Advertisement

ಒಬ್ಬರಿಗೆ ಸೋಂಕಿದ್ದರೆ ಕಚೇರಿಗೇ ಬೀಗ; ಕೆಲಸದ ಸ್ಥಳಕ್ಕೆ ಅನ್ವಯವಾಗುವ ಮಾರ್ಗಸೂಚಿ ಬಿಡುಗಡೆ

01:08 AM May 22, 2020 | Hari Prasad |

ನಾಲ್ಕನೇ ಹಂತದಲ್ಲಿ ಲಾಕ್‌ಡೌನ್‌ ಸಂಪೂರ್ಣ ಸಡಿಲಾಗಿ ಎಲ್ಲ ಕಂಪೆನಿ, ಉದ್ದಿಮೆಗಳಲ್ಲಿ ಕೆಲಸ ಪುನರಾರಂಭವಾದ ಎರಡೇ ದಿನದಲ್ಲಿ ಕೇಂದ್ರ ಆರೋಗ್ಯ ಸಚಿವಾಲಯ ಒಂದು ಶಾಕ್‌ ನೀಡಿದೆ.

Advertisement

ಅದೇನೆಂದರೆ, ಕಚೇರಿಯಲ್ಲಿ ಹೊಸ ಕೋವಿಡ್ ಪ್ರಕರಣ ಕಂಡುಬಂದರೆ, ಆ ಕಚೇರಿ ಇರುವ ಇಡೀ ಕಟ್ಟಡಕ್ಕೆ ಬೀಗ ಹಾಕಬೇಕು!

ಕೋವಿಡ್ ವೈರಸ್‌ ಸೋಂಕನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಆರೋಗ್ಯ ಸಚಿವಾಲಯ ಮಂಗಳವಾರ ಕೆಲವಾರು ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

ಅದರಂತೆ ಒಂದು ಅಥವಾ ಎರಡು ಕೋವಿಡ್ ಪ್ರಕರಣ ಕಂಡುಬಂದರೆ ಕಚೇರಿ ಮುಚ್ಚಬೇಕು, ಹೆಚ್ಚಿನ ಪ್ರಕರಣ ಪತ್ತೆಯಾದರೆ ಇಡೀ ಕಟ್ಟಡಕ್ಕೆ 48 ಗಂಟೆಗಳ ಕಾಲ ಬೀಗ ಹಾಕಬೇಕು ಎಂದು ತಿಳಿಸಲಾಗಿದೆ.

ಇದರೊಂದಿಗೆ ಕೆಲಸ ಆರಂಭಿಸುವ ಮುನ್ನ ಕಚೇರಿಯನ್ನು ಶಿಷ್ಟಾಚಾರದ ಪ್ರಕಾರ ಸೋಂಕುರಹಿತವಾಗಿಸಬೇಕು. ಕೆಲಸದ ಸ್ಥಳವು ಸೋಂಕುರಹಿತವಾಗಿದೆ ಎಂದು ದೃಢಪಡಿಸುವವರೆಗೆ ಸಿಬ್ಬಂದಿ ಮನೆಯಿಂದಲೇ ಕೆಲಸ ಮಾಡಬೇಕು ಎಂದು ಹೇಳಲಾಗಿದೆ.

Advertisement

ಸಾಮಾನ್ಯವಾಗಿ ಬಹುತೇಕ ಕಚೇರಿಗಳಲ್ಲಿ ಗಾಳಿ ಬೆಳಕು ಪ್ರವೇಶಿಸಲು ಸಾಕಷ್ಟು ಅವಕಾಶ ಇರುವುದಿಲ್ಲ. ಹೀಗಾಗಿ ಪೂರ್ವ ರೋಗಲಕ್ಷಣ ಹೊಂದಿರುವ ಅಥವಾ ಲಕ್ಷಣರಹಿತ ಸೋಂಕಿತರು ಹೆಚ್ಚಿನ ಸಂಖ್ಯೆಯ ಜನರನ್ನು ಸಂಪರ್ಕಿಸಿದ್ದರೆ ಸಂಪೂರ್ಣ ಕೆಲಸದ ಸ್ಥಳವೇ ಕೋವಿಡ್ ಸೋಂಕಿನ ಕ್ಲಸ್ಟರ್‌ ಆಗಿ ಹೊರಹೊಮ್ಮುವ ಸಾಧ್ಯತೆ ಹೆಚ್ಚು ಎಂದು ಸಚಿವಾಲಯ ತಿಳಿಸಿದೆ.

ಇತರೆ ಮಾರ್ಗಸೂಚಿಗಳು
– ಜ್ವರದ ರೀತಿಯ ಅನಾರೋಗ್ಯದಿಂದ ಬಳಲುವವರು ಕಚೇರಿಗೆ ಹೋಗುವಂತಿಲ್ಲ

– ಜ್ವರ, ಸೋಂಕಿನ ಲಕ್ಷಣ ಇರುವವರು ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು.

– ಐಸೊಲೇಶನ್‌ ಮತ್ತು ಕ್ವಾರೆಂಟೈನ್‌ ನಿಯಮಗಳು ಯಥಾವತ್‌ ಅನ್ವಯ

– ರೋಗ ಲಕ್ಷಣ ಉಳ್ಳವರನ್ನು ಪರೀಕ್ಷಿಸುವವರೆಗೂ ಐಸೊಲೇಟ್‌ ಮಾಡಬೇಕು

– ಸೋಂಕಿನ ಅಲ್ಪ ಲಕ್ಷಣಗಳು ದೃಢಪಟ್ಟವರ ಗೃಹ ಕ್ವಾರೆಂಟೈನ್‌ ಕಡ್ಡಾಯ

Advertisement

Udayavani is now on Telegram. Click here to join our channel and stay updated with the latest news.

Next