Advertisement
ಏತ ನೀರಾವರಿ ಮೂಲಕ ನೀರು: ಇದೇ ವೇಳೆ ತಾಲೂಕಿನ ಹಲವು ಏತನೀರಾವರಿ ಮೂಲಕ ಕೆರೆ ಕಟ್ಟೆಗೆ ನೀರು ತುಂಬಿಸಲು ಕ್ಷೇತ್ರದ ಶಾಸಕ ಸಿ.ಎನ್. ಬಾಲಕೃಷ್ಣ ಈಗಾಗಲೇ ಸ್ವಿಚ್ಆನ್ ಮಾಡಿದ್ದು ಕೆರೆಗಳತ್ತ ನೀರು ಹರಿದು ಬರುತ್ತಿದೆ. ನವಿಲೆ, ಅಣತಿ, ಓಬಳಾಪುರ, ಕಾರೇಹಳ್ಳಿ ಸೇರಿದಂತೆ ಹವಲು ಭಾಗದಲ್ಲಿ ತೀವ್ರ ಬರದಿಂದ ಕಂಗ್ಗೆಟ್ಟಿದ್ದ ರೈತರು ಮುಖದಲ್ಲಿ ಕೊಂಚ ಸಂತಸ ಮೂಡಿದೆ.
Related Articles
Advertisement
ಜಿಲ್ಲೆಯ ಹಿತ ಕಾಪಾಡದ ರಾಜಕಾರಣಿಗಳು: ರಾಜ್ಯ ದಲ್ಲಿ ಯಾವುದೇ ಪಕ್ಷ ಅಧಿಕಾರದಲ್ಲಿ ಇರಲಿ ಆ ಜಿಲ್ಲೆ ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ಸಂಸದರು ಮಾತ್ರ ತಮ್ಮ ಪ್ರಭಾವ ಬಳಸಿಕೊಂಡು ಹೇಮಾವತಿ ನೀರನ್ನು ಪಡೆಯುವ ಮೂಲಕ ಅಲ್ಲಿನ ರೈತರಿಗೆ ಹಾಗೂ ಸಾರ್ವಜನಿಕ ಬಾಳಿಗೆ ಭಗೀರಥರಾಗುತ್ತಿದ್ದಾರೆ.
ಈ ಬಗ್ಗೆ ಜಿಲ್ಲೆಯ ಪ್ರಭಾವಿ ರಾಜ ಕಾರಣಿಗೆ ಮಾಹಿತಿ ಇದ್ದರೂ ಜಿಲ್ಲೆಯ ಹಾಗೂ ತಾಲೂಕಿನ ಏತನೀರಾವರಿ ಕಾಮಗಾರಿಯನ್ನು ಚುರುಕಾಗಿ ಮಾಡಿಸಿ ತಾಲೂಕಿನ ರೈತರ ಬಾಳಿಗೆ ಬೆಳಕಾಗದೆ ನಿರಾಸಕ್ತಿ ತೋರುತ್ತಿರುವುದು ವಿಪರ್ಯಾಸವೇ ಸರಿ.
ತಾಲೂಕಿನಲ್ಲಿ ಬರ ಪರಿಸ್ಥಿತಿ: ಹೇಮಾವತಿ ಅಣೆಕಟ್ಟೆ ಯಿಂದ ಎಡದಂಡೆ ನಾಲೆ ಹಾಗೂ ಶ್ರೀರಾಮದೇವರ ನಾಲೆ ಹೀಗೆ ತಾಲೂಕಿನಲ್ಲಿ ಎರಡು ನಾಲೆಗಳು ಹತ್ತಾರು ಕಿ.ಮೀ. ಉದ್ದದಲ್ಲಿ ಹರಿಯುತ್ತಿದ್ದು, ತಾಲೂಕು ಮಾತ್ರ ಪ್ರತಿ ವರ್ಷವೂ ಬರಗಾಲಕ್ಕೆ ತುತ್ತಾಗುತ್ತಿದೆ. ನಾಲೆ ಹರಿಯವ ಭಾಗದಲ್ಲಿ ಮಾತ್ರ ಕುಡಿವ ನೀರಿನ ಸಮಸ್ಯೆ ಇಲ್ಲ ಉಳಿದ ಕಡೆಯಲ್ಲಿ ಇಂದಿಗೂ ನೀರಿನ ಸಮಸ್ಯೆ ತಾಂಡವಾಡುತ್ತಿದೆ. ಏತ ನೀರಾವರಿ ಯೋಜನೆಗಳು ಮಾತ್ರ ಚುನಾವಣೆಗೆ ಸೀಮಿತವಾಗಿದೆ.
ಪೊಳ್ಳು ಭರವಸೆ: ಪ್ರತಿ ವಿಧಾನಸಭಾ ಚುನಾವಣೆ ಯಲ್ಲಿ ಎಚ್.ಡಿ.ರೇವಣ್ಣ ದಂಡಿಗನಹಳ್ಳಿ ಹೋಬಳಿ ಯನ್ನು ಸಂಪೂರ್ಣವಾಗಿ ನೀರಾವರಿ ಮಾಡುತ್ತೇನೆ ಎಂದು ಭರವಸೆ ನೀಡುತ್ತಾರೆ. ಇವರ ಭರವಸೆಗೆ ಮತದಾರ ಮಾರುಹೋಗಿ ರೇವಣ್ಣನ ಪರವಾಗಿ ನಿಲ್ಲುತ್ತಾರೆ. ಚುನಾವಣೆಯಲ್ಲಿ ಗೆದ್ದ ನಂತರ ಹೋಬ ಳಿಯ ಒಂದು ಕೆರೆಯನ್ನು ಈ ವರೆಗೆ ಪ್ರಯೋಗಿಕವಾಗಿ ತುಂಬಿಸಲು ಮನಸ್ಸು ಮಾಡುತ್ತಿಲ್ಲ.
ರಾಜಕೀಯ ನಿವೃತ್ತಿ ಯಾವಾಗ?: ಶಾಸಕ ಸ್ಥಾನಕ್ಕೆ ಆಯ್ಕೆಯಾಗಿ 6 ತಿಂಗಳಲ್ಲಿ ಕಾಚೇಹಳ್ಳಿ ಏತನೀರಾವರಿ ಕಾಮಗಾರಿ ಪೂರ್ಣ ಮಾಡುತ್ತೇನೆ. ಇಲ್ಲದೇ ಹೋದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ರೇವಣ್ಣ ಸ್ವಯಂ ಸವಾಲು ಹಾಕಿಕೊಂಡಿದ್ದರು.ವೇದಿಕೆ ಮೇಲೆ ಕುಳಿತು ಇವರ ಮಾತು ಆಲಿಸಿದ ಎಚ್.ಡಿ. ಕುಮಾರಸ್ವಾಮಿ ಕೂಡ ರಾಜ್ಯದಲ್ಲಿ ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಆರು ತಿಂಗಳಲ್ಲಿ ಕಾಚೇಹಳ್ಳಿ ಏತನೀರಾವರಿ ಮಾಡಿಯೇ ತಿರುತ್ತೇನೆ ಎಂದು ಭರವಸೆ ನೀಡಿದ್ದರು, ಕೊಟ್ಟ ಮಾತಿನಂತೆ ಸಹೋದರು ನಡೆದುಕೊಂಡಿಲ್ಲ ಎಂದು ಹೋಬಳಿ ಜನತೆ ಶಾಪ ಹಾಕುತ್ತಿದ್ದಾರೆ.
● ಶಾಮಸುಂದರ್ ಕೆ. ಅಣ್ಣೇನಹಳ್ಳಿ