ಈ ಸುದ್ದಿ ಎಲ್ಲೆಡೆ ಹಬ್ಬಿದ್ದು, ಇದರಿಂದ ಶುಕ್ರವಾರ ಗ್ರಾಹಕರು ಬ್ಯಾಂಕಿನತ್ತ ಸುಳಿಯಲೇ ಇಲ್ಲ. ಈ ಕಾರಣಕ್ಕೆ ಬೆಳಗ್ಗೆ 11 ಗಂಟೆಯಿಂದ ಬಂದ್ ಮಾಡಲಾಯಿತು.
Advertisement
ಆಗಿದ್ದೇನು?ಇದೇ ಬ್ಯಾಂಕಿನ ಶಿರೂರು ಶಾಖೆಯ ಮ್ಯಾನೇಜರ್ ಒಬ್ಬರಿಗೆ ಪಾಸಿಟಿವ್ ಬಂದಿದ್ದು, ಅಲ್ಲಿನ ಮಹಿಳಾ ಸಿಬಂದಿಯೊಬ್ಬರು ಗುರುವಾರ ಒಂದು ದಿನದ ಮಟ್ಟಿಗೆ ಬದಲಿಯಾಗಿ ಹೆಮ್ಮಾಡಿಯ ಶಾಖೆಗೆ ಕೆಲಸಕ್ಕೆ ಬಂದಿದ್ದಾರೆ. ಆದರೆ ಆ ಸಿಬಂದಿಗೆ ಕೊರೊನಾ ಇರುವುದು ದೃಢವಾಗಿಲ್ಲ. ಹಾಗಾಗಿ ಆತಂಕ ಪಟ್ಟುಕೊಳ್ಳಬೇಕಾದ ಅಗತ್ಯವಿಲ್ಲ. ಈ ಬಗ್ಗೆ ಸರಿಯಾಗಿ ತಿಳಿದುಕೊಳ್ಳದೇ ಸುಳ್ಳು ಸಂದೇಶವನ್ನು ರವಾನಿಸಿದ್ದು ಗೊಂದಲಕ್ಕೆ ಕಾರಣವಾಗಿದೆ.
ಇಲ್ಲಿ ಸದ್ಯ ಐವರು ಸಿಬಂದಿ ಕಾರ್ಯ ನಿರ್ವಹಿಸುತ್ತಿದ್ದು, ಇವರು ಕೊರೊನಾ ಪಾಸಿಟಿವ್ ಬಂದ ವ್ಯಕ್ತಿಯ ಎರಡನೇ ಸಂಪರ್ಕ ಆಗಿರುವುದರಿಂದ ಸೀಲ್‌ಡೌನ್ ಮಾಡಬೇಕೆ ? ಅಥವಾ ಬೇಡವೇ ಎನ್ನುವ ಗೊಂದಲ ಉಂಟಾಗಿದ್ದು, ಈ ಬಗ್ಗೆ ತಾಲೂಕು ಆಡಳಿತದ ಆದೇಶಕ್ಕೆ ಕಾಯುವಂತಾಗಿದೆ.