Advertisement
ಹತ್ತನಾವಧಿಯವರೆಗೆ ಬೇಡಿಕೆಈ ದಿನ ಗುಳಿಗ, ಭೈರವ ದೈವ ಮೊದಲಾದ ದೈವಗಳಿಗೆ ಭಕ್ತರು ವಿವಿಧ ನಿವೇದನೆಗಳನ್ನು ಮಾಡಿ ಪ್ರಾರ್ಥಿಸುತ್ತಾರೆ, ಹರಕೆಗಳನ್ನು ಒಪ್ಪಿಸುತ್ತಾರೆ. ಹತ್ತನಾವಧಿಯವರೆಗೆ ಭೂತ ಕೋಲಗಳು ನಡೆದು ಅನಂತರದಲ್ಲಿ ಗೆಜ್ಜೆ ಬಿಚ್ಚುವ ನಂಬಿಕೆ ಇರುವುದರಿಂದ ಹತ್ತನಾವಧಿಯವರೆಗೆ ಊರಿನ ಕೋಳಿಗಳಿಗೆ ವಿಪರೀತ ಬೇಡಿಕೆ ಇದೆ.
ನಾಟಿ ಕೋಳಿ ಮಾಂಸ ಹೆಚ್ಚು ರುಚಿಕರವೆಂದು ಪರಿಗಣಿಸಲ್ಪಟ್ಟಿರುವುದರಿಂದ ಗ್ರಾಮೀಣ ಭಾಗದಲ್ಲಿ ಅಲ್ಲಲ್ಲಿ ವಿರಳವಾಗಿರುವ ನಾಟಿ ಕೋಳಿ ಸಾಕುವವರಲ್ಲಿ ನಾಟಿ ಕೋಳಿ ಖರೀದಿಸಲು ಎಲ್ಲ ಸಮಯದಲ್ಲೂ ಬೇಡಿಕೆ ಇದ್ದರೂ ಹತ್ತನಾವಧಿ ಸಮಯದಲ್ಲಿ ವಿಪರೀತ ಬೇಡಿಕೆ ಇರುತ್ತದೆ. ಹತ್ತನಾವಧಿಯ ಸಂದರ್ಭದಲ್ಲಿ ನಾಟಿ ಕೋಳಿ ಸಾಕಣೆದಾರರು ಹೇಳಿದ ಬೆಲೆ ಲಭಿಸುತ್ತದೆ. ಆದರೆ ಅಂಕದ ಕೋಳಿಗಳಿಗೆ ಕೆ.ಜಿ. ಲೆಕ್ಕದ ದರ ಲಗಾವಾಗುವುದಿಲ್ಲ, ಬದಲಾಗಿ ಕೋಳಿಯೊಂದರ ಅದರ ಜಾತಿಯನ್ನು ಅವಲಂಬಿಸಿ 1,000ರಿಂದ 10 ಸಾವಿರ ರೂ. ತನಕವೂ ಬೆಲೆ ಬಾಳುತ್ತದೆ. ನಾಟಿ ಕೋಳಿಯ ಬೇಡಿಕೆಯನ್ನು ಆಧರಿಸಿ ಬ್ರಾಯ್ಲರ್, ಟೈಸನ್ ಕೋಳಿ ಫಾರ್ಮ್ಗಳು ಇರುವಂತೆ ನಾಟಿ ಕೋಳಿ ಮಾರಾಟದ ಫಾರ್ಮ್ಗಳೂ ಹುಟ್ಟಿಕೊಂಡಿವೆ. ಪುತ್ತೂರು ತಾಲೂಕಿನ ಪಡೀಲ್ ಸೇರಿದಂತೆ 5-6 ಕಡೆಗಳಲ್ಲಿ ಸೀಸನ್ ಅವಧಿಗೆ ನಾಟಿ ಕೋಳಿ ಫಾರ್ಮ್ನಲ್ಲಿ ಕ್ಯೂ ಆರಂಭಗೊಳ್ಳುತ್ತದೆ. ಇನ್ನು ನಾಟಿ ಕೋಳಿಗೆ ಪರ್ಯಾಯವಾಗಿ ಗಿರಿರಾಜ ಕೋಳಿಗಳೂ ಲಭ್ಯವಾಗುತ್ತಿದ್ದರೂ ಈಗ ಹೈಬ್ರೀಡ್ ಊರಿನ ಕೋಳಿಗಳಾದ ಮೈಸೂರು, ಮಂಡ್ಯಗಳಿಂದ ಆಮ ದಾಗುವ ನಾಟಿ ಕೋಳಿಗಳಿಗೆ ಹೆಚ್ಚು ಬೇಡಿಕೆ ಇದೆ. ತಮಿಳುನಾಡಿನಿಂದ ಆಮದಾಗುವ ಹೈಬ್ರೀಡ್ ಕೋಳಿಗಳು ತೂಕದಲ್ಲಿ ಹೆಚ್ಚು ತೂಗುತ್ತವೆ.
Related Articles
ಹತ್ತನಾವಧಿಗೆ 4-5 ತಿಂಗಳಿಗೆ ಮೊದಲೇ ಕೋಳಿ ಮರಿ ಸಂಪಾದಿಸಿ ಹತ್ತನಾವಧಿಗೆ ಸಿದ್ಧಗೊಳ್ಳುವಂತೆ ಸಾಕುವವರೂ ಇದ್ದಾರೆ. ಹತ್ತನಾವಧಿ ಸಮೀಪಿಸಿದಾಗ ಎಚ್ಚೆತ್ತುಕೊಳ್ಳುವವರು ಎಂಕ್ ಒಂಜಿ ಕೋರಿ ಆವೊಡು (ನನಗೆ ಒಂದು ಕೋಳಿ ಆಗಬೇಕು)ಎಂದು ಮನೆ ಮನೆಗೆ ಸಂದರ್ಶಿಸುತ್ತಾರೆ. ಕೊನೆಗೆ ನಾಟಿ ಕೋಳಿ ಸಾಕಾಣೆದಾರರು ಕೇಳಿದಷ್ಟು ಹಣವನ್ನು ಕೊಟ್ಟು ಖರೀದಿಸುತ್ತಾರೆ.
Advertisement
ಸೀಸನ್ ಬೇಡಿಕೆಪತ್ತನಾಜೆಯ ಸೀಸನ್ ಅವಧಿಯಲ್ಲಿ ದಿನವೊಂದರ 1 ಕ್ವಿಂಟಾಲ್‌ಗೂ ಮಿಕ್ಕಿ ನಾಟಿ ಕೋಳಿಗಳಿಗೆ ಬೇಡಿಕೆ ಇದೆ. ಮಂಗಳೂರು ಸಹಿತ ಜಿಲ್ಲೆಯ ವಿವಿಧ ಕಡೆಗಳಿಂದ ನಾಟಿ ಕೋಳಿಗಾಗಿ ಬರುತ್ತಾರೆ. ಪತ್ತನಾಜೆಯ ಬಳಿಕ ಆರಾಧನೆಗಳು ಇರದಿರು ವುದರಿಂದ ಬೇಡಿಕೆ ಕಡಿಮೆಯಾಗುತ್ತದೆ. ಸೀಸನ್ ಅವಧಿಯಲ್ಲಿ ಯಾವ ಗಾತ್ರದ ಕೋಳಿ ಕೊಟ್ಟರೂ ತೆಗೆದುಕೊಳ್ಳುತ್ತಾರೆ ಎಂಬುದು ಪಡೀಲು ನಾಟಿ ಕೋಳಿ ವ್ಯಾಪಾರಿ ಮೋಹನ್ ಶೆಟ್ಟಿ ಅವರ ಅಭಿಪ್ರಾಯ. ಕೆ.ಜಿ.ಗೆ 360 ರೂ.
ಪ್ರಸ್ತುತ ಸಾದಾ ಊರಿನ ಕೋಳಿಗೆ ಕೆ.ಜಿ.ಯೊಂದರ 360 ರೂ.ಗೆ ಮಾರಾಟವಾಗುತ್ತಿದೆ. ಉಳಿದಂತೆ ಮಂಡ್ಯ, ಮೈಸೂರು ಭಾಗದ ಹಾಗೂ ತಮಿಳುನಾಡಿನಿಂದ ಆಮದಾಗುವ ಹೈಬ್ರೀಡ್ ನಾಟಿ ಕೋಳಿಗಳಿಗೆ ಕೆ.ಜಿ.ಯೊಂದರ 200ರಿಂದ 250 ರೂ. ತನಕ ಮಾರಾಟವಾಗುತ್ತದೆ. ಬೇಡಿಕೆಗೆ ಅನುಗುಣವಾಗಿ ಮೇ 23, 24ರಂದು ಈ ದರ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ಬಿಳಿ ಗರಿ ಕೋಳಿ ಬೇಡ
ದೈವಗಳಿಗೆ ಬಲಿ ಕೊಡುವ ಸಂದರ್ಭದಲ್ಲಿ ಹುಂಜವನ್ನೇ ಬಲಿ ಕೊಡಬೇಕು, ಸಂಪೂರ್ಣ ಬಿಳಿ ಗರಿಗಳನ್ನು ಹೊಂದಿರುವ ಕೋಳಿಯನ್ನು ಬಲಿ ಕೊಡಬಾರದು ಎಂಬ ನಂಬಿಕೆ ತುಳು ನಾಡಿನಲ್ಲಿದೆ. ಈ ಕಾರಣದಿಂದ ಒಂದು ಗರಿಯಾದರೂ ಬೇರೆ ಬಣ್ಣವನ್ನು ಹೊಂದಿರುವ ಕೋಳಿಯನ್ನೇ ಆಯ್ದುಕೊಳ್ಳುತ್ತಾರೆ. – ರಾಜೇಶ್ ಪಟ್ಟೆ