ಬ್ರಹ್ಮಾವರ: ವ್ಯವಹಾರದಲ್ಲಿ ಶ್ರದ್ಧೆ, ನಿರಂತರ ಪರಿಶ್ರಮವಿದ್ದಾಗ ಯಶಸ್ಸು ಕಾಣಲು ಸಾಧ್ಯ. ಜತೆಗೆ ಗ್ರಾಹಕರಿಗೆ ಉತ್ತಮ ಸೇವೆ ನೀಡಿ ಅವರೊಂದಿ ಗಿನ ಬಾಂಧವ್ಯ ವೃದ್ಧಿಸುವುದು ಅಗತ್ಯ ಎಂದು ಬಸ್ರುರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಬಿ. ಅಪ್ಪಣ್ಣ ಹೆಗ್ಡೆ ಹೇಳಿದರು.
ಅವರು ಬುಧವಾರ ಬಾರಕೂರು ಹೇರಾಡಿಯಲ್ಲಿ ಶ್ರೀ ಸಿದ್ಧಿವಿನಾಯಕ ಪ್ಯುಯೆಲ್ ಸ್ಟೇಶನ್ ಉದ್ಘಾಟಿಸಿದರು.ವಾಹನಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರಿಂದ ಇಂಧನದ ಬೇಡಿಕೆಯೂ ಹೆಚ್ಚುತ್ತದೆ. ಆದ್ದರಿಂದ ಪೆಟ್ರೋಲ್ ಬಂಕ್ ಉತ್ತಮ ಭವಿಷ್ಯ ಹೊಂದಿದೆ. ಹಾಗೆಯೇ ಭದ್ರತೆ ದೃಷ್ಟಿಯಿಂದ ಜಾಗೃತರಾಗಿರುವುದು ಅನಿವಾರ್ಯ ಎಂದರು.
ಅತಿಥಿಗಳಾಗಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಮಂದಾರ್ತಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎಚ್. ಧನಂಜಯ ಶೆಟ್ಟಿ, ಸದಸ್ಯ ಶೇಡಿಕೊಡ್ಲು ವಿಠಲ್ ಶೆಟ್ಟಿ, ನಿವೃತ್ತ ಪ್ರಾಂಶುಪಾಲ ಬಿ. ಸೀತಾರಾಮ ಶೆಟ್ಟಿ, ಡಾ| ಬಿ.ಎಂ. ಸೋಮಯಾಜಿ, ಪಂಚಾಯತ್ ಮಾಜಿ ಅಧ್ಯಕ್ಷ ರಮಾನಂದ ಶೆಟ್ಟಿ ಬಾರಕೂರು ಮೊದಲಾದವರು ಆಗಮಿಸಿ ಶುಭಹಾರೈಸಿದರು.
ಸಂಸ್ಥೆಯ ಪರವಾಗಿ ಬಿ. ಶ್ರೀನಿವಾಸ ಶೆಟ್ಟಿಗಾರ್, ಗಣೇಶ್ ಶೆಟ್ಟಿ ಮತ್ತು ನಿತೀಶ್ ಶೆಟ್ಟಿ ನಾಗರಮಠ, ಸಂತೋಷ್ ಶೆಟ್ಟಿ ನಲ್ಕುದ್ರು, ಜಯಶೀಲ ಶೆಟ್ಟಿ ಕಂಬದ ಕೋಣೆ ಅತಿಥಿಗಳನ್ನು ಗೌರವಿಸಿದರು. ಇದೇ ಸಂದರ್ಭ ಸಹಕರಿಸಿದವರನ್ನು ಗುರುತಿಸಲಾಯಿತು.
ನಿವೃತ್ತ ಮುಖ್ಯೋಪಾಧ್ಯಾಯ ಬಿ. ಸುಧಾಕರ ರಾವ್ ಕಾರ್ಯಕ್ರಮ ನಿರೂಪಿಸಿದರು.