Advertisement
ಕರ್ನಾಟಕ ವಿದ್ಯುತ್‌ತ್ಛಕ್ತಿ ನಿಯಂತ್ರಣ ಆಯೋಗದ ಅಧ್ಯಕ್ಷ ಶಂಭು ದಯಾಳ ಮೀನಾ, ಸದಸ್ಯರಾದಎಂ.ಡಿ. ರವಿ ಮತ್ತು ಎಚ್.ಎಂ. ಮಂಜುನಾಥಅವರ ಸಮ್ಮುಖದಲ್ಲಿ ನಗರದಲ್ಲಿ ವಿದ್ಯುತ್ಛಕ್ತಿ ದರ ಪಟ್ಟಿನಿಗದಿ ಕುರಿತು ಸಾರ್ವಜನಿಕ ಆಕ್ಷೇಪಣಾ ಅರ್ಜಿಗಳವಿಚಾರಣಾ ಸಭೆಯಲ್ಲಿ 26 ಅರ್ಜಿಗಳು ಸಲ್ಲಿಕೆಯಾಗಿ ವಿದ್ಯುತ್ ದರ ಏರಿಕೆ ಮಾಡದಂತೆ ಒಕ್ಕೊರಲಿನಿಂದ ಒತ್ತಾಯಿಸಲಾಯಿತು.
Related Articles
Advertisement
ಕುಮಟಾದ ಅರವಿಂದ ಪೈ ಮಾತನಾಡಿ, ಕೋವಿಡ್ ಸಂಕಷ್ಟದ ಈ ಸಮಯದಲ್ಲಿ ಸರಕಾರವೇ ಸಾಕಷ್ಟು ರಿಯಾಯಿತಿ ಘೋಷಣೆ ಮಾಡುತ್ತಿದ್ದರೆ ಹೆಸ್ಕಾಂ ದರ ಏರಿಸುತ್ತಿರುವುದು ಎಷ್ಟರ ಮಟ್ಟಿಗೆ ಸರಿ? ಕೋವಿಡ್ ಮಹಾಮಾರಿ ಸಂಪೂರ್ಣ ತೊಗಲಿ ಹೋಗಿರುವುದಾಗಿ
ಸರಕಾರವೇ ಹೇಳುವವರೆಗೂ ಹಾಗೂ ಹೆಸ್ಕಾಂನಲ್ಲಿ ಆಗಿರುವ ಅವ್ಯವಹಾರ ಬಗ್ಗೆ ಐಎಎಸ್ ಅಧಿಕಾರಿಗಳನ್ನು ಬಿಟ್ಟು ಹೊರಗಿನವರಿಂದಲೇ ತನಿಖೆ ಕೈಗೊಳ್ಳುವವರೆಗೂದರ ಪರಿಷ್ಕರಣೆ ಮಾಡಲೇಬಾರದು. ಹೆಸ್ಕಾಂನ ಈ ಪ್ರಸ್ತಾವನೆ ತಿರಸ್ಕರಿಸಬೇಕು. ಪ್ರತಿ ಸಲವೂ ಹೆಸ್ಕಾಂ ಬಗ್ಗೆ ಮೃಧು ಧೋರಣೆ ತೋರುವ ಆಯೋಗವು ಈಸಲವಾದರೂ ಚಾಟಿ ಬೀಸಬೇಕೆಂದು ಆಗ್ರಹಿಸಿದರು.ಹುಬ್ಬಳ್ಳಿಯ ಗೋಪಾಲ ದಿವಟಗಿ, ಹೆಸ್ಕಾಂಗೆಮಂಜೂರಾದ 16,936 ಸಿಬ್ಬಂದಿ ಪೈಕಿ 7,348 ಹುದ್ದೆಗಳುಖಾಲಿ ಇವೆ. ಈ ಹುದ್ದೆ ಭರ್ತಿ ಮಾಡಿಕೊಂಡು ವಿದ್ಯುತ್ ಸೋರಿಕೆಗೆ ಕಡಿವಾಣ ಹಾಕಬೇಕು. ಇದರ ಮೂಲಕಆಗುತ್ತಿರುವ ನಷ್ಟ ಸರಿಪಡಿಸಬೇಕು. ಯಾವುದೇ ಕಾರಣಕ್ಕೂ ದರ ಏರಿಸಬಾರದು ಎಂದರು.
ಧಾರವಾಡದ ನಾಯಕನಹುಲಿಕಟ್ಟಿಯ ಮಂಜುನಾಥ ಗೌರಿ, ಹಾರೋಬೆಳವಡಿಯ ಶಂಕ್ರರಪ್ಪ ಆಯಟ್ಟಿ, ಭಾರತೀಯ ಕಿಸಾನ್ ಸಂಘದ ಕಿರಣ ಮಜ್ಜಗಿ, ಬೆಳಗಾವಿಯ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿಯಪ್ರಭಾಕರ್ ನಾಗರಮುನೊಳ್ಳಿ, ಹಾವೇರಿಯಭಾರತೀಯ ಕಿಸಾನ್ ಸಂಘದ ಆರ್.ಕೆ.ದೇಶಪಾಂಡೆ,ಭರತೇಶ ಪಡನಾಳ, ಬೆಳಗಾವಿಯ ರವಿ ಸಿದ್ದಣ್ಣವರ, ಜಯಶ್ರೀ ಗೂಳಣ್ಣವರ, ಎ.ಸ್.ಕುಲಕರ್ಣಿ ಅವರು, ಹೆಸ್ಕಾಂನ ಟಿಸಿ ನಿರ್ವಹಣೆ, ವಿದ್ಯುತ್ ಪೂರೈಕೆಯಲ್ಲಿನಲೋಷದೋಷಗಳ ಬಗ್ಗೆ ಗಮನ ಸೆಳೆದು, ಯಾವುದೇಕಾರಣಕ್ಕೂ ದರ ಏರಿಕೆಗೆ ಆಯೋಗ ಅವಕಾಶಮಾಡಬಾರದೆಂದು ಮನವಿ ಮಾಡಿದರು.
ಕರ್ನಾಟಕ ವಾಣಿಜ್ಯೋದಮ ಸಂಸ್ಥೆ, ಕರ್ನಾಟಕಕರಾವಳಿ ಮಂಜುಗಡ್ಡೆ ಘಟಕ ಮತ್ತು ಶೈತ್ಯಾಗಾರಮಾಲೀಕರ ಸಂಘ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂಹಸಿರು ಸೇನೆಯಿಂದಲೂ ದರ ಪರಿಷ್ಕರಣೆ ಮಾಡದಂತೆ ಮನವಿ ಸಲ್ಲಿಸಲಾಯಿತು. ತಾಂತ್ರಿಕ ನಿರ್ದೇಶಕ ಎ.ಎಚ್. ಕಾಂಬ್ಳೆ, ಹಣಕಾಸು ನಿರ್ದೇಶಕ ಸುರೇಶ್.ಆರ್. ತೇರದಾಳ ಸೇರಿದಂತೆ ಹೆಸ್ಕಾಂನ ಹಿರಿಯ ಅಧಿಕಾರಿಗಳು, ರೈತರ ಮುಖಂಡರು ಸಭೆಯಲ್ಲಿದ್ದರು.
ಹೆಸ್ಕಾಂ ರಾತ್ರಿ ಹೊತ್ತು ವಿದ್ಯುತ್ ನೀಡುತ್ತಿರುವ ಕಾರಣ ಹೊಲಕ್ಕೆ ರಾತ್ರಿ ಹೊತ್ತು ನೀರು ಬಿಡಲು ಹೋದ ಗಂಡಮನೆಗೆ ಕ್ಷೇಮವಾಗಿ ಬರುವವರೆಗೂ ನೆಮ್ಮದಿಇಲ್ಲದಂತಾಗಿದೆ. ಕುಟುಂಬದ ನೆಮ್ಮದಿ,ಆರೋಗ್ಯಕ್ಕೆ ಹಾನಿಗೆ ಕಾರಣ ಆಗಿರುವ ಈಪದ್ಧತಿ ಕೈ ಬಿಟ್ಟು ಹಗಲು ಹೊತ್ತು ಏಳು ತಾಸುವಿದ್ಯುತ್ ಪೂರೈಸಿದರೆ ರೈತಾಪಿ ಸಮುದಾಯಕ್ಕೆಅನುಕೂಲ ಆಗಲಿದೆ. ಕೋವಿಡ್ ಸಂಕಷ್ಟದಲ್ಲಿ ಈಗಂತೂ ದರ ಏರಿಕೆ ಬೇಡ. –ಜಯಶ್ರೀ ಗೂಳಣ್ಣವರ, ರೈತ ಮಹಿಳೆ
ಹೆಸ್ಕಾಂ ಕಾರ್ಯನಿರ್ವಹಣೆಯಲ್ಲಿ ಪಾರದರ್ಶಕತೆ ಅಳವಡಿಸಿಕೊಂಡರೆಗುಣಮಟ್ಟದ ಸೇವೆ ನೀಡುವುದರ ಜತೆಗದರ ಕಡಿಮೆ ಮಾಡಬಹುದು. ಆದರೆ ಈಇಚ್ಛಾಶಕ್ತಿಯ ಕೊರತೆ ಇದೆ. ಕೋವಿಡ್‌ಸಂಕಷ್ಟದಲ್ಲಿ ಜನರು ಗ್ರಾಹಕರ ಮೇಲೆ ಹೊರೆ ಬೀಳದಂತೆ ದರ ಪರಿಷ್ಕರಣೆ ಕೈಬಿಡಬೇಕು. –ಶಂಕ್ರರಪ್ಪ ಆಯಟ್ಟಿ, ಹಾರೋಬೆಳವಡಿ ಗ್ರಾಮಸ್ಥ
ಕೋವಿಡ್ ಮಧ್ಯೆ ಭಾಗದಲ್ಲಿಯೇ ದರ ಏರಿಕೆ ಮಾಡಿದ ಕ್ರಮ ಸರಿಯಲ್ಲ. ಅಫಿಡೆವಿಟ್‌ನಲ್ಲಿಯೇ ಸುಳ್ಳು ಮಾಹಿತಿ ನೀಡುವ ಹೆಸ್ಕಾಂ ಮಾತು ನಂಬಿದರ ಪರಿಷ್ಕರಣೆ ಮಾಡಬಾರದು. ಈಗಂತೂ 10 ವರ್ಷ ದರ ಏರಿಸುವ ಅಗತ್ಯವೇ ಇಲ್ಲ. –ಅರವಿಂದ ಪೈ,ಕುಮಟಾ
ಕೋವಿಡ್ ಸಂಕಷ್ಟದ ಮಧ್ಯೆ ಕಳೆದ ನವೆಂಬರ್ ನಲ್ಲಿ ಆಯೋಗವು ಯುನಿಟ್ ಒಂದಕ್ಕೆ 0.25ಪೈಸೆ ಹೆಚ್ಚಿಸಿದ್ದು, ಈ ಹೊರೆಯನ್ನು ಭರಿಸಲಾಗದೇನಷ್ಟ ಅನುಭವಿಸುವಂತಾಗಿದೆ. ಹೀಗಿರುವಾಗ ಮತ್ತೆದರ ಏರಿಕೆ ಮಾಡಬಾರದು. –ರಾಜೇಂದ್ರ ಸುವರ್ಣ, ಅಧ್ಯಕ್ಷ, ಕರ್ನಾಟಕ ಕರಾವಳಿ ಮಂಜುಗಡ್ಡೆ ಘಟಕ ಮತ್ತು ಶೈತ್ಯಾಗಾರ ಮಾಲೀಕರ ಸಂಘ