Advertisement

Misbehaving: ಗೋವಾದ ಪಬ್ ನಲ್ಲಿ ಯುವತಿಗೆ ಕಿರುಕುಳ ನೀಡಿದ ಪ್ರಕರಣ: ಡಿಐಜಿ ಸಸ್ಪೆಂಡ್

04:51 PM Aug 12, 2023 | Team Udayavani |

ಪಣಜಿ: ಗೋವಾದ ಕಲಂಗುಟ್ ಪಬ್‍ನಲ್ಲಿ ಯುವತಿಯೋರ್ವಳಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಲಿಸ್ ಉಪಮಹಾನಿರೀಕ್ಷಕ ಎ.ಕೋನ್ ಅರವರನ್ನು ಸಸ್ಪೆಂಡ್ ಮಾಡಲಾಗಿದೆ.

Advertisement

ಆರೋಗ್ಯ ಸರಿಯಿಲ್ಲ ಎಂದು ರಜೆ ಪಡೆದು ಪಬ್‍ಗೆ ಹೋಗಿ ಕಂಠಪೂರ್ತಿ ಕುಡಿದು ಪೋಲಿಸ್ ಅಧಿಕಾರಿಯೊಬ್ಬರು ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದರು ಎನ್ನಲಾಗಿದೆ. ಈ ಘಟನೆಯ ವೀಡಿಯೊ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿತ್ತು. ಇವರು ಗೋವಾದ ಬಾಗಾದಲ್ಲಿ ಕುಡಿದ ಅಮಲಿನಲ್ಲಿ ಯುವತಿಗೆ ಕಿರುಕುಳ ನೀಡಿದ್ದಾರೆ ಎಂದು ದೂರು ನೀಡಲಾಗಿದೆ. ಘಟನೆಯ ಸಮಯದಲ್ಲಿ ಎ ಕೋನ್ ರವರು ಕುಡಿದ ಅಮಲಿನಲ್ಲಿದ್ದರು ಎನ್ನಲಾಗಿದೆ. ಅವರು ಕ್ಲಬ್‍ನಲ್ಲಿ ಯುವತಿಯೊಂದಿಗೆ ಜಗಳವಾಡಿದ್ದರು. ಆಕೆಯೊಂದಿಗೆ ಅನುಚಿತವಾಗಿ ವರ್ತಿಸಿದರು ಎನ್ನಲಾಗಿದೆ.

ಈ ಘಟನೆಯ ಕುರಿತ ವೀಡಿಯೊ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಡಿಐಜಿ ಮಹಿಳೆಯೊಂದಿಗೆ ಮಾತಿನ ಚಕಮಕಿಯಲ್ಲಿ ತೊಡಗಿರುವುದು ಕೂಡ ಕಾಣಬಹುದಾಗಿದೆ. ಮಹಿಳೆ ಪೋಲಿಸರಿಗೆ ಕಪಾಳಮೋಕ್ಷ ಮಾಡಿದ ಬಳಿಕ ಗಲಾಟೆ ನಡೆದಿದೆ. ಪೋಲಿಸ್ ಉಪಮಹಾ ನಿರೀಕ್ಷಕ ಎ ಕೋನ್ ರವರು ಘಟನೆಯ ಸಂದರ್ಭದಲ್ಲಿ ವೈದ್ಯಕೀಯ ರಜೆಯಲ್ಲಿದ್ದರು ಎನ್ನಲಾಗಿದೆ. ಗೋವಾ ವಿಧಾನಸಭೆ ಅಧಿವೇಶನದಲ್ಲಿ ಈ ವಿಷಯ ಚರ್ಚೆಗೆ ಬಂದಿತ್ತು ಪೋಲಿಸ್ ಅಧಿಕಾರಿಯನ್ನು ಸಸ್ಪೆಂಡ್ ಮಾಡಬೇಕು ಎಂಬ ಆಗ್ರಹ ವ್ಯಕ್ತವಾಗಿತ್ತು. ಇದೀಗ ಪೋಲಿಸ್ ಅಧಿಕಾರಿ ಎ.ಕೋನ್ ರವರನ್ನು ಸಸ್ಫೆಂಡ್ ಮಾಡಲಾಗಿದ್ದು. ಅವರ ಸ್ಥಾನಕ್ಕೆ ಮತ್ತೊಬ್ಬ ಪೋಲಿಸ್ ಅಧಿಕಾರಿಯನ್ನು ನೇಮಕ ಮಾಡಲಾಗಿದೆ.

ಮುಖ್ಯಮಂತ್ರಿಗಳು ಈ ಅಧಿಕಾರಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಅಧಿವೇಶನ ಕಲಾಪದಲ್ಲಿ ಭರವಸೆ ನೀಡಿದ್ದರು. ಅಂತೆಯೇ ಮುಖ್ಯಮಂತ್ರಿಗಳ ಆದೇಶದ ನಂತರ ಎ.ಕೋನ್ ರವರ ವಿರುದ್ಧ ಗೃಹ ಖಾತೆ ಕಠಿಣ ಕ್ರಮ ಜರುಗಿಸಿದೆ.

ಪಬ್‍ನಲ್ಲಿ ಉಚಿತ ರೂಂ…!
ಪೋಲಿಸ್ ಅಧಿಕಾರಿ ಎ.ಕೋನ್ ರವರು ಕಲಂಗುಟ್‍ನಲ್ಲಿರುವ ಪಬ್‍ಗೆ ಪದೆ ಪದೆ ತೆರಳುತ್ತಿದ್ದರು ಎನ್ನಲಾಗಿದೆ. ಇಷ್ಟೇ ಅಲ್ಲದೆಯೇ ಇವರು ಪಬ್‍ನಲ್ಲಿ ಉಚಿತ ರೂಂ ವ್ಯವಸ್ಥೆಯನ್ನೂ ಮಾಡಿಸಿಕೊಂಡಿದ್ದರು ಎನ್ನಲಾಗಿದೆ. ಉಚಿತ ವ್ಯವಸ್ಥೆ ನೀಡದಿದ್ದರೆ ಪಬ್ ವಿರುದ್ಧ ಕ್ರಮ ಕೈಗೊಳ್ಳುವ ಭೀತಿಯ ಹಿನ್ನೆಲೆಯಲ್ಲಿ ಪಬ್ ಮಾಲೀಕರು ಇವರಿಗೆ ಉಚಿತ ರೂಂ ವ್ಯವಸ್ಥೆ ಕಲ್ಪಿಸಿದ್ದರು ಎಂದೇ ಹೇಳಲಾಗುತ್ತಿದೆ.

Advertisement

ಇದನ್ನೂ ಓದಿ: S1EP- 369: ಒಂದು ನಿರ್ದಾರದಿಂದ ಅಂಬಾನಿ ಕೋಟಿ ಕೋಟಿ ಹಣ ಉಳಿಸಿಕೊಂಡರು

Advertisement

Udayavani is now on Telegram. Click here to join our channel and stay updated with the latest news.

Next