Advertisement

ಇಲ್ಲಿಗೆ ನೀವು ವೀಸಾ ಇಲ್ಲದೆ ಹೋಗಬಹುದು ಜಗತ್ತಿನ ಬಲಿಷ್ಠ ಪಾಸ್‌ಪೋರ್ಟ್‌ ರಾಷ್ಟ್ರಗಳು

12:32 AM Jan 13, 2020 | Sriram |

2020ನೇ ಸಾಲಿನ ಜಗತ್ತಿನ ಶಕ್ತಿಶಾಲಿ ಪಾಸ್‌ಪೋರ್ಟ್‌ ಗಳ ಕುರಿತ ವರದಿ ಬಿಡುಗಡೆಗೊಂಡಿದೆ. ಯಾವ ರಾಷ್ಟ್ರ ಗಳಿಗೆ ವೀಸಾ ಇಲ್ಲದೇ ಹೋಗಬಹುದು ಎಂಬ ಆಧಾರದ ಮೇಲೆ ಅದಕ್ಕೆ ರ್‍ಯಾಂಕ್‌ ನೀಡಲಾಗುತ್ತದೆ. ಹೆನ್ಲ ಪಾಸ್‌ ಪೋರ್ಟ್‌ ಸೂಚಿ ಪ್ರಕಾರ, ಭಾರತೀಯರು 58 ದೇಶಗಳಿಗೆ ವೀಸಾ ಫ್ರೀ ಪ್ರವೇಶ ಅವಕಾಶ ಪಡೆಯಲಿದ್ದಾರೆ.

Advertisement

ಅಂತಾರಾಷ್ಟ್ರೀಯ ವಿಮಾನಯಾನ ಪ್ರಾಧಿಕಾರ (ಐಎಟಿಎ) ಸುಮಾರು 227 ತಾಣಗಳಿಂದ ಮಾಹಿತಿ ಸಂಗ್ರಹಿಸಿ 199 ಪಾಸ್‌ಪೋರ್ಟ್‌ಗಳನ್ನು ಹೋಲಿಸಿ, ಈ ಅಂಕಿ-ಅಂಶ ನೀಡಿದೆ. ಈ ಪೈಕಿ ಭಾರತ 84ನೇ ಸ್ಥಾನದಲ್ಲಿದೆ. ಇಲ್ಲಿ ಈ 2020ರಲ್ಲಿ ಯಾವ ಯಾವ ದೇಶಗಳಿಗೆ ನೀವು ವೀಸಾ ಇಲ್ಲದೇ ಹೋಗಬಹುದು ಎಂಬುದನ್ನು ತಿಳಿಸಲಾಗಿದೆ.

ಜಪಾನ್‌ ಅಗ್ರಸ್ಥಾನಿ
ಕ್ಷಿಪ್ರವಾಗಿ ಬೆಳವಣಿಗೆ ಯಾಗುತ್ತಿರುವ ರಾಷ್ಟ್ರವಾದ ಜಪಾನ್‌ ಪ್ರಥಮ ಸ್ಥಾನದಲ್ಲಿದೆ. ಇದು ಒಟ್ಟು 191 ರಾಷ್ಟ್ರಗಳಿಗೆ ವೀಸಾ ನೀಡುತ್ತಿದೆ.

ಭಾರತದ ರ್‍ಯಾಂಕ್‌ ಕುಸಿತ
ಭಾರತ 82ನೇ ರ್‍ಯಾಂಕ್‌ನಿಂದ 84ಕ್ಕೆ ಕುಸಿದಿದೆ. 2019ರಲ್ಲಿ 82ನೇ ಸ್ಥಾನದಲ್ಲಿತ್ತು. 2020ರಲ್ಲಿ ಎರಡು ರಾಷ್ಟ್ರಗಳನ್ನು ಕಳೆದು ಕೊಂಡು ಸ್ಥಾನ ಕುಸಿದಿದೆ.

ಚೀನ ಬಲಿಷ್ಠ
ಭಾರತಕ್ಕೆ ಹೋಲಿಸಿದರೆ ಚೀನದ ಪಾಸ್‌ಪೋರ್ಟ್‌ ಹೆಚ್ಚು ಬಲಿಷ್ಠವಾಗಿದೆ. ಇದು 71ನೇ ಸ್ಥಾನದಲ್ಲಿದೆ.

Advertisement

58 ರಾಷ್ಟ್ರಗಳಿಗೆ ಅವಕಾಶ
ಭಾರತೀಯ ಪಾಸ್‌ಪೋರ್ಟ್‌ ಹೊಂದಿದವರು 58 ರಾಷ್ಟ್ರಗಳಿಗೆ ವೀಸಾ ಇಲ್ಲದೆ ಪ್ರಯಾಣಿಸಬಹುದಾಗಿದೆ. ಭೂತಾನ್‌, ಕಾಂಬೋಡಿಯಾ, ಇಂಡೋನೇಷ್ಯಾ, ಮಕಾವೋ, ಮಾಲ್ದೀವ್ಸ್‌, ಮ್ಯಾನ್ಮಾರ್‌, ನೇಪಾಲ, ಶ್ರೀಲಂಕಾ, ಥಾಯ್ಲೆಂಡ್‌, ಕೀನ್ಯಾ, ಮಾರಿಷಸ್‌, ಸೀಶೆಲ್ಸ್‌, ಜಿಂಬಾಬ್ವೆ, ಉಗಾಂಡ, ಇರಾನ್‌ ಮತ್ತು ಕತಾರ್‌ ಮೊದಲಾದ ದೇಶಗಳಿಗೆ ವೀಸಾ ಇಲ್ಲದೇ ಭಾರತೀಯರು ತೆರಳಬಹುದಾಗಿದೆ.

ಅಫ್ಘಾನಿಸ್ಥಾನಕ್ಕೆ ಕಡಿಮೆ
ಅಫ್ಘಾನಿಸ್ಥಾನ ಅತೀ ಕಡಿಮೆ ರಾಷ್ಟ್ರಗಳಿಗೆ ವೀಸಾ ರಹಿತ ಪ್ರಯಾಣವನ್ನು ನೀಡುತ್ತಿದೆ. ಇದು ಕೇವಲ 86 ರಾಷ್ಟ್ರಗಳಿಗೆ ಮಾತ್ರ ವೀಸಾ ಮುಕ್ತ ಅವಕಾಶವನ್ನು ನೀಡಿದೆ. ದ್ವಿತೀಯ ಸ್ಥಾನದಲ್ಲಿ 29 ರಾಷ್ಟ್ರಗಳೊಂದಿಗೆ ಸಿರಿಯಾ ಇದ್ದು, ಪಾಕಿಸ್ಥಾನ ಮತ್ತು ಸೋಮಾಲಿಯಾ 32 ರಾಷ್ಟ್ರಗಳೊಂದಿಗೆ ತೃತೀಯ ಸ್ಥಾನದಲ್ಲಿವೆ.

ವೀಸಾ ರಹಿತ
ಟಾಪ್‌ 10 ರಾಷ್ಟ್ರಗಳು

1 ಜಪಾನ್‌ 191
2 ಸಿಂಗಾಪುರ 190
3 ಜರ್ಮನಿ, ದ.ಕೊರಿಯಾ 189
4 ಫಿನ್‌ಲ್ಯಾಂಡ್ , ಇಟಲಿ 188
5 ಡೆನ್ಮಾರ್ಕ್‌,
ಲಕ್ಸಂಬರ್ಗ್‌, ಸ್ಪೈನ್‌ 187
6 ಫ್ರಾನ್ಸ್‌, ಸ್ವೀಡನ್‌ 186
7 ಆಸ್ಟ್ರೇಲಿಯಾ, ಐರೆಲಂಡ್‌, ನೆದರ್‌ಲ್ಯಾಂಡ್‌, ಪೋರ್ಚುಗಲ್‌,
ಸ್ವಿಟ್ಸರ್‌ಲ್ಯಾಂಡ್‌ 185
8 ಬೆಲ್ಜಿಯಂ, ಗ್ರೀಸ್‌, ನಾರ್ವೆ, ಯುಕೆ, ಯುಎಸ್‌ಎ 184
9 ಆಸ್ಟ್ರೇಲಿಯಾ, ಕೆನಡ, ಜೆಕ್‌ ಗಣರಾಜ್ಯ, ಮಾಲ್ಟಾ, ನ್ಯೂಜಿಲ್ಯಾಂಡ್‌ 183
10 ಹಂಗೇರಿ, ಲುಥಿಯಾನ,
ಸ್ಲೋವಾಕಿಯಾ 181

Advertisement

Udayavani is now on Telegram. Click here to join our channel and stay updated with the latest news.

Next