Advertisement
5 ಲಕ್ಷ ಜನಸಂಖ್ಯೆ ಇರುವ ನಗರದ ಜನರ ದಾಹ ನೀಗಿಸುವ ಹೇಮಾವತಿ ಬುಗಡನಹಳ್ಳಿ ಕೆರೆಯಲ್ಲಿ ಖಾಲಿಯಾಗಿ ಒಂದು ತಿಂಗಳು ಕಳೆದಿತ್ತು. ನಗರದ ಜನರು ನೀರಿಗಾಗಿ ಪರಿತಪಿಸುತ್ತಿದ್ದರು. ಜಲಾಶಯಕ್ಕೆ ಹೆಚ್ಚು ನೀರು ಬಂದಿಲ್ಲ ಎನ್ನುವ ಕಾರಣದಿಂದ ಜುಲೈನಲ್ಲಿ ಬಿಡಬೇಕಾಗಿದ್ದ ನೀರು ಒಂದು ತಿಂಗಳು ತಡವಾಗಿ ಪ್ರವೇಶಿಸುತ್ತಿದೆ.
Related Articles
Advertisement
ಶನಿವಾರ ಪಾಲಿಕೆ ಅಧಿಕಾರಿಗಳು ಸೇರಿ ವಿವಿಧ ಅಧಿಕಾರಿಗಳು ಭೇಟಿ ನೀಡಿ ಕೆರೆಗೆ ನೀರು ಬರುವ ನಾಲೆಯ ಸ್ವಚ್ಛತೆ ಚುರುಕುಗೊಳಿಸಿ ಕಾಮಗಾರಿ ಮುಗಿಸಲು ಜೆಸಿಬಿಗಳ ಮೂಲಕ ಭರದಿಂದ ಕೆಲಸ ನಡೆಸಲಾಗಿದೆ. ತಿಪಟೂರು, ಗುಬ್ಬಿ ಮೂಲಕ ತುಮಕೂರಿನತ್ತ ಹೇಮಾವತಿ ನಾಲೆಯಲ್ಲಿ ಹರಿದು ಬರುತ್ತಿರುವುದನ್ನು ಕಂಡು ನಾಲೆಯ ಅಕ್ಕಪಕ್ಕದ ಹಳ್ಳಿಗಳ ರೈತರು ಖುಷಿಪಟ್ಟರು. ನಾಲೆಯ ಬಳಿ ಜನರು ಬರದಂತೆ ಪೊಲೀಸ್ ಅಧಿಕಾರಿಗಳು, ಸ್ಥಳೀಯ ಅಧಿಕಾರಿಗಳು ಬಂದೋಬಸ್ತ್ ಏರ್ಪಡಿಸಿ ದ್ದಾರೆ. ನೀರು ಎಲ್ಲಿಯೂ ಪೋಲಾಗದಂತೆ ನಾಲೆ ಯಲ್ಲಿ ಹರಿದು ಬರಲು ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಂಡಿದೆ. ಮೊದಲು ಕುಡಿಯುವ ನೀರು ಒದಗಿಸುವ ಕೆರೆ ತುಂಬಿಸಿ ನಂತರ ಉಳಿದ ಕೆರೆಗಳಿಗೆ ನೀರು ಹರಿಸಲು ಸೂಚನೆ ನೀಡಲಾಗಿದೆ.
ನೀರು ಶುದ್ಧೀಕರಿಸಿ ಕೊಡಲು ಸಿದ್ಧತೆ: ಸ್ಮಾರ್ಟ್‌ಸಿಟಿ ತುಮಕೂರಿನಲ್ಲಿ ಹೇಮಾವತಿ ನೀರು ಬುಗಡನಹಳ್ಳಿ ಕೆರೆಯಲ್ಲಿ ಖಾಲಿಯಾಗಿದ್ದ ಹಿನ್ನೆಲೆಯಲ್ಲಿ ಕಳೆದ ಒಂದು ತಿಂಗಳಿನಿಂದ ಕುಡಿ ಯುವ ನೀರಿಗೆ ಸಮಸ್ಯೆ ಉಂಟಾಗಿತ್ತು. ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಈಗ ಹೇಮಾವತಿ ಬುಗಡನ ಹಳ್ಳಿ ಕೆರೆಗೆ ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ಅ. 15ರೊಳಗೆ ಬರುವ ನೀರು ಶುದ್ಧೀಕರಿಸಿ ಜನರಿಗೆ ಕೊಡಲು ತುಮಕೂರು ಮಹಾನಗರ ಪಾಲಿಕೆ ಅಧಿಕಾರಿಗಳು ಸಿದ್ಧತೆಯಲ್ಲಿದ್ದಾರೆ.
● ಚಿ.ನಿ. ಪುರುಷೋತ್ತಮ್