ನವ ದೆಹಲಿ : ದೇಶದ ದೈತ್ಯ ದ್ವಿಚಕ್ರ ವಾಹನ ಉತ್ಪಾದನಾ ಕಂಪೆನಿ ಹೀರೋ ಮೊಟೊಕಾರ್ಪ್ ಹೊಸ ಎಲೆಕ್ಟ್ರಿಕ್ ಸ್ಕೂಟರ್ ನನ್ನು ತಯಾರಿಸುತ್ತಿದ್ದು ಮುಂಬರುವ ವರ್ಷದಲ್ಲಿ ಬಿಡುಗಡೆ ಮಾಡಲು ಮುಂದಾಗಿದೆ ಎಂದು ವರದಿ ತಿಳಿಸಿದೆ.
ಹೀರೊ ಮೊಟೊಕಾರ್ಪ್‌ನ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಇದಾಗಲಿದ್ದು, ಕಂಪನಿಯು ಅಧಿಕೃತವಾಗಿ ಈ ಬಗ್ಗೆ ಇನ್ನಷ್ಟೇ ಪ್ರಕಟಿಸಬೇಕಿದೆ.
ಓದಿ : ಎಸ್.ಎಸ್.ಎಲ್.ಸಿ ಪರೀಕ್ಷೆಗಳು ಮುಂದೂಡಿಕೆ: ಎಸ್.ಸುರೇಶ್ ಕುಮಾರ್
ಗುರಗಾಂವ್ ಮೂಲದ ಹೀರೊ ಮೊಟೊಕಾರ್ಪ್ 2022 ರ ಜನವರಿ-ಮಾರ್ಚ್ ಮೊದಲ ತ್ರೈಮಾಸಿಕದಲ್ಲಿ ಹೊಸ ಉತ್ಪನ್ನವನ್ನು ಬಿಡುಗಡೆ ಮಾಡುವ ಮೂಲಕ ಎಲೆಕ್ಟ್ರಿಕ್ ವಾಹನ ವಿಭಾಗಕ್ಕೆ ತನ್ನ ಮೊದಲ ಹೆಜ್ಜೆಯನ್ನು ಇಡಲು ಮುಂದಾಗಿದೆ ಎಂದು ಸುದ್ದಿ ಸಂಸ್ಥೆಗಳ ವರದಿಗಳು ತಿಳಿಸಿವೆ.
ಈ ಬಗ್ಗೆ ದೃಢಪಡಿಸಿದ ಹೀರೋ ಮೊಟೊಕಾರ್ಪ್ ನ ಸಿ ಎಫ್ ಒ ನಿರಂಜನ್ ಗುಪ್ತಾ, ಕಂಪನಿಯು ತನ್ನ ಮೊದಲ ಎಲೆಕ್ಟ್ರಿಕ್ ದ್ವಿಚಕ್ರ ವಾಹನವನ್ನು 2022-23ರ ಆರ್ಥಿಕ ವರ್ಷದಲ್ಲಿ ಬಿಡುಗಡೆ ಮಾಡಲಿದೆ ಎಂದು ಅವರು ಹೇಳಿದ್ದಾರೆ.
ಕೆಲವು ವರ್ಷಗಳ ಹಿಂದಷ್ಟೇ ಹೀರೋ ಮೊಟೊಕಾರ್ಪ್ ತನ್ನ ಎಲೆಕ್ಟ್ರಿಕ್ ಆವೃತ್ತಿಯ ಡ್ಯುಯೆಟ್ ಮತ್ತು ಮೆಸ್ಟ್ರೋವನ್ನು ಮಾರುಕಟ್ಟೆಗೆ ಪರಿಚಯಿಸಿತ್ತು. ಈ ಸ್ಕೂಟರ್ ಗಳಲ್ಲಿ ಒಂದನ್ನು ಮುಂದಿನ ಆರ್ಥಿಕ ವರ್ಷದ ಆರಂಭದಲ್ಲಿ ಅಧಿಕೃತವಾಗಿ ಪರಿಚಯಿಸಬಹುದೆಂದು ತಂತ್ರಜ್ಞಾನ ಕ್ಷೇತ್ರದ ತಜ್ಞರು ನಿರೀಕ್ಷಿಸಿದ್ದಾರೆ.
ಓದಿ : ಚಾಮರಾಜನಗರ ಘಟನೆಯ ನಂತರವೂ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿಲ್ಲ: ಸಿದ್ದರಾಮಯ್ಯ