Advertisement

ಪರವಾನಗಿ ರದ್ದತಿಗೆ ಹಿತರಕ್ಷಣಾ ವೇದಿಕೆ ಅನಿರ್ದಿಷ್ಟ ಧರಣಿ

10:12 AM Oct 15, 2019 | Team Udayavani |

ಚಿಂಚೋಳಿ: ಪಟ್ಟಣದ ಹೊರವಲಯದಲ್ಲಿರುವ ಮೆಟ್ರಿಕ್ಸ್‌ ಅಗ್ರೋ ಪ್ರಾವೈಟ್‌ ವಿದ್ಯುತ ಉತ್ಪಾದನಾ ಘಟಕದ ಚಿಲುಮೆಯಿಂದ ಸೂಸುವ ಹೊಗೆ ವಾಸನೆಯಿಂದಾಗಿ ಪಕ್ಕದಲ್ಲಿರುವ ಶಾಲೆ ಕಾಲೇಜಿನ ವಿದ್ಯಾರ್ಥಿಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ.  ಅದರ ಪರವಾನಗಿ ರದ್ದು ಪಡಿಸುವಂತೆ ಒತ್ತಾಯಿಸಿ ತಾಲೂಕು ನಾಗರಿಕ ಹಿತರಕ್ಷಣಾ ವೇದಿಕೆ ಮುಖಂಡರು ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಪ್ರಾರಂಭಿಸಿದ್ದಾರೆ.

Advertisement

ಧರಣಿ ಸತ್ಯಾಗ್ರಹದ ನೇತೃತ್ವ ವಹಿಸಿದ ಪುರಸಭೆ ಸದಸ್ಯ ಆನಂದ ಟೈಗರ್‌ ಮಾತನಾಡಿ, ಚಿಂಚೋಳಿ-ತಾಂಡೂರ ರಾಜ್ಯ ಹೆದ್ದಾರಿ ಪಕ್ಕದಲ್ಲಿರುವ ಮೆಟ್ರಿಕ್ಸ್‌ ಅಗ್ರೋ ಪ್ರಾವೈಟ್‌ ವಿದ್ಯುತ್‌ ಉತ್ಪಾದನಾ ಘಟಕದಿಂದ ಆಗುತ್ತಿರುವ ಪರಿಣಾಮದ ಕುರಿತು ಸೆ.19ರಂದು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗಿದೆ. ತಹಶೀಲ್ದಾರ್‌ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಘಟಕದಿಂದ ಆರೋಗ್ಯದ ಮೇಲೆ ಆಗುತ್ತಿರುವ ಪರಿಣಾಮದ ಕುರಿತು ಜಿಲ್ಲಾಧಿ ಕಾರಿಗಳಿಗೆ ವರದಿ ಸಲ್ಲಿಸಿ ಘಟಕ ನಿಲ್ಲಿಸಬೇಕು ಎಂದು ತಿಳಿಸಿದ್ದಾರೆ.  ಆದರೆ ಜಿಲ್ಲಾಧಿಕಾರಿಗಳಿಂದ ಇದುವರೆಗೆ ಯಾವುದೇ ಸ್ಪಷ್ಟ ಉತ್ತರ ಬಂದಿರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತುಳಸೀರಾಮ ಪೋಳ, ಪಾಂಡುರಂಗ ಲೊಡನೋರ, ಶಿವಯೋಗಿ ರುಸ್ತಂಪುರ, ಜಗದೇವ ಗೌತವ, ವಾಮನರಾವ ಕೊರವಿ, ಕಾಶಿನಾಥ ಸಿಂಧೆ, ನಾಗು ಕಟ್ಟಿ, ಸುನೀಲ ತ್ರಿಪಾಟಿ, ರಾಜಕುಮಾರ ಕೊಳ್ಳುರ, ಶ್ರೀಹರಿ ಕಾಟಾಪುರ, ಲೋಕೇಶ ಐನೋಳಿ, ಪ್ರದೀಪ ತಿರಲಾಪುರ, ಹರ್ಷವರ್ಧನ ಮ್ಯಾಕಲ್‌, ಅನವರ ಖತೀಬ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next