಿಯಲ್ಲಿ 12 ಮಕ್ಕಳಳು ಸಾವನ್ನಪ್ಪಿದ ಬೆನ್ನಲ್ಲೇ ಪ್ರತೀಕಾರಕ್ಕೆ ಮುಂದಾದ ಇಸ್ರೇಲ್ ಭಾರೀ ವಾಯು ದಾಳಿ ನಡೆಸಿ ಪ್ರಮುಖ ಕಮಾಂಡರ್ ನನ್ನ ಹತ್ಯೆ ಗೈಯಲಾಗಿದೆ.

ಹೆಜ್ಬುಲ್ಲಾ ಉಗ್ರ ಸಂಘಟನೆಯ ಹಿರಿಯ ಕಮಾಂಡರ್ ಆಗಿದ್ದ ಫೌದ್ ಶುಕ್ರ್ ರಣತಂತ್ರಗಳನ್ನು ನಡೆಸುತ್ತಿದ್ದ ಎಂದು ಇಸ್ರೇಲ್ ಸೇನೆ ಪ್ರಕಟಣೆಯಲ್ಲಿ ಹೇಳಿಕೊಂಡಿದೆ. ಇಸ್ರೇಲ್ ಮಿಲಿಟರಿ ವಕ್ತಾರ ಅಡ್ಮಿರಲ್ ಡೇನಿಯಲ್ ಹಗರಿ ಪ್ರತ್ಯೇಕ ವಿಡಿಯೋ ಸಂದೇಶ ಬಿಡುಗಡೆಗೊಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next