—–
ಉಡುಪಿಯ ಕೃಷ್ಣನ ಸನ್ನಿಧಿಗೆ ಹೋದರೆ ಸ್ವಲ್ಪ ಕಿವಿ ತೆರೆದುಕೊಂಡಿರಿ. ಏಕೆಂದರೆ, ದಿನದ 24 ಗಂಟೆ ವಿಠuಲ ನಾಮ ಸ್ಮರಣೆ ನಡೆಯುತಲಿದೆ. ಹೆಚ್ಚು ಕಮ್ಮಿ 18 ತಿಂಗಳುಗಳಿಂದ ಹಗಲು, ರಾತ್ರಿ ಎನ್ನದೆ ಹಾಡುಗಳ ಮೂಲಕ ಕೃಷ್ಣಸ್ಮರಣೆಯಾಗುತ್ತಿದೆ. ಉಡುಪಿಯ ಶ್ರೀಕೃಷ್ಣ ಅನ್ನಬ್ರಹ್ಮ, ಪಂಢರಾಪುರದ ವಿಟuಲ ನಾದಬ್ರಹ್ಮ, ತಿರುಪತಿಯ ತಿಮ್ಮಪ್ಪ ಕಾಂಚನ ಬ್ರಹ್ಮ ಎನ್ನುವುದು ಲೋಕರೂಢಿ. ವಿಟuಲನ ಸನ್ನಿಧಿಯಲ್ಲಿ ನಡೆಯುವ ನಿರಂತರ ತಾಳ, ಭಗವಂತನ ಸಂಕೀರ್ತನೆ ಈ ಎರಡು ವರ್ಷಗಳಲ್ಲಿ ಶ್ರೀಕೃಷ್ಣನ ಸನ್ನಿಧಿಯಲ್ಲಿ ನಡೆಯುತ್ತಿದೆ.
Advertisement
2018ರ ಜನವರಿ 18ರ ಬೆಳಗ್ಗೆ 6 ಗಂಟೆಗೆ ಆರಂಭಗೊಂಡ ಭಜನೆ ಅಖಂಡವಾಗಿ ಮುಂದುವರಿಯುತ್ತಿದೆ. ಇದು 2020ರ ಜನವರಿ 17ರ ಮಧ್ಯರಾತ್ರಿವರೆಗೆ ನಡೆಯಲಿದೆ.
Related Articles
Advertisement
ಸೇವಾ ದಾಖಲೆ
ದಕ್ಷಿಣ ಕರ್ನಾಟಕ, ಉತ್ತರ ಕರ್ನಾಟಕ, ಕರಾವಳಿ ಕರ್ನಾಟಕ, ಕೇರಳದ ಕಾಸರಗೋಡು, ಆಂಧ್ರಪ್ರದೇಶ, ತಮಿಳುನಾಡು ಭಾಗಗಳಿಂದ ಭಜನಾ ಮಂಡಳಿಗಳು ಜಾತಿಮತಭೇದವಿಲ್ಲದೆ ಬಂದು ನಾದಸೇವೆಯನ್ನು ಸಲ್ಲಿಸುತ್ತಿವೆ. ನಿರಂತರ ಭಜನೆಯು ಜೂ. 1ಕ್ಕೆ 500ನೆಯ ದಿನಕ್ಕೆ ಕಾಲಿಡುತ್ತಿದೆ. ಇದುವರೆಗೆ ಸುಮಾರು 3,000 ಭಜನಾ ಮಂಡಳಿಗಳು ಭಾಗವಹಿಸಿವೆ. ಒಂದು ಬಾರಿ ಬಂದ ತಂಡ ಇನ್ನೊಮ್ಮೆ ಬರುವ ಅಗತ್ಯವಿಲ್ಲದಷ್ಟು ಮಂಡಳಿಗಳಿವೆ. ಈಗೀಗ ದಿನಕ್ಕೆ ಆರು ತಂಡದ ಬದಲು 10-12 ತಂಡಗಳು ಬರುತ್ತಿವೆ. ಒಂದೊಂದು ತಂಡದಲ್ಲಿರುವ ಸದಸ್ಯರ ಸಂಖ್ಯೆ 25 ಜನರೆಂದುಕೊಂಡರೆ 75,000 ಭಜನಾ ಕಲಾವಿದರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಇನ್ನಾರು ತಿಂಗಳಲ್ಲಿ ಇದು ಮುಗಿಯಬಹುದು. ಆಗ ಭಾಗಿಯಾದ ಒಟ್ಟು ಕಲಾವಿದರ ಸಂಖ್ಯೆ ಲಕ್ಷ ದಾಟುತ್ತದೆ.
ಶ್ರೀಕೃಷ್ಣನಿಗೆ ನಮ್ಮ ಪರ್ಯಾಯ ಕಾಲದ ಪೂಜೆ ಸಲ್ಲಿಸುವಾಗ ನಿರಂತರ ಭಗವಂತನ ನಾಮಸಂಕೀರ್ತನೆ ನಡೆಯಲಿ ಎಂಬ ಆಶಯದಿಂದ ಕಾರ್ಯಕ್ರಮವನ್ನು ಹಮ್ಮಿಕೊಂಡೆವು.ಭಜನಾ ಮಂಡಳಿಗಳಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ. ನಮ್ಮಿಂದ ಮಾಹಿತಿ ಹೋಗದಿದ್ದರೂ ಅವರಾಗಿಯೇ ಬಂದು ಸೇವೆ ಸಲ್ಲಿಸುತ್ತಿದ್ದಾರೆ ಬಹಳ ಜನರಿಗೆ ಇದರಿಂದ ಶ್ರೀಕೃಷ್ಣನ ಅನುಗ್ರಹವಾಗಿದೆ ಎನ್ನುತ್ತಾರೆ ಪರ್ಯಾಯ ಶ್ರೀಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು. ಶಹನಾಜ್ ಭಜನಾಸೇವೆ
ಈ ಭಜನೆಗೆ ಧರ್ಮದ ಬೌಂಡರಿ ಇಲ್ಲ. ಇದಕ್ಕೆ ಶಹನಾಜ್ ಉದಾಹರಣೆ- ಈಕೆ ಗದಗ ಜಿಲ್ಲೆ ನರಗುಂದ ತಾಲೂಕು ಶಿರೋಳ ಗ್ರಾಮದವರು. ಹುಬ್ಬಳ್ಳಿಯಲ್ಲಿ ಟೈಲರಿಂಗ್ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಎರಡು ವರ್ಷಗಳಿಂದ ಇವರಿಗೆ ಭಜನಾ ಮಂಡಳಿಗಳ ಸಂಪರ್ಕವಿದೆ. ಇವರು ಸ್ವತಃ ಭಜನೆ ಕಲಿತು ಉಡುಪಿ ಶ್ರೀಕೃಷ್ಣನ ಸನ್ನಿಧಿಯಲ್ಲಿ ಎರಡು ದಿನವಿದ್ದು ಸಂಕೀರ್ತನ ಸೇವೆ ಸಲ್ಲಿಸಿದರು. ಆನಂತರ, ಹುಬ್ಬಳ್ಳಿಯಲ್ಲಿ ಮೂರು, ತಿರುವಾಳದಲ್ಲಿ ಒಂದು ತಂಡಕ್ಕೆ ಭಜನಾ ತರಬೇತಿ ಕೊಟ್ಟರು. ಈಗ ಇವರು ಕಲಿಸಿದ ತಂಡಗಳೂ ಉಡುಪಿಗೆ ಬಂದು ನಾದಸೇವೆ ನೀಡಿವೆ. “ನಮ್ಮ ಊರಿನಲ್ಲಿ ಹಿಂದುಗಳು, ಮುಸ್ಲಿಮರು ಕೂಡಿ ಬಾಳುತ್ತಿದ್ದೆವು. ನನಗೆ ಹಾಡುವ ಹವ್ಯಾಸವಿತ್ತು. ಭಜನಾ ಸಂಘಟಕ ಬೆಳಗಾವಿ ಜಿಲ್ಲೆ ರಾಮದುರ್ಗದ ವಿಜಯೇಂದ್ರ ಜೋಷಿಯವರ ಸಂಪರ್ಕವಾದಾಗ ಭಜನೆ ಹೇಳಿಕೊಡಲು ಕೇಳಿದೆ. ಒಪ್ಪಿದರು. ಆರಂಭಿಸಿದ ಒಂದೇ ವಾರದಲ್ಲಿ ನನಗೆ ಉತ್ತಮ ಫಲಿತಾಂಶ ಸಿಕ್ಕಿದೆ’ ಅನ್ನೋದು ಶಹನಾಜ್ ಉತ್ತರ. ಮಧ್ಯರಾತ್ರಿ ಬಂದ ಮಗು ಯಾರದು? ಹೀಗೊಂದು ಘಟನೆ ನಡೆಯಿತು. ಇದನ್ನು ನಂಬುವುದು ಬಿಡುವುದು ನಿಮಗೆ ಸೇರಿದ್ದು. ಕಾಸರಗೋಡು ರಾಮದಾಸ ನಗರದ ಹೊತ್ತ “ತಣ್ತೀಮಸಿ’ ಭಜನಾ ತಂಡದ ಆರು ಸದಸ್ಯೆಯರು ಆರು ತಿಂಗಳ ಹಿಂದೆ ಶ್ರೀಕೃಷ್ಣಮಠದ ನಿರಂತರ ಭಜನೆಗೆ ಬಂದಿದ್ದರು. ಇವರ ಪಾಳಿ ರಾತ್ರಿ 12ರಿಂದ 2 ಗಂಟೆ. ಇವರು ಭಜನೆಯನ್ನು ಆಗತಾನೇ ಕಲಿಯಲು ಆರಂಭಿಸಿದ್ದರು. ಎರಡು ಗಂಟೆ ಕಾಲ ಹಾಡುವಷ್ಟು ಹಾಡುಗಳ ದಾಸ್ತಾನೂ ಇರಲಿಲ್ಲ. ಮಧ್ಯರಾತ್ರಿಯಾದ ಕಾರಣ ಅಂಗಡಿ ಬದಿಯಲ್ಲಿ ಮಲಗಿದವರನ್ನು ಬಿಟ್ಟರೆ ಬೇರಾರೂ ಇರಲಿಲ್ಲ. ನಿರ್ಜನ ಪ್ರದೇಶ. ಯಾರೂ ಇಲ್ಲದ ಕಾರಣ ಹಾಡಿಲ್ಲದಿದ್ದರೂ ಹಾಡುವ ಧೈರ್ಯವಿತ್ತು, ಕಣ್ಣು ಮುಚ್ಚಿ ವೇದಿಕೆಯಲ್ಲಿ “ಅಮ್ಮ ನಿಮ್ಮ ಮನೆಗಳಲ್ಲಿ ನಮ್ಮ ರಂಗನ ಕಂಡಿರೇನೆ…|’ ಅಂತ ಹಾಡು ಶುರುವಾಯಿತು…ಹಾಡುಗಾರರು ಒಳಗೆ ತನ್ಮಯರಾಗಿದ್ದರೆ ಹೊರಗೆ ಸುಮಾರು ಮೂರು ವರ್ಷ ಪ್ರಾಯದ ದೈವೀ ಅಲಂಕೃತ ಮಗುವೊಂದನ್ನು ಕಾಣೋದೇ! ಮಗು ಆಚಿಂದ ಈಚೆ, ಈಚಿಂದ ಆಚೆ ಹೋಗುತ್ತಿತ್ತು, ಇವರನ್ನು ಕಂಡು ಮುಗುಳು ನಗುತ್ತಿತ್ತು. ಸಹ ಹಾಡುವವರಿಗೆ ಇದಾವ ಮಗು? ತಂದೆ ತಾಯಿ ಎಲ್ಲಿ? ಈ ಹೊತ್ತಲ್ಲಿ ಯಾರ ಕರೆತಂದರು ಎಂಬ ಪ್ರಶ್ನೆ ಮೂಡಿತು. ಕೊನೆಗೆ, ಪಾಳಿ ಬದಲಾಯಿತು. ಹೊಸ ಪಾಳಿಯವರಿಗೆ ಆ ಮಗು ಕಾಣಲಿಲ್ಲ. ಹುಡುಕಿದ ಇವರಿಗೂ ಕಾಣಲಿಲ್ಲ. “ನಮಗೆ ಮಗು ಕಾಣಲಿಲ್ಲ. ಬದಲಿಗೆ ಕನಕನ ಕಿಂಡಿಯಲ್ಲಿ ದರ್ಶನ ಮಾಡಿ ಧನ್ಯರಾದೆವು. ಊರಿಗೆ ಹೋದ ಬಳಿಕ ನಮಗೆ ಭಜನೆ ಹೇಳಿಕೊಡುವ ವಿಷ್ಣುಮಂಗಲ ಕ್ಷೇತ್ರದ ವೀಣಾ ಅವರ ಮನೆಗೆ ಹೋಗಿ ನೋಡಿದರೆ, ಆ ಮಗುವನ್ನು ಹೋಲುವ ಕೃಷ್ಣನ ಚಿತ್ರವಿತ್ತು. ಈಗಲೂ ವಾರಕ್ಕೊಮ್ಮೆ ಅವರ ಮನೆಗೆ ತರಗತಿಗೆ ಹೋದಾಗ ಆ ಚಿತ್ರ ನೋಡದೆ ಸಮಾಧಾನವೇ ಇಲ್ಲ’ ಎನ್ನುತ್ತಾರೆ ತಂಡದಲ್ಲಿ ಹಾಡಿದ ಸದಸ್ಯರಾದ ರತ್ನ, ಶಾಂಭವಿ, ಪುಷ್ಪಾವತಿ, ಪದ್ಮಿನಿ, ದೀಪಾ, ಚಂದ್ರಾವತಿ. ಮಟಪಾಡಿ ಕುಮಾರಸ್ವಾಮಿ