Advertisement

ಸುಳ್ಳು ಸುದ್ದಿ ಕೊಟ್ರೆ 5 ಕೋಟಿ ದಂಡ!

12:04 PM Oct 05, 2019 | Nagendra Trasi |

ಸಿಂಗಾಪುರ: ಇನ್ನು ಮುಂದೆ ಸಿಂಗಾಪುರದಲ್ಲಿ ಸುಳ್ಳು ಸುದ್ದಿಗಳನ್ನೇನಾದರೂ ಹರಡಿದರೆ, ಪ್ರಕಟಿಸಿದರೆ 5 ಕೋಟಿ ದಂಡ, 10 ವರ್ಷ ಜೈಲು ಶಿಕ್ಷೆ ಗ್ಯಾರಂಟಿ…ಇಂಟರ್‌ನೆಟ್‌ನಲ್ಲಿ ಸುಳ್ಳು ಸುದ್ದಿ ಹರಡುವುದನ್ನು ತಡೆಯಲು ಸಿಂಗಾಪುರ ಸರ್ಕಾರ ಕಠಿಣ ಕಾನೂನು ಜಾರಿಗೆ ತಂದಿದೆ.

Advertisement

ಈ ಪ್ರಕಾರ ವೆಬ್‌ಸೈಟ್‌ಗಳು, ಸೋಷಿಯಲ್‌ ಮೀಡಿಯಾ ಸೈಟ್‌ಗಳು “ಸುಳ್ಳು ಸುದ್ದಿ’ಗಳ
ಸಂಬಂಧ ಎಚ್ಚರಿಕೆ ಪ್ರಕಟಿಸಬೇಕು, ಕೆಲವು ಸನ್ನಿವೇಶಗ ಳಲ್ಲಿ ಇಂತಹ ಪೋಸ್ಟ್‌ಗಳನ್ನು ಅಳಿಸಿಹಾಕ ಬೇಕಾಗುತ್ತದೆ.

ಒಂದು ವೇಳೆ ಸುದ್ದಿಗಳು ಸುಳ್ಳು ಎಂದು ಸಾಬೀತಾದರೆ ಸೋಷಿಯಲ್‌ ಮೀಡಿಯಾ ಸಂಸ್ಥೆಗೆ 5 ಕೋಟಿ ರೂ. (1 ದಶಲಕ್ಷ ಸಿಂಗಾಪುರ ಡಾಲರ್‌)ದಂಡ ಮತ್ತು ವ್ಯಕ್ತಿಗಳಿಗೆ 10 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದಾಗಿದೆ.

ಈ ನಿಯಮ ಅಳವಡಿಸಿಕೊಳ್ಳಲು ಫೇಸ್‌ಬುಕ್‌, ಟ್ವಿಟರ್‌ ಮತ್ತು ಗೂಗಲ್‌ಗೆ ಹೆಚ್ಚುವರಿ ಕಾಲಾವಕಾಶ ನೀಡಲಾಗಿದೆ. ಸಮಾಜದಲ್ಲಿ ತಾರತಮ್ಯವನ್ನು ಹುಟ್ಟುಹಾ ಕಲು ಮತ್ತು ವಿಶ್ವಾಸ ಕುಂದಿಸುವ ಪ್ರಯತ್ನಗಳನ್ನು ಹತ್ತಿಕ್ಕಲು ಈ ಕ್ರಮಗಳು ಅಗತ್ಯ ಎಂದು ಸರ್ಕಾರ ಹೇಳಿದರೂ, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನವಿದು ಎಂದು ಸಾಮಾಜಿಕ ಕಾರ್ಯಕರ್ತರು ಆಕ್ಷೇಪಿಸಿದ್ದಾರೆ.

ಮುಂದಿನ ಕೆಲವೇ ತಿಂಗಳುಗಳಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಯ ಹಿನ್ನೆಲೆಯಲ್ಲಿ ಆಡಳಿತ ಪಕ್ಷದ ವಿರುದ್ಧದ ಅಭಿಪ್ರಾಯಗಳನ್ನು ಹತ್ತಿಕ್ಕಲು ಮತ್ತು ರಾಜಕೀಯ ವಿರೋಧಿಗಳನ್ನು ಮಟ್ಟಹಾಕಲು ಈ ನೀತಿ ಬಳಕೆಯಾಗುವ ಶಂಕೆಯೂ ವ್ಯಕ್ತವಾಗಿದೆ.

Advertisement

ಆದರೆ ಟೀಕಾಕಾರರ ಪ್ರಕಾರ ಈ ನೀತಿಯಲ್ಲಿ ಸುಳ್ಳು ಸುದ್ದಿ ಎಂದು ಯಾವುದನ್ನು ಪರಿಗಣಿಸ ಲಾ ಗು ತ್ತದೆ ಎಂಬುದಾಗಿ ನಿರ್ದಿಷ್ಟ ವ್ಯಾಖ್ಯಾನವಿಲ್ಲ. ಈ ಕಾನೂನು ಕುರಿತ ವಿವಾದಗಳಿಗೆ ಪ್ರತಿಕ್ರಿಯಿಸಿದ ಸಿಂಗಾಪುರ ಗೃಹ ಸಚಿವ ಕೆ.ಷಣ್ಮುಗಂ, ಸಚಿವರ ಸೂಚನೆ ತಪ್ಪಾಗಿ ದ್ದರೆ,
ಅದನ್ನು ಕೋರ್ಟ್‌ ನಿರ್ಧರಿಸುತ್ತದೆ ಎಂದಿದ್ದಾರೆ.

ಏನಿದೆ ಕಾನೂನಿನಲ್ಲಿ?
ಈ ಕಾಯ್ದೆಯನ್ನು ಪ್ರೊಟೆಕ್ಷನ್‌ ಫ್ರಂ ಆನ್‌ಲೈನ್‌ ಫಾಲ್ಸ್‌ಹುಡ್ಸ್‌ ಆ್ಯಂಡ್‌ ಮೆನಿಪ್ಯುಲೇಶನ್‌ ಆಕ್ಟ್
(ಪಿಒಎಪ್‌ಎಂಎ) ಎಂದು ಕರೆಯಲಾಗಿದೆ. ಸಿಂಗಾಪುರದ ಭದ್ರತೆ, ಸಾರ್ವಜನಿಕ ಸುರಕ್ಷತೆ, ಇತರ
ಸಾರ್ವಜನಿಕ ಹಿತಾಸಕ್ತಿ ಸಂಗತಿಗಳ ಕುರಿತ ಸುಳ್ಳು ಸುದ್ದಿಗಳನ್ನು ತಡೆಯಲು ಸರ್ಕಾರಕ್ಕೆ ಅವಕಾಶ ನೀಡುತ್ತದೆ.

ಯಾವುದೇ ಸುದ್ದಿ ಸುಳ್ಳು ಎಂದು ಸರ್ಕಾರ ಭಾವಿಸಿದರೆ, ಯಾವುದೇ ಸಚಿವರು ಈ ಕುರಿತು ಸಾಮಾಜಿಕ ಮಾಧ್ಯಮ ಸಂಸ್ಥೆಗಳಿಗೆ ತಿಳಿಸುತ್ತಾರೆ. ಸಚಿವರ ಸೂಚನೆಯ ಮೇರೆಗೆ ಇವು
ಅಂತಹ ಪೋಸ್ಟ್‌ಗೆ “ಇದು ಸುಳ್ಳು ಸುದ್ದಿ’ ಎಂಬ ಲೇಬಲ್‌ ಅನ್ನು ಪ್ರಕಟಿಸಬೇಕು. ಸುಳ್ಳು ಸುದ್ದಿಯ
ತೀವ್ರತೆ ಆಧರಿಸಿ, ಪೋಸ್ಟ್‌ ಅನ್ನು ತೆಗೆದುಹಾಕುವಂತೆ ಸಚಿವರು ಸೂಚಿಸಬಹುದು. ಒಂದು ವೇಳೆ
ಇದಕ್ಕೆ ಸೋಷಿಯಲ್‌ ಮೀಡಿಯಾಗಳು ಬದ್ಧವಾಗದಿದ್ದರೆ ಕಠಿಣ ಕ್ರಮ ಗ್ಯಾರಂಟಿ.

Advertisement

Udayavani is now on Telegram. Click here to join our channel and stay updated with the latest news.

Next