Advertisement

ಒಂದೇ ಶಾಲೆಯ 7 ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ : ಮಾಹಿತಿ ಶಿಬಿರದಿಂದ ವಿಚಾರ ಬಯಲಿಗೆ

06:29 PM Mar 03, 2022 | Team Udayavani |

ಕಾಸರಗೋಡು : ಬೇಕಲ ಪೊಲೀಸ್‌ ಠಾಣೆ ವ್ಯಾಪ್ತಿಯ ಒಂದೇ ಶಾಲೆಯ 7 ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆಗೆ ಸಂಬಂಧಿಸಿ ಡಿವೈಎಸ್‌ಪಿ ಸಿ.ಕೆ. ಸುನಿಲ್‌ ಕುಮಾರ್‌ ನೇತೃತ್ವದಲ್ಲಿ ತನಿಖೆ ಪ್ರಾರಂಭಗೊಂಡಿದೆ.

Advertisement

ಮೂವರು ವಿದ್ಯಾರ್ಥಿಗಳು ನೀಡಿದ ದೂರಿನಂತೆ ನಾಲ್ವರ ವಿರುದ್ಧ ಬೇಕಲ ಪೊಲೀಸರು ಪೋಕ್ಸೋ ಕೇಸು ದಾಖಲಿಸಿಕೊಂಡಿದ್ದಾರೆ. ಇತರ ವಿದ್ಯಾರ್ಥಿನಿಯರಿಂದ ಮಾಹಿತಿ ಸಂಗ್ರಹಿಸಲಾಗುತ್ತಿದೆ.

ಮಾಹಿತಿ ಶಿಬಿರದಿಂದ ಬಯಲಿಗೆ
ಶಾಲೆಯಲ್ಲಿ ನಡೆದ ಪೋಕ್ಸೋ ಕುರಿತಾದ ಮಾಹಿತಿ ಶಿಬಿರದಲ್ಲಿ 7 ವಿದ್ಯಾರ್ಥಿನಿಯರಿಗೆ ನಡೆದ ಲೈಂಗಿಕ ಕಿರುಕುಳ ಬಯಲಾಗಿದೆ. ಆರೋಪಿಗಳು ತಲೆಮರೆಸಿಕೊಂಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ : ಕಂಡವರ ಜೇಬು ಭರ್ತಿ ಮಾಡುವ ‘ನೀಟ್’ದಂಧೆಗೆ ಚರಮಗೀತೆ ಹಾಡುತ್ತೇವೆ

Advertisement

Udayavani is now on Telegram. Click here to join our channel and stay updated with the latest news.

Next