Advertisement

ಹೆರಿಟೇಜ್‌ ವಿಲೇಜ್‌, ವಿಜಯನಾಥ ಶೆಣೈ ಸ್ಮಾರಕ ಅಂಚೆಚೀಟಿ 

12:22 PM Mar 22, 2017 | |

ಉಡುಪಿ: ಹೆರಿಟೇಜ್‌ ವಿಲೇಜ್‌, ವಿಜಯನಾಥ ಶೆಣೈ ಅವರ ಭಾವಚಿತ್ರವಿರುವ ಅಂಚೆ ಲಕೋಟೆಯನ್ನು ಅಂಚೆ ಇಲಾಖೆಯಿಂದ ಹೊರತರಲು ನಿರ್ಧರಿಸಲಾಗಿದೆ. ಈ ಕುರಿತು ಚಿತ್ರಗಳನ್ನು ಕಳುಹಿಸಿಕೊಡಲು ಪೋಸ್ಟ್‌ ಮಾಸ್ಟರ್‌ಜನರಲ್‌ ಅವರಿಂದ ಕರೆ ಬಂದಿದೆ ಎಂದು ಮಣಿ ಪಾಲದ ಉದ್ಯಮಿ ಟಿ. ಅಶೋಕ್‌ ಪೈ ತಿಳಿಸಿದರು.

Advertisement

ಶ್ರೀ ವೆಂಕಟರಮಣ ದೇವಸ್ಥಾನದ ಸಭಾಂಗಣ ದಲ್ಲಿ ಮಂಗಳವಾರ ನಡೆದ ವಿಜಯನಾಥ ಶೆಣೈ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ಸಿಂಡಿಕೇಟ್‌ ಬ್ಯಾಂಕ್‌ನಲ್ಲಿರುವಾಗ ಸಾರ್ವಜನಿಕ ಗಣೇಶೋತ್ಸವವನ್ನು ಆರಂಭಿಸಲು ಶೆಣೈ ಕಾರಣರಾದ ಕ್ಷಣಗಳನ್ನು ಸ್ಮರಿಸಿಕೊಂಡರು. “ಉದಯವಾಣಿ’ ಪ್ರಥಮ ಸಂಚಿಕೆ ಮುದ್ರಣಗೊಳ್ಳುವಾಗ ಶೆಣೈಯವರು ವಿಶೇಷ ಆಸಕ್ತಿ ತಳೆದು ಶ್ರಮಿಸಿದ್ದರು. ಪ್ರಥಮ ಸಂಚಿಕೆ ಹೊರ ಬರುವಾಗ ಬೆಳಗ್ಗೆ 10.30 ಗಂಟೆಯಾಗಿತ್ತು ಎಂದ ಅಶೋಕ್‌ ಪೈಯವರು, ಶೆಣೈಯವರು ಸದಾ ಹಣಕಾಸು ಸಮಸ್ಯೆಯಿಂದ ಬಳಲುತ್ತಿದ್ದರು. ಚಿನ್ನವನ್ನು ಅಡವಿಟ್ಟು ಕಲಾವಿದರಿಗೆ ಪಾವತಿ ಮಾಡಿದ್ದಿದೆ ಎಂದರು.

ಶೆಣೈಯವರು ಎಡ-ಬಲಪಂಥಾತೀತ ವ್ಯಕ್ತಿತ್ವ ಹೊಂದಿದ್ದರು ಎಂದು ಬೆಂಗಳೂರು ಬಿ.ವಿ. ಕಾರಂತ ಪ್ರತಿಷ್ಠಾನದ ಅಧ್ಯಕ್ಷ ಜಯರಾಮ ಪಾಟೀಲ್‌ ಹೇಳಿದರು. ಸಂಸ್ಕೃತಿಗೆ ಹೊಸ ವ್ಯಾಖ್ಯಾನ ನೀಡಿದ ಶೆಣೈ ಉಡುಪಿ- ಮಣಿಪಾಲದ ಸಾಕ್ಷೀಪ್ರಜ್ಞೆಯಾಗಿ ನಿಲ್ಲುತ್ತಾರೆ ಎಂದು ಸಾಹಿತಿ ಜಯಂತ ಕಾಯ್ಕಿಣಿ ಹೇಳಿದರು.  ಕೀರ್ತಿಗಾಗಿ ಹಾತೊರೆಯದ ವ್ಯಕ್ತಿತ್ವ ಶೆಣೈ ಯವರದು ಎಂದು ಶ್ರೀ ಲಕ್ಷ್ಮೀವೆಂಕಟೇಶ ದೇವಸ್ಥಾನದ ಆಡಳಿತ ಮೊಕ್ತೇಸರ ಪಿ.ವಿ. ಶೆಣೈ ತಿಳಿಸಿದರು. ಸಂಗೀತ ಸಭಾದಲ್ಲಿ ಶೆಣೈಯವರು ಸಲ್ಲಿಸಿದ ಸೇವೆಯನ್ನು ಅಧ್ಯಕ್ಷ ಟಿ. ರಂಗ ಪೈ ವಿವರಿಸಿದರು. ಹಸ್ತಶಿಲ್ಪ ಟ್ರಸ್ಟ್‌ ಅಧ್ಯಕ್ಷೆ ಧನ್ವಂತಿ ನಾಯಕ್‌ ಮಾತನಾಡಿದರು. ಶೆಣೈ ಅವರ ಪುತ್ರ ಯು. ಶ್ರೀನಿವಾಸ ಶೆಣೈ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next