ಶಿರ್ವ : ಪತಂಜಲಿ ಯೊಗ ಸಮಿತಿ ಉಡುಪಿ, ಭಾರತ್ ಸ್ವಾಭಿಮಾನ್ ಟ್ರಸ್ಟ್, ಮಹಿಳಾ ಪತಂಜಲಿ, ಯುವ ಭಾರತ್ ಮತ್ತು ಕಿಸಾನ್ ಭಾರತ್, ಮಹಿಳಾ ಮಂಡಲ ಹಾಗು ಪತಂಜಲಿ ಯೋಗ ಸಮಿತಿ ಶಿರ್ವದ ಸಹಯೋಗದೊಂದಿಗೆ ಆಚಾರ್ಯ ಬಾಲಕೃಷ್ಣಜೀಯವರ ಜನ್ಮ ದಿನಾಚರಣೆಯ ಅಂಗವಾಗಿ ಗಿಡಮೂಲಿಕೆ (ಜಡಿ-ಬೂತಿ) ದಿನಾಚರಣೆಯು ಆ.4 ರಂದು ಶಿರ್ವ ಗಣೇಶೋತ್ಸವ ವೇದಿಕೆ ಬಳಿಯ ಮಹಿಳಾ ಸೌಧದ ಸಭಾಂಗಣದಲ್ಲಿ ನಡೆಯಿತು.
ಅಧ್ಯಕ್ಷತೆ ವಹಿಸಿದ್ದ ಶಿರ್ವ ಗ್ರಾ.ಪಂ. ಅಧ್ಯಕ್ಷ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ನಾಟಿ ವೈದ್ಯ ಬಗ್ಗೆರಾಕ್ಯಾರು ಸುಂದರ ಶೆಟ್ಟಿ ಮೂಲವ್ಯಾಧಿ,ಹಳದಿರೋಗ,ಸುಟ್ಟಗಾಯ,ಬಿಳಿಸೆರಗು,ಅರಸಿನಕುತ್ತ ಮತ್ತು ಹಾವು ಕಡಿತದ ಚಿಕಿತ್ಸೆ ಬಗ್ಗೆ ಚೆಕ್‌ಪಾದೆೆ ಶಾಲಿನಿ ಡಿ. ಅಮೀನ್ ವಿವರಿಸಿ ರೋಗಗಳಿಗೆ ಮಾಡಬೇಕಾದ ಪಥ್ಯ ಮತ್ತು ಮನೆ ಮದ್ದಿನ ಬಗ್ಗೆ ಮಾಹಿತಿ ನೀಡಿದರು. ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ಬಂಟಕಲ್ಲು ರಾಮಕೃಷ್ಣ ಶರ್ಮಾ ಮತ್ತು ಉಡುಪಿ ಪತಂಜಲಿ ಚಿಕಿತ್ಸಾಲಯದ ಸುರೇಶ ಭಕ್ತ ಗಿಡಮೂಲಿಕೆ ಸಸಿಗಳ ಬಗ್ಗೆ ಮಾಹಿತಿ ನೀಡಿದರು. ನಾಟಿ ವೈದ್ಯ ಬಗ್ಗೆರಾಕ್ಯಾರು ಸುಂದರ ಶೆಟ್ಟಿ ಮತ್ತು ಚೆಕ್‌ಪಾದೆೆ ಶಾಲಿನಿ ಡಿ. ಅಮೀನ್‌ಅವರನ್ನು ಸಮ್ಮಾನಿಸಲಾಯಿತು.
ಪತಂಜಲಿ ಯೋಗ ಸಮಿತಿಯ ಜಿಲ್ಲಾ ಪ್ರಭಾರಿ ಕೆ. ರಾಘವೆಂದ್ರ ಭಟ್,ಭಾರತ್ ಸ್ವಾಭಿಮಾನ್ ಟ್ರಸ್ಟ್‌ನ ಜಿಲ್ಲಾ ಪ್ರಭಾರಿ ವೆಂಕಟೇಶ್ ಮೆಹಂದಳೆ, ಶಿರ್ವ ಮಹಿಳಾ ಮಂಡಲದ ಅಧ್ಯಕ್ಷೆ ಗೀತಾ ವಾಗ್ಲೆ ಮಾತನಾಡಿದರು.ಪತಂಜಲಿ ಉಡುಪಿ ಜಿಲ್ಲಾ ಮಹಿಳಾ ಪ್ರಭಾರಿ ಲೀಲಾ ಅಮೀನ್ ವೇದಿಕೆಯಲ್ಲಿದ್ದರು.
ಶಿರ್ವ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ವಿಟuಲ ಅಂಚನ್, ಕಾರ್ಯದರ್ಶಿ ಗಿರಿಧರ ಪ್ರಭು, ಕೊಲ್ಲಬೆಟ್ಟು ರವೀಂದ್ರ ಶೆಟ್ಟಿ, ಪತಂಜಲಿ ಯೋಗ ಸಮಿತಿಯ ಸದಸ್ಯರು,ಶಿರ್ವ ಟೆಂಪೋ ಚಾಲಕ ಮತ್ತು ಮಾಲಕರ ಸಂಘದ ಸದಸ್ಯರು,ಶಿರ್ವ ಮಹಿಳಾ ಮಂಡಲದ ಸದಸ್ಯರು ಉಪಸ್ಥಿತರಿದ್ದರು.
ಪತಂಜಲಿ ಯೋಗ ಸಮಿತಿಯ ಶ್ರೀಪತಿ ಕಾಮತ್ ಸ್ವಾಗತಿಸಿದರು.ರಂಜಿತ್ ಕಾರ್ಯಕ್ರಮ ನಿರೂಪಿಸಿ, ಕಿಸಾನ್ ಭಾರತ ಜಿಲ್ಲಾ ಪ್ರಭಾರಿ ಅನಂತ್ರಾಯ ಶೆಣೈ ವಂದಿಸಿದರು.ಕಾರ್ಯಕ್ರಮದ ಬಳಿಕ ಗಿಡಮೂಲಿಕೆ ಸಸ್ಯಗಳನ್ನು ವಿತರಿಸಲಾಯಿತು.
ಇದನ್ನೂ ಓದಿ: Shirva: ವರ್ಗಾವಣೆಗೊಂಡ ಶಿರ್ವ ಗ್ರಾಮ ಆಡಳಿತ ಅಧಿಕಾರಿಗೆ ನಾಗರಿಕ ಸಮ್ಮಾನ